ಪರ್ಕಳ: ಭಾರತೀಯ ಜೇಸಿಸ್ ವಲಯ ಹದಿನೈದರಂದು ಜೇಸಿಐ ರಾಷ್ಟ್ರೀಯ ಅಧ್ಯಕ್ಷ ಜೇಸಿಐ ಸೆನೆಟರ್ ಶಿರೀಶ್ ದುಂಡೂರವರ ಅಧಿಕೃತ ಭೇಟಿಯ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಉಡುಪಿ ಜಿಲ್ಲಾ ಕಚೇರಿಗೆ ಜೇಸಿಐ ಪರ್ಕಳದ ವತಿಯಿಂದ ಜಲ ಶುದ್ಧೀಕರಣ ಯಂತ್ರವನ್ನು ಕೊಡುಗೆಯಾಗಿ ನೀಡಲಾಯಿತು.
ಈ ಸಂದರ್ಭದಲ್ಲಿ ವಲಯಾಧ್ಯಕ್ಷ ಜೇಸಿ ಅಶೋಕ್ ಚೂoತಾರ್, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ವಸಂತ ಕುಮಾರ್, ವಲಯ ಉಪಾಧ್ಯಕ್ಷರುಗಳಾದ ಜೇಸಿ ದೇವೇಂದ್ರ ನಾಯಕ್, ಜೇಸಿ ಅಬ್ದುಲ್ ಜಬ್ಬಾರ್ ಸಾಹೇಬ್, ಜೇಸಿ ಮಕರಂದ ಸಾಲ್ಯಾನ್, ಜೇಸಿ ದಾಮೋದರ ಪಾಟಾಳಿ, ವಲಯದ ಆಡಳಿತ ವಿಭಾಗದ ನಿರ್ದೇಶಕ ಜೇಸಿ ಪ್ರಶಾಂತ ಕುಮಾರ್ ರೈ, ವಲಯ ಕಾರ್ಯದರ್ಶಿ ಜೇಸಿ ರಾಘವೇಂದ್ರ ಕರ್ವಾಲು, ವಲಯಾಧಿಕಾರಿಗಳಾದ ಜೇಸಿ ಆಶಾ ಬಿ., ಶ್ರೀನಿವಾಸ್, ಘಟಕಾಧ್ಯಕ್ಷೆ ಜೇಸಿ ವಿನುತಾ, ಪೂರ್ವಾಧ್ಯಕ್ಷರುಗಳಾದ ರಾಜೇಶ್ ಡಿ ಶೆಣೈ, ನರೇಂದ್ರ ಶೆಟ್ಟಿಗಾರ್, ಜೀವನ್, ಕಾರ್ಯದರ್ಶಿ ಪಲ್ಲವಿ, ಜೇಸಿ ಬಾಬು, ಜೇಸಿ ರೋಹಿತ್ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

