ಬಂಟ್ವಾಳ: ಹಿಂದೂ ಜಾಗರಣಾ ವೇದಿಕೆ ಬಂಟ್ವಾಳ ತಾಲೂಕು ಘಟಕದ ಆಶ್ರಯದಲ್ಲಿ ಆಖಂಡ ಭಾರತ ಸಂಕಲ್ಪದ ದಿನದ ಪ್ರಯುಕ್ತಪಂಜಿನ ಮೆರವಣಿಗೆಯು ಬುಧವಾರ ರಾತ್ರಿ ಬಿ.ಸಿ.ರೋಡಿನಲ್ಲಿ ನಡೆಯಿತು.ಕೈಕಂಬ ದ್ವಾರದ ಬಳಿಯಿಂದ ಹೊರಟ ಮೆರವಣಿಗೆ ಬಿ.ಸಿ.ರೋಡ್ ರಾಜಾರಸ್ತೆಯಲ್ಲಿ ಸಾಗಿ ಬಂದು ಬ್ರಹ್ಮಶ್ರೀ ನಾರಾಯಣಗುರು ವೃತ್ತದಲ್ಲಿ ತಿರುಗಿ ಸರ್ವಿಸ್ ರಸ್ತೆಯ ಮೂಲಕ ಬಂದು ಶ್ರೀ ರಕ್ತೇಶ್ವರಿ ದೇವಸ್ಥಾನದ ಬಳಿ ಸಂಪನ್ನಗೊಂಡಿತು.ಬಳಿಕ ಸಭಾ ಕಾರ್ಯಕ್ರಮ ನಡೆಯಿತು

