ಬಂಟ್ವಾಳ:  ಬಂಟ್ವಾಳ ತಾಲೂಕಿನ ಪುರಸಭಾ ವ್ಯಾಪ್ತಿಯ ಭಂಡಾರಿ ಬೆಟ್ಟು ಪರಿಸರದ  ಮನೆಗಳಿಗೆ  ನ ಅನಿರೀಕ್ಷಿತ ವಾಗಿ ಸಿಡಿಲು ಬಡಿದು ಹಾನಿಯಾದ ಘಟನೆ  ಭಾನುವಾರ ಮಧ್ಯಾಹ್ನ  ಸಂಭವಿಸಿದೆ. ಭಂಡಾರಿಬೆಟ್ಟು ಗುಜ್ಕರೊಕ್ಕು ಲಾರೆನ್ಸ್ ರಾಡ್ರಿಗಸ್ ಹಾಗೂ ಸೈಮನ್ ರೋಡ್ರಿಗಸ್  ಎಂಬವರ ಮನೆಯ  ತೆಂಗಿನ ಮರ ಹಾಗೂ  ಬಾಳೆಗಿಡಗಳಿಗೆ  ಸಿಡಿಲು ಬಡಿದಿದ್ದು ಘಟನೆಯ  ತೀವ್ರತೆ ಗೆ ಲಾರೆನ್ಸ್ ರೋಡ್ರಿಗಸ್  ಹಾಗೂ ಸೈಮನ್ ರೋಡ್ರಿಗಸ್  ಅವರ ಮನೆಯ ಸಂಪೂರ್ಣ ವಿದ್ಯುತ್ ಸಂಪರ್ಕ ಸುಟ್ಟು ಹೋಗಿದೆ. 91104151-f2c8-4877-984b-60a56130ac3c

6fc95792-0b7b-4af0-a69b-190d211e62fbಮೀಟರ್ , ಸ್ವಿಚ್ ಬೋರ್ಡ್ ಗಳು, ಬಲ್ಬ್ ಗಳು ಸಿಡಿಲು ಹೊಡೆದ ರಭಸಕ್ಕೆ ಹೊರಗೆ ಎಸೆಯಲ್ಪಟ್ಟಿದೆ, ಟಿವಿ, ಪ್ರಿಡ್ಜ್ ಸಹಿತ ಅನೇಕ ವಿದ್ಯುತ್ ಉಪಕರಣಗಳು ಕೆಟ್ಟುಹೊಗಿದೆ. ಮೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಬೇಟಿ ನೀಡಿ ಕ್ರಮಕೈಗೊಂಡಿದ್ದಾರೆ. ಸ್ಥಳಕ್ಕೆ ಬಂಟ್ವಾಳ  ಕಂದಾಯ ಇಲಾಖೆಯ ಆಡಳಿತ ಶಾಖೆಯ ಸೀತಾರಾಮ ಕಮ್ಮಾಜೆ, ಹಾಗೂ  ಸದಾಶಿವ ಕೈಕಂಬ,  ಬೇಟಿ ನೀಡಿ ಪರಿಶೀಲನೆ ನಡೆಸಿ ಮಹಜರು ಮಾಡಿದರು.

ಚಿತ್ರಎಸ್ ಆರ್ ಬಿಸಿರೋಡು

By Suddi9

Leave a Reply

Your email address will not be published. Required fields are marked *