ಕೈಕಂಬ : ಇತ್ತೀಚಿನ ಧಾರಾಕಾರ ಮಳೆ-ಗಾಳಿಗೆ ಸಂಭವಿಸಿದ ಪ್ರವಾಹ, ಗುಡ್ಡೆ ಕುಸಿತದಂತಹ ಪ್ರಕೃತಿ ವಿಕೋಪದಿಂದ ಮನೆ, ಬೆಳೆ ಕಳೆದುಕೊಂಡ ಸಂತ್ರಸ್ತರಿಗೆ ಆ. 22ರಂದು ಕಂದಾವರ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಪರಿಹಾರ ಚೆಕ್ ವಿತರಿಸಲಾಯಿತು.
ಕಂದಾವರ ಗ್ರಾಮ ಪಂಚಾಯತ್ ಅಧ್ಯಕ್ಷೆ ವಿಜಯಾ ಗೋಪಾಲ ಸುವರ್ಣ ಅಧ್ಯಕ್ಷತೆ ವಹಿಸಿದ್ದು, ವೇದಿಕೆಯಲ್ಲಿ ದ ಕ ಜಿಪಂ ಸದಸ್ಯರಾದ ಜನಾರ್ದನ ಗೌಡ, ಯು ಪಿ ಇಬ್ರಾಹಿಂ, ತಾಪಂ ಸದಸ್ಯರಾದ ಸುನಿಲ್, ನಾಗೇಶ್ ಶೆಟ್ಟಿ ಉಪಸ್ಥಿತರಿದ್ದರು. ಗುರುಪುರ ಹೋಬಳಿ ನಾಡ ಕಚೇರಿಯ ಉಪ ತಹಶೀಲ್ದಾರ್ ಶಿವಪ್ರಸಾದ್ ಸಂತ್ರಸ್ತರ ಪಟ್ಟಿ ಓದಿ ಹೇಳಿದರು. ಗ್ರಾಮ ಲೆಕ್ಕಿಗರು ಹಾಗೂ ಇತರ ಸಿಬ್ಬಂದಿ ಸಹಕರಿಸಿದರು. ಒಟ್ಟು 6,62,550 ರೂ ಮೊತ್ತದ ಚೆಕ್ ವಿತರಿಸಲಾಯಿತು.
ಕಂದಾವರ 6, ಕೊಂಪದವು 3, ಅದ್ಯಪಾಡಿ 30, ಕೊಳಂಬೆ, ಬಡಗಎಡಪದವು 1, ತಿರುವೈಲು 1, ತೆಂಕಎಡಪದವು 2, ಮೂಡುಪೆರಾರ 2, ಉಳಾಯಿಬೆಟ್ಟು 5 ಹಾಗೂ ಗುರುಪುರ ಮೂಳೂರು ಸೈಟಿನ ಒಬ್ಬರಿಗೆ ಪರಿಹಾರ ಚೆಕ್ ವಿತರಿಸಲಾಯಿತು.
