ಕೈಕಂಬ : ಗುರುಪುರ ಕೈಕಂಬದ ಅನಾಥಾಶ್ರಮ `ಜೀವದಾನ’ದಲ್ಲಿ ಅನಾಥ ಮಕ್ಕಳಿಗೆ ಹಣ್ಣುಹಂಪಲು ವಿತರಿಸಿದ ದಕ್ಷಿಣ ಕನ್ನಡ ಜಿಲ್ಲಾ ಹಾಗೂ ಸ್ಥಳೀಯ ಮಹಿಳಾ ಕಾಂಗ್ರೆಸ್ ಪದಾಧಿಕಾರಿಗಳು ಮಹಿಳಾ ಕಾಂಗ್ರೆಸ್ ಘಟಕದ 36ನೇ ಸಂಸ್ಥಾಪನಾ ದಿನಾಚರಣೆ ಆಚರಿಸಿದರು. ಕಾರ್ಯಕ್ರಮದಲ್ಲಿ ಗುರುಪುರ ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

gur-sep-15-shalet pinto speaking-1 (2)

ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೊ ಮಾತನಾಡುತ್ತ, ಈ ಬಾರಿ `ಜೀವದಾನ’ ಸಂಸ್ಥೆಯಲ್ಲಿ ಜಿಲ್ಲಾ ಮಹಿಳಾ ಕಾಂಗ್ರೆಸ್ಸಿನ ಸಂಸ್ಥಾಪನಾ ದಿನಾಚರಣೆ ಆಚರಿಸಲಾಗುತ್ತಿರುವುದು ಪಕ್ಷದ ಕಾರ್ಯಕರ್ತರ ಮಾನವೀಯತೆ ನಿದರ್ಶನವಾಗಿದೆ. ಇಲ್ಲಿನ ಮಕ್ಕಳ ಮುಖದಲ್ಲಿ ನಗು ಕಾಣುತ್ತಲೇ, ಅವರೊಂದಿಗೆ ಒಂದು ದಿನ ಕಳೆಯುವುದು ನಮಗೆಲ್ಲರಿಗೆ ಸಂತೋಷದ ಸಂಗತಿಯಾಗಿದೆ. ಇಲ್ಲಿನ ಮಕ್ಕಳಿಗೆ ದೇವರು ಆರೋಗ್ಯ ಕರುಣಿಸಲಿ ಎಂದರು.ಕಂದಾವರ ಗ್ರಾಪಂ ಅಧ್ಯಕ್ಷೆ ವಿಜಯಾ ಗೋಪಾಲ ಸುವರ್ಣ ಮಾತನಾಡುತ್ತ, ಇದು ದೇವರ ಸೇವೆಯಾಗಿದೆ. ಅನಾಥ, ದೀನ-ದಲಿತರ ಸೇವೆ ಕಾಂಗ್ರೆಸ್ ಉಸಿರಾಗಿದೆ. ದೇಶವಾಸಿಗಳು ಮತ್ತೊಂದು ಬಾರಿ ನಮ್ಮಿಂದ ದೇಶ ಸೇವೆ ಬಯಸಿದ್ದಾರೆ ಎಂದರು.

gur-sep-15-congress padaadikaari-1

ದಕ ಜಿಪಂ ಸದಸ್ಯ(ಗುರುಪುರ) ಯು ಪಿ ಇಬ್ರಾಹಿಂ ಮಾತನಾಡುತ್ತ, ಮಹಿಳಾ ಕಾಂಗ್ರೆಸ್ಸಿಗರು ಒಂದು ಯೋಗ್ಯ ಸಂಸ್ಥೆಯಲ್ಲಿ ಕಾರ್ಯಕ್ರಮ ಹಮ್ಮಿಕೊಂಡು ಈ ದಿನಕ್ಕೆ ಹೆಚ್ಚು ಹೆಚ್ಚು ಅರ್ಥ ಕಲ್ಪಿಸಿದ್ದಾರೆ. ಅನಾಥ ಮಕ್ಕಳ ಬದುಕಿಗೆ ಆಸರೆಯಾಗಲು ಇತರ ಸಂಘ-ಸಂಸ್ಥೆಗಳಿಗೆ ಈ ಕಾರ್ಯಕ್ರಮ ಮಾದರಿಯಾಗಲಿ. ಇಲ್ಲಿನ ಮಕ್ಕಳು ಸದಾ ನಗುವಂತಾಗಲಿ ಎಂದು ಹಾರೈಸಿದರು.ಗುರುಪುರ ಕಾಂಗ್ರೆಸ್ ಬ್ಲಾಕ್ ಸಮಿತಿ ಅಧ್ಯಕ್ಷ ಸುರೇಂದ್ರ ಕಂಬಳಿ ಮಾತನಾಡಿ, `ಜೀವದಾನ’ವೆಂಬುದು ದೇವಸ್ಥಾನವಿದ್ದಂತೆ. ಅನಾಥ ಮಕ್ಕಳು ದೇವರಿಗೆ ಸಮಾನ. ಕಲಿಕೆಯೊಂದಿಗೆ ಇವರ ಜೀವನ ಸಾರ್ಥಕವಾಗಲಿ, ಇವರ ಮುಖದಲ್ಲೂ ಸದಾ ನಗು ಕಾಣುವಂತಾಗಲಿ ಎಂದರು.ತಾಪಂ ಸದಸ್ಯ ಸುನಿಲ್ ಜಿ, ಮಾಜಿ ಜಿಪಂ ಸದಸ್ಯ ಕೃಷ್ಣ ಅಮೀನ್ ಹಾಗೂ ಸ್ವಾಗತಿಸಿ, ವಂದಿಸಿದ ಗುರುಪುರ ಕಾಂಗ್ರೆಸ್ ಬ್ಲಾಕ್ ಮಹಿಳಾ ಸಮಿತಿ ಅಧ್ಯಕ್ಷೆ ಸೆಲಿನ್ ಫೆರ್ನಾಂಡಿಸ್ ಕಾರ್ಯಕ್ರಮದ ಮಹತ್ವದ ಬಗ್ಗೆ ಮಾತನಾಡಿದರು. ಈ ವೇಳೆ ಕಾಂಗ್ರೆಸ್ ಮಹಿಳಾ ಸದಸ್ಯೆಯರು `ಜೀವದಾನ’ ಮಕ್ಕಳಿಗೆ ಗೇಮ್ಸ್ ಆಯೋಜಿಸಿ, ಬಹುಮಾನ ವಿತರಿಸಿದರು.

gur-sep-15-shalet pinto speaking-1 (2) (1)

ಸಭೆಯಲ್ಲಿ ತಾಪಂ ಸದಸ್ಯ ಸಚಿನ್ ಅಡಪ, ಪುರುಷೋತ್ತಮ ಮಲ್ಲಿ, ಮಾಜಿ ತಾಪಂ ಸದಸ್ಯೆ ಅಸ್ಮತ್, ಪಂಚಾಯತ್ ಸದಸ್ಯರಾದ ಯಶವಂತ ಶೆಟ್ಟಿ, ಜಯಲಕ್ಷ್ಮೀ, ಶೋಭಾ ಅಶೋಕ್, ಗ್ಲಾಡಿಸ್ ಕ್ವಾಡ್ರಸ್, ಕವಿತಾ, ವೀಣಾ, ವಿಮಲಾ, ಎ ಕೆ ಅಶ್ರಫ್ ಅಡ್ಡೂರು, ಜೀವದಾನ ಸಂಸ್ಥೆಯ ಸಿಸ್ಟರ್ ಜಾನ್ಸಿ ಮತ್ತು ಸಿಸ್ಟರ್ ವಜ್ರ ಮತ್ತಿತರರಿದ್ದರು.

By Suddi9

Leave a Reply

Your email address will not be published. Required fields are marked *