ಬಂಟ್ವಾಳ: ತಾಲೂಕಿನ ಬಾಳ್ತಿಲ ಗ್ರಾಮದ ವಸಂತಿ ಆಚಾರ್ಯ ಎಂಬುವವರ ಮೇಲೆ ಅಡಿಕೆ ಮರಬಿದ್ದು ಬೆನ್ನುಹುರಿಗೆ ಗಾಯವಾಗಿ ಎದ್ದೇಳಲಾಗದ ಅಸಹಾಯಕ ಸ್ಥಿತಿಯಲ್ಲಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಮಂಗಳವಾರ ಗಾಯಾಳುವಿನ ಮನೆಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.
ವೈದ್ಯಕೀಯ ಚಿಕಿತ್ಸೆಗೆ ವೈಯುಕ್ತಿಕ ಧನಸಹಾಯವನ್ನು ಮಾಡಿದರು, ಮಹಿಳೆಯ ಚಿಕಿತ್ಸೆಗೆ 10 ಲಕ್ಷ ರೂವರೆಗೆ ಹಣದ ಅಗತ್ಯವಿದ್ದು ,ತೀವ್ರ ಬಡತನದಲ್ಲಿರುವ ಕುಟುಂಬಕ್ಕೆ ನೆರವಿನ ಅಗತ್ಯವಿದೆ.ಈ ಪ್ರಕರಣವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಮುಖ್ಯಮಂತ್ರಿಯವರ ಪರಿಹಾರ ನಿಧಿಯಿಂದಲೂ ಗರಿಷ್ಠ ಪ್ರಮಾಣದ ನೆರವನ್ನು ಕೊಡಿಸಲು ಪ್ರಯತ್ನಿಸುವುದಾಗಿ ಶಾಸಕ ರಾಜೇಶ್ ನಾಯ್ಕ್ ಭರವಸೆ ನೀಡಿದರು. 
ಈ ಸಂದರ್ಭದಲ್ಲಿ ಮಾಜಿ ಜಿಪಂ ಸದಸ್ಯ ಚೆನ್ನಪ್ಪ ಕೋಟ್ಯಾನ್ , ಜಿಲ್ಲಾ ಬಿಜೆಪಿ ಎಸ್ಸಿ ಮೋರ್ಚಾದ ಅಧ್ಯಕ್ಷ ದಿನೇಶ್ ಅಮ್ಟೂರು,ಶಿವರಾಜ್, ಮಾಜಿ ತಾಪಂ ಸದಸ್ಯ ಮೋಹನ್ ಪಿ.ಎಸ್, ಬಾಳ್ತಿಲ ಗ್ರಾ. ಪಂ.ಅಧ್ಯಕ್ಷ ವಿಠಲನಾಯ್ಕ್,ಪೂರ್ಣಿಮಾ,ಶರತ್, ತಾಪಂ ಮಾಜಿ ಉಪಾಧ್ಯಕ್ಷ ಆನಂದ ಎ.ಶಂಭೂರು,ಉದಯ ಶಾಂತಿಲ,ರತ್ನಾಕರ ಶೆಟ್ಟಿ ,ವಿಶ್ವನಾಥ ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.
