ಕೋಲಾರ: ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ತಿನ್ನುವ ಅನಕ್ಕೆ ಬರವಿದ್ದರೂ ಹಳ್ಳಿ ಹಳ್ಳಿ ಬೀದಿಗಳಲ್ಲಿ ಅಬಕಾರಿ ಪರವಾನಿಗಿ ಪಡೆಯದೇ ಪೆಟ್ಟಿಗೆ ಅಂಗಡಿ, ಟಿ ಸ್ಟಾಲ್, ಚಿಲ್ಲರೆ ಅಂಗಡಿ ಮನೆಗಳಲ್ಲೂ ಹಾಗೂ ರಾಷ್ಟ್ರೀಯ ಹೆದ್ದಾರಿ ಡಾಬಾ ಹಾಗೂ ಹಳ್ಳಿಗಳಲ್ಲಿ ಮಧ್ಯೆ ಮಾರಾಟ ರಾಜಾರೋಷವಾಗಿ ಅಧಿಕಾರಿಗಳ ಭಯವಿಲ್ಲದೆ, ನಡೆಯುತ್ತಿದೆ ಇದನ್ನು ಹತೋಟಿಗೆ ತರಬೇಕಾದ ಅಬಕಾರಿ ಇಲಾಖೆ ಕಣ್ಣುಮುಚ್ಚಿ ಕುಳಿತಿರುವ ಅಧಿಕಾರಿಗಳನ್ನು ಖಂಡಿಸಿ ರೈತ ಸಂಘದಿಂದ ಆ. 12 ರಂದು ಸೋಮವಾರದಂದು ಅಬಕಾರಿ ಇಲಾಖೆ ಮುತ್ತಿಗೆ ಹಾಕಲು ಜಿಲ್ಲಾ ರೈತ ಸಂಘದ ಸಭೆಯಲ್ಲಿ ತಿರ್ಮಾನಿಸಲಾಯಿತು.
ಸಭೆಯಲ್ಲಿ ಮಾತನಾಡಿದ ರಾಜ್ಯ ಉಪಾಧ್ಯಕ್ಷ ಕೆ. ನಾರಾಯಣಗೌಡ ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ತಿನ್ನುವ ಅನಕ್ಕೆ ಬರವಿದ್ದರೂ ಹಳ್ಳಿ ಹಳ್ಳಿ ಬೀದಿಗಳಲ್ಲಿ ಅಬಕಾರಿ ಪರವಾನಿಗಿ ಪಡೆಯದೇ ಪೆಟ್ಟಿಗೆ ಅಂಗಡಿ, ಟಿ ಸ್ಟಾಲ್, ಚಿಲ್ಲರೆ ಅಂಗಡಿ ಮನೆಗಳಲ್ಲೂ ಹಾಗೂ ರಾಷ್ಟ್ರೀಯ ಹೆದ್ದಾರಿ ಡಾಬಾಗಳಲ್ಲಿ ರಾಜರೋಷವಾಗಿ ಅಧಿಕಾರಿಗಳ ಭಯವಿಲ್ಲದೆ, ನಡೆಯುತ್ತಿದೆ. ಗ್ರಾಮೀಣ ಪ್ರದೇಶದ ಜನ ಅಧಿಕಾರಿಗಳಿಗೆ ಇಡೀ ಶಾಪ ಹಾಕುತ್ತಿದ್ದಾರೆ. ಮಾಜಿ ಜಿಲ್ಲಾ ಉಸ್ತುವಾರಿ ಸಚಿವರಾದ ರಮೇಶ್ ಕುಮಾರ್‍ರವರು ಸುಮಾರು 2 ವರ್ಷ ಹಿಂದೆ ಯಾವುದೇ ರಾಷ್ಟ್ರೀಯ ಹೆದ್ದಾರಿ ಡಾಬಾಗಳಲ್ಲಿ ಹಾಗೂಹಳ್ಳಿಗಳಲ್ಲಿ ಮಧ್ಯ ಮಾರಾಟ ನೀಷೇಧ ಮಾಡುವಂತೆ ಅಬಕಾರಿ ಅಧಿಕಾರಿಗಳಿಗೆ ಆದೇಶ ಮಾಡಿದ್ದರೂ ಆದರೇ ಅಧಿಕಾರಿಗಳ ತಿಂಗಳ ಮಾಮೂಲಿ ನಿಂತಿದ್ದರಿಂದ ಮತ್ತೆ ಯಥಾ ಪ್ರಕಾರ ರಾಜಾರೋಷವಾಗಿ ಆ ಆದೇಶಕ್ಕೆ ಅಧಿಕಾರಿಗಳು ಕವಡೆ ಕಾಸಿನ ಬೆಲೆ ನೀಡದೆ ಲಂಚಕ್ಕೆ ಅಬಕಾರಿ ಇಲಾಖೆಯನ್ನು ಅಡ ಇಟ್ಟಿರುವುದು ಸತ್ಯಕ್ಕೆ ದೂರವಾದ ವಿಷಯವಲ್ಲ.
ಏಕೆಂದರೆ ಬರಗಾಲಕ್ಕೆ ತುತ್ತಾಗಿದ್ದರೂ ಕುಡಿಯುವ ನೀರಿಗೆ ಬರವಿದ್ದರೂ ಆದರೆ ಸಾರಾಯಿ ಮಾತ್ರ ಪ್ರತಿ ಹಳ್ಳಿಯ ಗಲ್ಲಿಗಲ್ಲಿಯಲ್ಲೂ 3-4 ಕಡೆ ದೊರೆಯುತ್ತದೆ. ಅಧಿಕಾರಿಗಳ ನಿರ್ಲಕ್ಷ್ಯತೆಯಿಂದ ಅಕ್ರಮ ಮಧ್ಯೆ ಎಲ್ಲಿ ಬೇಕಾದರೂ ಮಾರಾಟ ಮಾಡುವ ಪರಿಸ್ಥಿತಿ ಉಂಟಾಗಿದೆ. ಹತೋಟಿಗೆ ತರಬೇಕಾದ ಅಧಿಕಾರಿ ವರ್ಗ ನಾಪತ್ತೆಯಾಗಿದ್ದಾರೆ. ಕುಡಿಯುವ ನೀರಿಗೆ ಮತ್ತು ತಿನ್ನುವ ಅನ್ನಕ್ಕೆ ಹಳ್ಳಿಗಳಲ್ಲಿ ಬರವಿದ್ದು, ಬರ ಬಿಟ್ಟರೆ ಬ್ರಾಂದಿ ಸಾರಾಯಿ ಮಾತ್ರ ಕಾಫೀ, ಟೀ ಮಾರಿದ ರೀತಿ ಸಿಗುತ್ತಿದೆ. ಕುಡಿಯುವ ನೀರು ಸಿಗದೇ ಪರಿತಪಿಸುವ ಹಳ್ಳಿಗಳಲ್ಲಿ ಹೆಂಡಕ್ಕೆ ಬರವಿಲ್ಲದಂತಾಗಿದೆ. ಹಳ್ಳಿಗಾಡಿನಲ್ಲಿ ಬೆಳಿಗ್ಗೆಯಿಂದ ಸಂಜೆಯವರೆಗೂ ಕೂಲಿ ಮಾಡಿದ ಹಣವನ್ನು ಕುಡಿತಕ್ಕೆ ಇಟ್ಟು, ಕುಡಿತ ಮತ್ತಿನಲ್ಲಿ ಮನೆಗೆ ಬಂದು ಹೆಂಡತಿ ಮಕ್ಕಳನ್ನು ಬಡಿದು ಊಟವಿಲ್ಲದೆ ಸಾವಿರಾರು ಕುಟುಂಬಗಳು ಬೀದಿಗೆ ಬೀಳುತ್ತಿದ್ದರೂ. ಅಬಕಾರಿ ಇಲಾಖೆ ಅಧಿಕಾರಿಗಳು ಕಣ್ಣು ಮುಚ್ಚಿಕುಳಿತ್ತಿರುವುದು ಅಧಿಕಾರಿಗಳಿಗೆ ಶೋಭೆಯಲ್ಲ ಎಂದು ಆಕ್ರೋಶ ವುಕ್ತಪಡಿಸಿದರು.
ಮಹಿಳಾ ಜಿಲ್ಲಾಧ್ಯಕ್ಷೆ ಎ. ನಳಿನಿ, ಮಾತನಾಡಿ ನಗರಗಳಲ್ಲಿ ಬೆಳಿಗ್ಗೆ 6 ಗಂಟೆಗೆ ಟೀ ಕಾಫಿ ಅಂಗಡಿಗಳು ತೆರದಂತೆ ಬಾರ್‍ಗಳನ್ನು ತೆಗೆದು ಕಾನೂನು ಎನ್ನುವುದು ಬಾರ್ ಮಾಲೀಕರು ಕಾಲ ಕಸ ಮಾಡಿಕೊಂಡು ಮೆರೆಯುತ್ತಿದ್ದಾರೆ. ಈ ಅಕ್ರಮ ಮಧ್ಯೆದ ಅಂಗಡಿಗಳಿಂದ ಹಳ್ಳಿಗಳಲ್ಲಿ ಮತ್ತು ಡಾಬಾಗಳಲ್ಲಿ ಪ್ರತಿನಿತ್ಯ ಜಗಳಗಳು ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಪಘಾತಗಳು ಹೆಚ್ಚಾಗಿ ಸಾವುಗಳು ಸಂಭವಿಸುವುದು ಆಧಿಕಾರಿಗಳಿಗೆ ಗೊತ್ತಿದ್ದರೂ ಎಷ್ಟೋ ಕುಟುಂಬಗಳು ಅನ್ನವಿಲ್ಲದೆ ಉಪವಾಸವಿರುವಂತಾಗಿದೆ. ಈಗಲಾದರೂ ರಾಷ್ಟ್ರೀಯ ಹೆದ್ದಾರಿ ಡಾಬಾಗಳಲ್ಲಿ ಹಾಗೂ ಹಳ್ಳಿಗಳಲ್ಲಿನ ಮಧ್ಯ ಮಾರಾಟಕ್ಕೆ ಅಬಕಾರಿ ಇಲಾಖೆ ಆದಿಕಾರಿಗಳು ಬಿಸಿ ಮುಟ್ಟಿಸಿ ಹಳ್ಳಿಗಳಲ್ಲಿ ಮಾರಾಟ ಮಾಡುತ್ತಿರುವ ಮಧ್ಯೆದ ಅಂಗಡಿಗಳನ್ನು ಮುಚ್ಚಿಸಿ ಡಾಬಾಗಳ ಮೇಲೆ ಕಾನೂನು ಕ್ರಮ ಕೈಗೊಂಡು ನಗರಗಳಲ್ಲಿ ಬೆಳಿಗ್ಗೆ ವೇಳೆ ಬಾರ್‍ಗಳನ್ನು ತೆಗೆಯದಂತೆ ಕಟ್ಟುನಿಟ್ಟಾಗಿ ಕ್ರಮ ಕೈಗೊಂಡು ಹಳ್ಳಿ ಜನರ ಹಿತಾಸಕ್ತಿ ಹಾಗೂ ಆರೋಗ್ಯ ಕಾಪಾಡಲು ಹಳ್ಳಿಗಳಲ್ಲಿ ಜನ ನೆಮ್ಮದಿಯಿಂದ ಇರಲು ಈ ದಿನಸಿ ಅಂಗಡಿಗಳ ಹಾಗೂ ಹೆದ್ದಾರಿ ಡಾಬಾಗಳ ಮಧ್ಯೆ ಮಾರಾಟಕ್ಕೆ ಕೂಡಲೇ ಕಡಿವಾಣ ಹಾಕಬೇಕೆಂದು ದಿನಾಂಕ 12-08-2019ರ ಸೋಮವಾರದಂದು ಅಬಕಾರಿ ಇಲಾಖೆ ಮುತ್ತಿಗೆ ಹಾಕಲು ಜಿಲ್ಲಾ ರೈತ ಸಂಘದ ಸಭೆಯಲ್ಲಿ ತಿರ್ಮಾನಿಸಲಾಯಿತು.
ಈ ಸಭೆಯಲ್ಲಿ ಜಿಲ್ಲಾ ಸಂಚಾಲಕ ಕೆ.ಶ್ರೀನಿವಾಸಗೌಡ, ಜಿಲ್ಲಾದ್ಯಕ್ಷ ಮರಗಲ್ ಶ್ರೀನಿವಾಸ್, ಬಂಗವಾದಿ ನಾಗರಾಜಗೌಡ, ರೋಜ, ಮಂಜುಳಾ, ಹಸಿರು ಸೇನೆ ಜಿಲ್ಲಾದ್ಯಕ್ಷ ಹುಲ್ಕೂರ್ ಹರೀಕುಮಾರ್, ವಕ್ಕಲೇರಿ ಹನುಮಯ್ಯ, ಪುರುಷೋತ್ತಮ್ ಮಂಗಸಂದ್ರ ತಿಮ್ಮಣ್ಣ, ವೆಂಕಟೇಶಪ್ಪ, ವಿಜಯ್‍ಪಾಲ್, ಮೇಲುಗಾಣಿ ದೇವರಾಜ್, ಮೀಸೆ ವೆಂಕಟೇಶಪ್ಪ, ಕ್ಯಾಸಂಬಳ್ಳಿ ಪ್ರತಾಪ್, ವಡ್ಡಹಳ್ಳಿ ಮಂಜುನಾಥ್, ರಾಮಕೃಷ್ಣಪ್ಪ, ನವೀನ್, ಕೋಲಾರ ಮಾಲೂರು ತಾ.ಅದ್ಯಕ್ಷ ವೆಂಕಟೇಶ್, ಮು.ತಾ.ಅ.ಪಾರುಕ್‍ಪಾಷ, ರಂಜಿತ್, ರಾಮಸ್ವಾಮಿ, ಸುಪ್ರೀಂಚಲ, ಮುನಿಯಪ್ಪ, ಮುರಳಿ, ಸಾಗರ್, ಚಂದ್ರಪ್ಪ, ಪುತ್ತೇರಿ ರಾಜು, , ಬಾಲು, ಮುಂತಾದವರಿದ್ದರು
