ಬಂಟ್ವಾಳ:ಪ್ರವಾಹದಿಂದ ಹಾನಿಗೀಡಾದ ಬಂಟ್ವಾಳ ತಾಲೂಕಿನ ನಾವೂರು ಗ್ರಾ.ಪಂ.ನ ನಾವೂರು, ಸಜೀಪ, ಬಾಳ್ತಿಲ ಮೊದಲಾದೆಡೆ ಹಾನಿಗೊಳಗಾದ ಪ್ರದೇಶಗಳಿಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ರವಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.IMG-20190811-WA0091

ನಾವೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಸುಮಾರು 57 ಮನೆಗಳಿಗೆ ನದಿ ನೀರು ನುಗ್ಗಿದ್ದು, 125 ಕ್ಕೂ ಮಿಕ್ಕಿ ಸಂತ್ರಸ್ತರಿಗೆ ಮೂರು ಕಡೆ ಪುನರ್ವಸತಿ ಕೇಂದ್ರ ಕಲ್ಪಿಸಲಾಗಿತ್ತು. ಶನಿವಾರ ರಾತ್ರಿ ಪ್ರವಾಹ ಇಳಿದಿದ್ದು, ಎರಡು ದಿನಗಳ ಕಾಲ ಪುನರ್ವಸತಿ ಕೇಂದ್ರದಲ್ಲಿ ತಂಗಿದ್ದ ಸಂತ್ರಸ್ತರು ರವಿವಾರ ಮನೆಗಳಿಗೆ ತೆರಳಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡರು. ಬಂಟ್ವಾಳ ಶಾಸಕ ರಾಜೇಶ್ ನಾೈಕ್ ಉಳಿಪ್ಪಾಡಿ ಅವರು ರವಿವಾರ ಮತ್ತೆ ನೆರೆ ಪೀಡಿತ ನಾವೂರು ಗ್ರಾಮದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಸ್ವಚ್ಛತೆಯ ಬಗ್ಗೆ ಪರಿಶೀಲನೆ ನಡೆಸಿದರಲ್ಲದೆ ಅ„ಕಾರಿಗಳಿಗೆ ಈ ಬಗ್ಗೆ ಕ್ರಮ ಕೈಗೊಳ್ಳಲು ಮತ್ತು ನೆರೆಯಿಂದ ಹರಡಬಹುದಾದ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಮುಂಜಾಗ್ರತಾ ಕ್ರಮ ಕೈಗೊಳ್ಳಲು ಸೂಚಿಸಿದರು.ಗ್ರಾ.ಪಂ. ವತಿಯಿಂದ ಪರಿಸರದಲ್ಲಿ ರೋಗ ರುಜಿನಗಳು ಹರಡದಂತೆ ಬ್ಲೀಚಿಂಗ್ ಪೌಡರ್ ಸಿಂಪಡಿಸಲಾಯಿತು.1108pkt3

ಈ ಸಂದರ್ಭದಲ್ಲಿ ಪುರಸಭಾ ಸದಸ್ಯಗೋವಿಂದ ಪ್ರಭು, ಕ್ಷೇತ್ರ ಬಿಜೆಪಿ ಅಧ್ಯಕ್ಷ ಬಿ.ದೇವದಾಸ ಶೆಟ್ಟಿ, ಗ್ರಾ.ಪಂ.ಸದಸ್ಯರಾದ ಸದಾನಂದ ನಾವೂರು, ಯೋಗೀಶ್,ಪಿಡಿಒ ರಚನ್ ಕುಮಾರ್, ಗ್ರಾಮಕರಣಿಕ ಕುಮಾರ್ ಟಿ.ಸಿ.,ಪ್ರಮುಖರಾದ ಗಣೇಶ್ ರೈ ಮಾಣಿ, ನಂದರಾಮ್ ರೈ, ರಮಾನಾಥ ರಾಯಿ, ಪವನ್‍ಕುಮಾರ್ ಮತ್ತು ಸ್ಥಳೀಯರು ಉಪಸ್ಥಿತರಿದ್ದರು.ಮನೆಗಳಿಗೆ ಹಾನಿ: ನಾವೂರು ಗ್ರಾ.ಪಂ. ವ್ಯಾಪ್ತಿಯ ಕನಪಾದೆ ದಿ. ಕನಪಾದೆ ರಾಜೇಶ್ ಬಂಟ್ವಾಳ ಅವರ ಮನೆಯ ಒಂದು ಭಾಗದ ಗೋಡೆ ಕುಸಿದಿದೆ. ಇಲ್ಲಿನ ಸೀತು ಅವರ ಮನೆಗೆ ಸಿಡಿಲು ಬಡಿದು ಗೋಡೆ ಬಿರಕು ಬಿಟ್ಟಿದೆ.

IMG-20190811-WA0098
ಸಜೀಪ ಮೂಡ ಗ್ರಾಮದ ನಗ್ರಿಯಲ್ಲಿ ಭೂಕುಸಿತದಿಂದಾಗಿ ಕೂಸಪ್ಪ ನಾೈಕ್ ಎಂಬವರಿಗೆ ಸೇರಿದ ಸುಮಾರು ನೂರೈವತ್ತಕ್ಕೂ ಮಿಕ್ಕಿ ಅಡಿಕೆ ಮರಗಳು ಧರಾಶಾಯಿಯಾಗಿದ್ದು, ಇದನ್ನು ಪರಿಶೀಲಿಸಿದ ಶಾಸಕ ರಾಜೇಶ್ ನಾಯ್ಕ್ ಅವರು ತೋಟಗಾರಿಕಾ ಇಲಾಖೆಯನ್ನು ಸಂರ್ಪಿಸಿ ನಷ್ಟದ ಬಗ್ಗೆ ಅಂದಾಜಿಸುವಂತೆ ಸೂಚಿಸಿದರು. ಹಾಗೇಯೇ ಬಾಳ್ತಿಲ ಗ್ರಾಮದ ಕುದ್ರೆಬೆಟ್ಟು ಶ್ರೀ ಮಣಿಕಂಠ ಭಜನ ಮಂದಿರದ ಮೇಲೆ ಗುಡ್ಡ ಕುಸಿದು ಹಾನಿಯಾಗಿರುವುದನ್ನು ಅವರು ಪರಿಶೀಲನೆ ನಡೆಸಿದರು.ಈ ಸಂದರ್ಭದಲ್ಲಿ ಕ್ಷೇತ್ರ ಸಮಿತಿ ಅಧ್ಯಕ್ಷ ಬಿ.ದೇವದಾಸ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *