ಮೂಡಬಿದಿರೆ: ಹುಟ್ಟುವಾಗಲೇ ವಿಚಿತ್ರ ಖಾಯಿಲೆಯಿಂದ ಬಳಲುತ್ತಿದ್ದ ಮೂಡುಬಿದಿರೆಯ ಪಣಪಿಲ ಗ್ರಾಮದ ಪುನ್ಕೆಬೆಟ್ಟು ಎಂಬ ಮನೆಯ ಜಗನ್ನಾಥ ಹಾಗೂ ಸಂದ್ಯಾ ದಂಪತಿಗಳ ಲಾವಣ್ಯ ಎಂಬ ಮಗುವಿನ ಚಿಕಿತ್ಸಾ ವೆಚ್ಚವನ್ನು ಭರಿಸಲು ಮುಂದಾಗಿದ್ದೇವೆ.
ಆರ್ಥಿಕವಾಗಿ ಹಿಂದುಳಿದ ಈ ಕುಟುಂಬ ಮಗುವಿನ ಈ ರೋಗಕ್ಕೆ ಚಿಕಿತ್ಸೆಗಾಗಿ ಉದಾರಿಗಳ ಅಪೇಕ್ಷಿತರಾಗಿದ್ದಾರೆ. ಕೂಲಿ ಕೆಲಸಕ್ಕೆ ಹೋಗುತ್ತಿರುವ ಜಗನ್ನಾಥ್ ಹಾಗೂ ಬೀಡಿ ಕಟ್ಟಿ ಸಂಪಾದಿಸುತ್ತಿರುವ ಸಂದ್ಯಾರಿಂದ ಮುಗುವಿನ ಚಿಕಿತ್ಸೆಯೊಂದಿಗೆ ತಮ್ಮ ಕುಟುಂಬವನ್ನು ಮುನ್ನಡೆಸುವುದು ಕಷ್ಟವಾಗಿದೆ. ಶೀಟ್ ಹಾಕಿದ್ದ ಮನೆಯನ್ನು ಸ್ವಯಂಸೇವಕರು ಹಂಚು ಹಾಕುವ ಮೂಲಕ ಸಹಾಯ ಮಾಡಿದ್ದಾರೆ.
ಬೇಸಿಗೆಕಾಲದಲ್ಲಿ ಅತಿಯಾದ ಬಿಸಿಯಿಂದ ಮಗುವಿನ ಆರೋಗ್ಯಕ್ಕೂ ಹಾನಿಯಾಗುತ್ತಿದೆ. ಕೆಲ ವೈದ್ಯರ ಬಳಿ ತೆರಳಿದರೂ ಪರಿಹಾರ ಸಿಕ್ಕಿಲ್ಲ. ಈಗ ಆಯುರ್ವೇದದ ಮೊರೆ ಹೋಗಿರುವ ಕುಟುಂಬಕ್ಕೆ ತಕ್ಕ ಮಟ್ಟಿನ ಭರವಸೆ ದೊರೆತಿದೆ.
ತಮ್ಮಿಂದಾಗುವಷ್ಟು ಹಣವನ್ನು ಈ ಖಾತೆಗೆ ಹಾಕಿ ಸಹಕರಿಸಿ… sandhya A/C NO -520101031180554 IFSC-CORP0001601 BRANCH MOODUMARNADU
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ-9845109108
