ಬಂಟ್ವಾಳ : ವಕೀಲರ ಸಂಘ ಇದರ ಆಶ್ರಯದಲ್ಲಿ ಆಡಿಡೊಂಜಿ ದಿನತ ತಮ್ಮನದ ಲೇಸ್ ಕಾರ್ಯಕ್ರಮವು ಪ್ರಧಾನ ಕಿರಿಯ ಸಿವಿಲ್ ನ್ಯಾಯಾಲಯದ ಆವರಣದಲ್ಲಿ ಜರಗಿತು. ಕಾರ್ಯಕ್ರಮವನ್ನು ಹಿರಿಯ ಸಿವಿಲ್ ನ್ಯಾಯಾಧೀಶರಾದ ಮಹಮ್ಮದ್ ಇಮ್ತಿಯಾಝ್ ಅಹ್ಮದ್ ಉದ್ಘಾಟಿಸಿದರು.

ಆಟಿ ತಿಂಗ ಳು ಮತ್ತು ಆಧುನಿಕ ಜೀವನ ಶೈಲಿಯ ಬಗ್ಗೆ ನ್ಯಾಯವಾದಿ ವೀರೇಂ ದ್ರ ಎಮ್ ಸಿದ್ದಕಟ್ಟೆ ಪ್ರಸ್ತಾವನೆಗೈದರು. ಯಕ್ಷಗಾನ ಕಲಾವಿದ ನ್ಯಾಯವಾದಿ ಗಿರೀಶ್ ಮುಳಿಯಾಲ ರವರನ್ನು ವಕೀಲರ ಸಂಘದ ವತಿಯಿಂದ ಸನ್ಮಾನಿಸಲಾಯಿತು.

ಸಂಪನ್ಮೂಲ ವ್ಯಕ್ತಿ ಹಿರಿಯ ವಕೀಲರಾದ ರಮೇಶ್ ಉಪಾಧ್ಯಾಯ ತು ಳು ನಾಡಿನಲ್ಲಿ ಆಟಿ ತಿಂಗ ಳ ಆಚರಣೆಯ ಇತಿಹಾಸದ ಬಗ್ಗೆ ಮಾಹಿತಿ ನೀಡಿದರು. ವಕೀಲರ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಜೈನ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕಿರಿಯ ಸಿವಿಲ್ ನ್ಯಾಯಾಧಿ ಶೆ ರಮ್ಯಾ ಎಚ್.ಆರ್ , ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಶಿಲ್ಪಾ ಜಿ.ತಿಮ್ಮಾಪುರ್ ಭಾಗವಹಿಸಿದ್ದರು.
ಹಿರಿಯ-ಕಿರಿಯ ವಕೀಲ ಮಿತ್ರರು- ವಕೀಲರ ಸಿಬ್ಬಂದಿವರ್ಗ ಮತ್ತು ನ್ಯಾಯಾಲಯದ ಸಿಬ್ಬಂದಿಗಳು ಭಾಗವಹಿಸಿದ್ದರು. ನ್ಯಾಯವಾದಿ ದೀಪಕ್ ಕುಮಾರ್ ಪೆರಾಜೆ ಸ್ವಾಗತಿಸಿದರು. ನ್ಯಾಯವಾದಿ ಮಹಮ್ಮದ್ ಗಜಾಲಿ ವಂದಿಸಿದರು. ನ್ಯಾಯವಾದಿ ಶೈಲಜಾ ರಾಜೇಶ್ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದ ನಂತರ ತು ಳುನಾಡ ಜೀವನ ಶೈಲಿಯ ವಿವಿಧ ಬಗೆಯ ತಿಂಡಿತಿನಿಸುಗಳು ಮತ್ತು ವೈವಿಧ್ಯಮಯ ಖಾದ್ಯಗಳನ್ನು ಸವಿದರು.
