ಮೂಡುಬಿದಿರೆ: ಇಲ್ಲಿನನಿಡ್ಡೋಡಿ ಪರಿಸರದಲ್ಲಿ ಶನಿವಾರ ಸಂಜೆ ಕೆ.ಇ.ಬಿ ವತಿಯಿಂದ ಮೇಂಟೆನೆನ್ಸ್ ಕಾರ್ಯ ನಡೆಯುತಿದ್ದ ವೇಳೆಗೆ ವಿದ್ಯುತ್ ಪ್ರವಹಿಸಿ ಪ್ರಾಣಾಪಾಯಕ್ಕೆ ಸಿಲುಕಿದ ಲೈನ್ ಮ್ಯಾನ್ ಒರ್ವರು ಸ್ಥಳೀಯರೋರ್ವರ ಸಕಾಲಿಕ ನೆರವಿನಿಂದಾಗಿ ಅದ್ರಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ.

ಮೂಲತಃ ಬಾಗಲಕೋಟೆಯವರಾದ ಕಲ್ಲಮುಂಡ್ಕೂರು ಉಪವಿಭಾಗದ ಮೆಸ್ಕಾಂ ಸಿಬ್ಬಂದಿ( ಲೈನ್ ಮೆನ್) ದಿಗಂಬರ್ ಎಸ್ .ಕೊಲಮಾಲಿಶನಿವಾರ ಸಾಯಂಕಾಲ ತಮ್ಮ ಸಹೋದ್ಯೋಗಿ ಲೈನ್ ಮ್ಯಾನ್ ಜೊತೆ ನಿಡ್ಡೋಡಿ ಪರಿಸರದಲ್ಲಿ ವಿದ್ಯುತ್ ದುರಸ್ತಿ ಕೆಲಸ ಮಾಡುತ್ತಿದ್ದರು. ಈ ವೇಳೆ ವಿದ್ಯುತ್ ಪ್ರವಹಿಸಿ, ಅವರು ಕಂಬದಲ್ಲೇ ಒದ್ದಾಡತೊಡ ಗಿದರು. ಘಟನೆಯಿಂದ ಸ್ಥಳದಲ್ಲಿದ್ದಇನ್ನೊಬ್ಬ ಲೈನ್ ಮ್ಯಾನ್ ತೀವ್ರ ಆತಂಕಿತರಾದರು.
ಇದೇ ವೇಳೆ ಅಲ್ಲೇ ಪಕ್ಕದಲ್ಲಿ ವೆಲ್ಡಿಂಗ್ ಕೆಲಸ ಮಾಡುತ್ತಿದ್ದ ವಾಮಂಜೂರಿನ ಕೇಶವ ಎಂಬವರು ತಕ್ಷಣ ಕಂಬಕ್ಕೆ ಹತ್ತಿ, ದಿಗಂಬರ್ ಅವರನ್ನು ರಕ್ಷಿಸಿದ್ದಾರೆ. ದಿಗಂಬರ್ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚೇತರಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.ಕೇಶವ ಅವರ ಸಕಾಲಿಕ ಸಾಹಸ ಪ್ರಜ್ಞೆಯ ಕಾರ್ಯನಿರ್ವಹಣೆ ಎಲ್ಲರ ಪ್ರಶಂಸೆಗೊಳಗಾಗಿದೆ.
