ಮಂಗಳೂರು: ಚಕ್ರಪಾಣಿ ಸೇವಾ ಸಮಿತಿ (ರಿ) ಇದರ ಆಶ್ರಯದಲ್ಲಿ 29ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ವು ಸೆ.02 ರಿಂದ  ಸೆ. 03ವರೆಗೆ ಶ್ರೀ ಕ್ಷೇತ್ರ ಚಕ್ರಪಾಣಿ ಗೋಪಿನಾಥ ದೇವಸ್ಥಾನದಲ್ಲಿ ಜರಗಲಿರುವುದು.
ಸೆ.02ರಂದು (ಸೋಮವಾರ): ಬೆಳಿಗ್ಗೆ 9.30ಕ್ಕೆ ಶ್ರೀ ಗಣೇಶ ದೇವರ ವಿಗ್ರಹ ಪ್ರತಿಷ್ಠೆ, 10.00ರಿಂದ ಸಾಮೂಹಿಕ ಗಣಯಾಗ ಆರಂಭ ಹಾಗೂ ಗಣೇಶನ ಚಿತ್ರ ಬಿಡಿಸುವ ಸ್ಪರ್ಧೆ, ಸಂಜೆ 6.00ಕ್ಕೆ ನ್ರತ್ಯ ಸಿಂಚನ – ನ್ರತ್ಯ ಕಾರ್ಯಕ್ರಮ , 6.30ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮ , 7.30ರಿಂದ “ಒರ್ತಿ ಬಿರ್ಸೆದಿ” ತುಳು ಜಾನಪದ ಶೈಲಿಯ ನ್ರತ್ಯ ರೂಪಕ, ರಾತ್ರಿ 9.30ರಿಂದ ವಿಶೇಷ ಸರ್ವಾಲಂಕಾರ ರಂಗಪೂಜೆ, ಮಹಾ ಮಂಗಳಾರತಿ, ಪ್ರಸಾದ ವಿತರಣೆ .

240e1897-a7c3-4783-83b0-66aa81b88e3d
ಸೆ. 03ರಂದು ಮಂಗಳವಾರ ಬೆಳಿಗ್ಗೆ 10.00ರಿಂದ ಭಜನಾ ಕಾರ್ಯಕ್ರಮ, ಮಧ್ಯಾಹ್ನ 12.30ಕ್ಕೆ ಸಾಮೂಹಿಕ ರಾಶಿ ಅಪ್ಪದ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ , 1.00ಕ್ಕೆ ಸಾರ್ವಜನಿಕ ಅನ್ನ ಸಂತರ್ಪಣೆ, ಸಂಜೆ 3.00ರಿಂದ ಭಜನಾ ಕಾರ್ಯಕ್ರಮ, ಸಂಜೆ 7.00ಕ್ಕೆ ಮಹಾಮಂಗಳಾರತಿ, ಶೋಭಾಯಾತ್ರೆ ಆರಂಭ, ರಾತ್ರಿ ಕ್ಷೇತ್ರಕ್ಕೆ ತಲುಪಿ ಶ್ರೀ ಕ್ಷೇತ್ರದ ಚಕ್ರತೀರ್ಥದಲ್ಲಿ ಜಲಸ್ತಂಭನ.ಎಂದು ಚಕ್ರಪಾಣಿ ಸೇವಾ ಸಮಿತಿ ಯ ಪ್ರಕಟನೆ ತಿಳಿಸಿದೆ.

By suddi9

Leave a Reply

Your email address will not be published. Required fields are marked *