ಬಂಟ್ವಾಳ: ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಯು.ರಾಜೇಶ್ ನಾಯ್ಕ್ ಅವರನ್ನೊಳಗೊಂಡ ತಂಡ ಶನಿವಾರ ಬಂಟ್ವಾಳದ ವಿವಿಧ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಬಂಟ್ವಾಳ ಶ್ರೀತಿರುಮಲ ವೆಂಕಟರಮಣ ದೇವಸ್ಥಾನದ ಮುಂಭಾಗ ಹರಿಯುತ್ತಿರುವ ನೇತ್ರಾವತಿನದಿ ತೀರ,ಬಡ್ಡಕಟ್ಟೆ ಪರಿಸರಕ್ಕೆ ಭೇಟಿ ನೀಡಿ ಪರಿಸರದ ಅಂಗಡಿ ಮಾಲಕರು,ಸಂತ್ರಸ್ಥರಿಂದ ಮಾಹಿತಿ ಪಡೆದರು. ಬಳಿಕ ಬಂಟ್ವಾಳ ಪ್ರವಾಸಿ ಮಂದಿರದ ಪುನರ್‌ವಸತಿಕೇಂದ್ರದಲ್ಲಿ ತಂಗಿದ್ದ ಸಂತ್ರಸ್ಥರನ್ನು ಭೇಟಿಯಾಗಿ ಅಹವಾಲು ಆಲಿಸಿದರು.
ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ವಿವಿದೆಡೆ ನೆರೆಯಿಂದ ಸಿಲುಕಿದ ಜನರನ್ನು ರಕ್ಷಣೆ ಮಾಡುವ ಕಾರ್ಯ ಶಾಸಕ ರಾಜೇಶ್ ನಾಯ್ಕ್ ಮತ್ತು ಕಾರ್ಯಕರ್ತರ ತಂಡ ಹಾಗೂ ತಾಲೂಕು ಅಧಿಕಾರಿಗಳ ತಂಡ ಪ್ರತ್ಯೇಕವಾಗಿ ರಕ್ಷಣಾ ಕಾರ್ಯ ದಲ್ಲಿ ನಿರತವಾಗಿದೆ.ಶಾಸಕರ ಕಚೇರಿಯಲ್ಲಿ ಹೆಲ್ಪ್ ಲೈನನನ್ನು ತೆರೆಯಲಾಗಿದೆ ಸಮಸ್ಯೆಗಳು ಉಂಟಾದರೆ ಇಲ್ಲಿಗೆ ಸಂಪರ್ಕಿಸಿ ಪರಿಹಾರಕಂಡುಕೊಳ್ಳಬಹುದಾಗಿದೆ ಎಂದರು.
ಬಂಟ್ವಾಳದ ಮೂರು ಕಡೆಗಳಲ್ಲಿ ಶಾಸಕರ ನೇತೃತ್ವದಲ್ಲಿ ಪುನರ್ ವಸತಿ ಕೇಂದ್ರ ಗಳನ್ನು ತೆರೆಯಲಾಗಿದೆ. ಕೇಂದ್ರ ದ ಎನ್.ಡಿ.ಅರ್.ಎಪ್.ಹಾಗೂ ಅಗ್ನಿಶಾಮಕ ದಳ, ಪೋಲೀಸ್ ಸಿಬ್ಬಂದಿಗಳು ತಾಲೂಕಿನ ಅಧಿಕಾರಿ ಗಳು ಪರಿಹಾರ ಕಾರ್ಯದಲ್ಲಿ ನಿರತರಾಗಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕ್ಷೇತ್ರ ಸಮಿತಿ ಅಧ್ಯಕ್ಷ ದೇವದಾಸ ಶೆಟ್ಟಿ , ಪುರಸಭಾ ಸದಸ್ಯ ಗೋವಿಂದ ಪ್ರಭು,ಪುರುಷೋತ್ತಮ ಶೆಟ್ಟಿ ವಾಮದಪದವು, ತಾಪಂ ಸದಸ್ಯ ಗಣೇಶ್ ಸುವರ್ಣ, ರಮಾನಾಥ ಪೈ, ಲೋಹಿತ್ ಪನೋಲಿಬೈಲು, ರಮಾನಾಥ ರಾಯಿ,ಪವನ್ ಕುಮಾರ್ ಶೆಟ್ಟಿ ಮುತ್ತೂರು,ಗಣೇಶ್ ರೈ ಮಾಣಿ,ಪ್ರಕಾಶ್ ಅಂಚನ್ ,ಮನೋಜ್ ಕೋಟ್ಯಾನ್ ಮೊದಲಾದವರಿದ್ದರು .
