ಉಡುಪಿ: ಸೊಂಟದ ಸ್ವಾಧೀನ ಕಳೆದು ಕೊಂಡು, ನಾಗರಿಕ ಸಮಾಜದಲ್ಲಿ ಅನಾಗರಿಕ ಬದುಕು ಸಾಗಿಸುತ್ತಿದ್ದ, ಅಪರಿಚಿತ ವೃದ್ಧರನ್ನು ಪಂಚರತ್ನ ಸೇವಾ ಟ್ರಸ್ಟ್ ಇದರ ಅಧ್ಯಕ್ಷರಾದ ನಿತ್ಯಾನಂದ ಒಳಕಾಡು, ಉಪಧ್ಯಾಕ್ಷರಾದ ತಾರಾನಾಥ್ ಮೇಸ್ತ ಶಿರೂರು ಅವರು, ಸ್ಥಳಿಯರ ಸಹಕಾರದಿಂದ ರಕ್ಷಿಸಿ, ಬ್ರಹ್ಮಾವರದಲ್ಲಿ ನಿರ್ಗತಿಕರ ಸೇವೆಯಲ್ಲಿ ನಿರತರಾಗಿರುವ ಅಪ್ಪ-ಅಮ್ಮ ಆಶ್ರಮದಲ್ಲಿ ನೆಲೆ ಕಲ್ಪಿಸಿದ್ದಾರೆ. ಆಶ್ರಮದ ಸಂಚಾಲಕರಾದ ಪ್ರಶಾಂತ ಪೂಜಾರಿ ಕೂರಾಡಿ ಅವರು ತಕ್ಷಣ ಸ್ಪಂದಿಸಿ, ನಿರ್ಗತಿಕ ವೃದ್ಧರಿಗೆ ಆಶ್ರಯ ನೀಡಿ ಮಾನವಿಯತೆ ಮೆರೆದಿದ್ದಾರೆf3290392-52b8-48d2-8b40-1ae454481a5e

ಪರ್ಕಳ ಹೆರ್ಗದ ಬಸ್ಸು ನಿಲ್ಧಾಣದಲ್ಲಿ ಕಳೆದ ನಾಲ್ಕು ವರ್ಷಗಳಿಂದ ನಡೆಯಲಾಗದ ಸ್ಥಿತಿಯಲ್ಲಿದ್ದ ವೃದ್ಧರೊರ್ವರು ನೆಲೆ ಕಂಡಿದ್ದರು. ತಂಗುದಾಣದಲ್ಲಿಯೇ ಮಲ ಮೂತ್ರ ವಿಸರ್ಜಿಸುತ್ತಿದ್ದರು. ಅಲ್ಲಿಯೇ ಮಲಗಿ ದಿನ ಕಳೆಯುತ್ತಿದ್ದರು. ಉದರ ಹಸಿವೆಗೆ ಯಾರದರು, ಎನಾದರು ಕೊಟ್ಟದನ್ನು ತಿಂದುಂಡು ಬದುಕು ಸಾಗಿಸುತ್ತಿದ್ದರು. ತಲೆ ಕೂದಲು, ಗಡ್ಡ ಬೆಳೆದು ನಿಂತಿದ್ದವು. ಅದೇಷ್ಟೊ ದಿನಗಳಿಂದ ವೃದ್ಧರು ಮೈಗೆ ಸ್ನಾನಮಾಡದೆ ಇದ್ದುದ್ದರಿಂದ, ಅವರ ಸನಿಹ ಗಬ್ಬು ವಾಸನೆ ಹೊಡೆಯಿತಿತ್ತು. ಸಾರ್ವಜನಿಕರು ಬಸ್ಸು ನಿಲ್ಧಾಣದಲ್ಲಿ ಆಶ್ರಯ ಪಡೆಯಲಾಗದೆ, ಸುರಿಯುವ ಮಳೆಯಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಇಲ್ಲಿ ಎದುರಾಗಿತ್ತೆಂದು ಸ್ಥಳಿಯರು ಹೇಳಿದ್ದಾರೆ.
7b62d12f-9f0e-47ce-8217-66391e058b91
ವೃದ್ಧರಿಗೆ ಬೆಳೆದು ನಿಂತ ತಲೆಕೂದಲು ಗಡ್ಡಗಳ ಬೊಳಿಸಿ, ಸ್ನಾನ ಮಾಡಿಸಿ ಆಶ್ರಮಕ್ಕೆ ಸೇರಿಸಲಾಯಿತು. ಕಾರ್ಯಚರಣೆಗೆ ರಾಜೇಶ್ ಪ್ರಭು ಪರ್ಕಳ, ಬಾಲಕೃಷ್ಣ ಶೆಟ್ಟಿ ಬನ್ನಂಜೆ, ಸಂತೋಷ ಕುಮಾರ್ ಪಿತ್ರೋಡಿ, ಸದಾಶಿವ ಶೆಟ್ಟಿ ಕಡಿಯಾಳಿ, ಅಶೋಕ ಶೆಟ್ಟಿ ಉದ್ಯಾವರ, ಸುರೇಶ ಪರ್ಕಳ, ಹರೀಶ್ ಮಣಿಪಾಲ ಸಹಕರಿಸಿದರು. ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಕಾರ್ಯಚರಣೆಗೆ ಉಚಿತ ಅಂಬುಲೇನ್ಸ್ ಸೇವೆ ಒದಗಿಸಿತು. ರಾಜು ಕಾಪು ಅವರು ಚಾಲಕರಾಗಿ ಸೇವೆ ನೀಡಿದರು.

ಕಳೆದ ಐದು ವರ್ಷಗಳ ಹಿಂದೆ ನಾನು ಕಟ್ಟಡವೊಂದರ ಮಹಡಿಯಲ್ಲಿ ಗಾರೆ ಕೆಲಸ ಮಾಡುತ್ತಿರುವಾಗ, ಆಯತಪ್ಪಿ ನಲಕ್ಕೆ ಬಿದ್ದು ಸೊಂಟದ ಸ್ವಾಧೀನ ಕಳೆದು ಕೊಂಡಿದ್ದೆನೆ. ಕುಟುಂಬ ವರ್ಗದವರು ಹತ್ತಿರ ಸುಳಿಯಲಿಲ್ಲ, ಹಾಗಾಗಿ ಅಸಹಾಯಕನಾಗಿ ಬಸ್ಸು ನಿಲ್ಧಾಣದಲ್ಲಿ ನೆಲೆ ಕಂಡಿದ್ದೆನೆ ಎಂದು ವೃದ್ಧರು ತಮ್ಮ ದಯನೀಯವಾದ ಪರಿಸ್ಥಿತಿಯನ್ನು ಹೇಳಿಕೊಂಡಿದ್ದಾರೆ. ವೃದ್ಧರು ತನ್ನ ಹೆಸರು ಸಾಧು ಯಾನೆ ಸದಾಶಿವ ಶೇರಿಗಾರ್(65 ವ), ತಂದೆ ದಿ.ಕೊರಗ ಶೇರಿಗಾರ, ಹೆರ್ಗ ಎಂಬ ವಿಳಾಸ ನೀಡಿದ್ದಾರೆ. ವಾರಸುದಾರರು ಬ್ರಹ್ಮಾವರದ ಅಪ್ಪ ಅಮ್ಮ ಆಶ್ರಮವನ್ನು ಸಂಪರ್ಕಿಸುವಂತೆ ಪಂಚರತ್ನ ಸೇವಾ ಟ್ರಸ್ಟ್ ಇದರ ಅಧ್ಯಕ್ಷರಾದ ನಿತ್ಯಾನಂದ ಒಳಕಾಡು ಅವರು ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *