ಬಂಟ್ವಾಳ: ವಿಧಾನ ಪರಿಷತ್ ಸದಸ್ಯ,ಮಾಜಿ ಸಚಿವ  ಕೋಟ ಶ್ರೀನಿವಾಸ್  ಪೂಜಾರಿ ಅವರು ನರಿಕೊಂಬು ಗ್ರಾಮ ಪಂಚಾಯತ್ ಕಚೇರಿಗೆ ಶನಿವಾರ ಭೇಟಿ ನೀಡಿದರು.   ಈ ಸಂದರ್ಭ ಪಂಚಾಯತ್ ನ ಅಭಿವೃದ್ದಿ ಕಾರ್ಯಗಳ ಬಗ್ಗೆ ಪಿಡಿಒ ಅವರಿಂದ ಮಾಹಿತಿ ಪಡೆದರು.ಬಡವರಿಗೆ  ಭೂಮಿಯ ಹಕ್ಕು ಗಮನಿಸದೆ ಮಾನವೀಯ ದೃಷ್ಟಿಯಿಂದ ಮನೆ ನಿರ್ಮಾಣಕ್ಕೆ ಅನುವು ಮಾಡಿಕೊಡುವಂತೆ ಕೋಟಾ ಶ್ರೀನಿವಾಸ ಪೂಜಾರಿ ಸೂಚಿಸಿದರು.IMG-20190810-WA0375 (1)

ಬಳಿಕ ನರಿಕೊಂಬುಗ್ರಾಮ ನಾಟಿ ಎಂಬಲ್ಲಿ ಮಳೆಯಿಂದ ಗುಡ್ಡೆ ಜರಿದ ಹಾಗೂ ಬರೆ ಜರಿದು  ಹಾನಿಗೊಳಗಾದ ದೇವರಾಜ್ ಅವರ ಮನೆಯನ್ನು ಪರಿಶೀಲಿಸಿದರು.ಹಾಗೆಯೇ ನಾಯಿಲ ಎಂಬಲ್ಲಿ ನೆರೆಪೀಡಿತ ಸ್ಥಳಕ್ಕೆ ಭೇಟಿ ನೀಡಿ ರಸ್ತೆ ಸಂಪರ್ಕ ಕಡಿತಗೊಂಡಿರುವುದನ್ನು ವೀಕ್ಷಿಸಿದರು.

IMG-20190810-WA0357ಈ ಸಂದರ್ಭ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ, ಜಿ.ಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಜಿಪಂಸದಸ್ಯೆ ಕಮಾಲಾಕ್ಷಿ ಪೂಜಾರಿ, ನರಿಕೊಂಬು ಗ್ರಾಪಂ ಅಧ್ಯಕ್ಷ ಯಶೋಧರ ಕರ್ಬೆಟ್ಟು, ತಾಪಂ ಸದಸ್ಯ  ಪ್ರಭಾಕರ ಪ್ರಭು, ತಾಪಂ ಮಾಜಿ ಉಪಾಧ್ಯಕ್ಷ ಆನಂದ ಶಂಭೂರು,ಪ್ರೇಮನಾಥ ಶೆಟ್ಟಿ,ಪಂಚಾಯತ್ ಸದಸ್ಯರು,ಪ್ರಕಾಶ್ ಅಂಚನ್ ಮೊದಲಾದವರಿದ್ದರು.

By Suddi9

Leave a Reply

Your email address will not be published. Required fields are marked *