ಬಂಟ್ವಾಳ : ಹಿಂದಿನ ಕಾಲದ ಕ್ರೀಡೆ ಹಾಗೂ ಸಾಂಸ್ಕೃತಿಕ ಆಚರಣೆಗಳ ಮಹತ್ವ ತಿಳಿದುಕೊಂಡು ಅದನ್ನು ಉಳಿಸಿ ಬೆಳೆಸುವುದು ಯುವಪೀಳಿಗೆಯ ಕರ್ತವ್ಯವಾಗಿದೆ .ತುಳುನಾಡಿನ ಸಿರಿ ಸಂಪತ್ತು ಅಪಾರವಾಗಿದ್ದು ಇಲ್ಲಿನ ಪ್ರತಿಯೊಂದು ಆಚರಣೆ ಮತ್ತು ಕಟ್ಟಲೆಗಳ ಹಿಂದೆ ಪಾರಂಪರಿಕವಾದ ಹಿನ್ನೆಲೆ ಇದೆ ಅವುಗಳ ಮಹತ್ವ ಮತ್ತು ಹಿನ್ನಲೆಯನ್ನು ಮುಂದಿನ ಪೀಳಿಗೆಗೆ ತಿಳಿಸುವ ಅಗತ್ಯವಿದೆ .ಎಂದು  ಜಿಲ್ಲಾ ಪಂಚಾಯತ್ ಸದಸ್ಯೆ  ಮಂಜುಳಾ ಮಾವೆ  ತಿಳಿಸಿದರು.  ವೀರಕಂಬ ಓಂಕಾರ್ ಫ್ರೆಂಡ್ಸ್ ಇದರ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಸಹಕಾರದೊಂದಿಗೆ ವೀರಕಂಭ ಗ್ರಾಮದ ಪಂಚಾಯತ್ ಬಳಿಯ ಕುಮೇರ್ ಗದ್ದೆಯಲ್ಲಿ ನಡೆದ “ಕೆಸರ್ಡ್ ಒಂಜಿ ದಿನ ಕೆಸರುಗದ್ದೆ” ಕ್ರೀಡಾಕೂಟವನ್ನು  ಉದ್ಘಾಟಿಸಿ ಮಾತನಾಡಿದರು.

IMG-20190806-WA0020
ಸಭಾಧ್ಯಕ್ಷತೆಯನ್ನು ವಹಿಸಿದ ಪ್ರಗತಿಪರ ಕೃಷಿಕ ರಾಮದಾಸ ರೈ ಮಾತನಾಡಿ, ಯುವಜನತೆಯು  ಕೆಸರಿನಲ್ಲಿ ಕ್ರೀಡಾಕೂಟ ಮಾಡುವುದರ ಜೊತೆಗೆ ಹಡಿಲು ಭೂಮಿಯಲ್ಲಿ ಕೃಷಿ ಮಾಡಿ ತೋರಿಸಿ ಮಾದರಿಯಾಗಬೇಕು ಎಂದು ಕರೆಕೊಟ್ಟರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಗೋಳ್ತಮಜಲು ಪ್ರೌಢಶಾಲೆಯ ಶಿಕ್ಷಕ ನಾರಾಯಣ ಗೌಡ ತುಳುನಾಡಿನ ಆಟಿ ಆಚರಣೆ ,ಸಂಪ್ರದಾಯ ,ಆಹಾರ ಪದ್ಧತಿಗಳ ಬಗ್ಗೆ ಮಾಹಿತಿ ನೀಡಿದರು.
ವೇದಿಕೆಯಲ್ಲಿ ವೀರಕಂಭ ಗ್ರಾಮ ಪಂಚಾಯತ್ ಅಧ್ಯಕ್ಷೆ  ಪ್ರೇಮಲತಾ,  ಮಾಜಿ ತಾಲೂಕು ಪಂಚಾಯತ್ ಸದಸ್ಯ ಮಾಧವ ಮಾವೆ ,   ಮಜಿ ಸರಕಾರಿ ಪ್ರಾಥಮಿಕ ಶಾಲೆಯ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ  ಸಂಜೀವ ಮೂಲ್ಯ ,ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವೀರಕಂಭ ಒಕ್ಕೂಟ ಅಧ್ಯಕ್ಷ ಕೊರಗಪ್ಪ ನಾಯ್ಕ ,ಸೇವಾನಿರತೆ  ರೇವತಿ, ಗಿಳ್ಕಿಂಜತ್ತಾಯ ಉತ್ಸವ ಸಮಿತಿಯ ಅಧ್ಯಕ್ಷ ಜಯಪ್ರಕಾಶ್ ತೆಕ್ಕಿ ಪಾಪು ,ಯುವಶಕ್ತಿ ಫ್ರೆಂಡ್ಸ್ ಅಧ್ಯಕ್ಷ ಜಗದೀಶ್ ವಿ ,ಓಂಕಾರ್ ಫ್ರೆಂಡ್ಸ್ ಅಧ್ಯಕ್ಷ  ವಾಸು ನಾಯ್ಕ, ಉಪಸ್ಥಿತರಿದ್ದರು .ಮಜಿ ಶಾಲಾ ಮುಖ್ಯ ಶಿಕ್ಷಕ  ನಾರಾಯಣ ಪೂಜಾರಿ ಪ್ರಾಸ್ತವಿಸಿ,  ಸ್ವಾಗತಿಸಿದರು.  ಶಿಕ್ಷಕಿ ಹರಿಣಾಕ್ಷಿ ಕಾರ್ಯಕ್ರಮ ನಿರೂಪಿಸಿದರು .ಶಿಕ್ಷಕಿ ಜಯಲಕ್ಷ್ಮಿ ವಂದಿಸಿದರು.
ಬಳಿಕ ಕೆಸರಿನಲ್ಲಿ ಮಕ್ಕಳಿಗೆ ,ಹಿರಿಯರಿಗೆ ,ಪುರುಷರಿಗೆ ,ಮಹಿಳೆಯರಿಗೆ ವಿವಿಧ ರೀತಿಯ ಕ್ರೀಡಾಕೂಟಗಳು ಜರಗಿತು. ಮಧ್ಯಾಹ್ನ ಆಟ ತಿಂಗಳಲ್ಲಿ ಬಳಸುವ ಆಹಾರ ಪದಾರ್ಥಗಳ ಭೋಜನ ವ್ಯವಸ್ಥೆ ಮಾಡಲಾಗಿತ್ತು .

By Suddi9

Leave a Reply

Your email address will not be published. Required fields are marked *