ಬೆಂಗಳೂರು :ಮಂಗಳನ ಅಂಗಳಕ್ಕೆ ಭಾರತದ ವಿಜ್ಞಾನಿಗಳು ಯಶಸ್ವಿಯಾಗಿ ಉಪಗ್ರಹವನ್ನು ಕಳಿಸಿದ್ದಾರೆ. ಈ ಐತಿಹಾಸಿಕ ಕ್ಷಣಕ್ಕೆ ಸ್ವತಃ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಜರಾದರು. ಅಲ್ಲದೇ ವಿಜ್ಞಾನಿಗಳನ್ನು ಉದ್ದೇಶೀಸಿ ಮಾತನಾಡಿದರು. ಈ ವೇಳೆ ಮೋದಿ ಹೇಳಿದ ಎಲ್ಲಾ ವಿಷಯಗಳ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ..

ವಿಜ್ಞಾನಿಗಳನ್ನು ಅಭಿನಂದಿಸಿದ ಮೋದಿ
ಮಂಗಳಯಾನವನ್ನು ಯಶಸ್ವಿಗೊಳಿಸಿದ್ದಕ್ಕೆ ಧನ್ಯವಾದ
* ಮಂಗಳನಿಗೆ ಸಿಕ್ಕಿದೆ ‘ಮಾಮ್’ ಸಿಕ್ಕಿದೆ
ಮಂಗಳನಲ್ಲಿ ‘ಮಾಮ್’ ಮಿಲನವಾಗಿದೆ
* ಇಸ್ರೋ ತನ್ನ ಗುರಿಯನ್ನು ನಿಗದಿಯಂತೆ ಸಾಧಿಸಿದೆ
* ಮೊದಲ ಯತ್ನದಲ್ಲೇ ಭಾರತ ಯಶಸ್ಸು ಗಳಿಸಿದೆ
* ವಿಜ್ಞಾನಿಗಳ ಸಾಧನೆಯನ್ನು ಹೊಗಳಿದ ನರೇಂದ್ರ ಮೋದಿ
* ಇಸ್ರೋ ಸಾಧನೆಯನ್ನು ಹೊಗಳಿದೆ ಮೋದಿ
* ಮಂಗಳನ ಕಕ್ಷೆಯನ್ನು ಮಾಮ್ ಮುಟ್ಟಿದೆ
* ಇದು ಇಡೀ ಜಗತ್ತಿಗೆ ಮಹತ್ವದ ಸಂದೇಶವನ್ನು ರವಾನಿಸಿದೆ
* ಭಾರತದ ವೈಜ್ಞಾನಿಕ ಸಾಧನೆಗೆ ಇದು ಸಾಕ್ಷಿಯಾಗಿದೆ
* ಮಂಗಳಯಾನ ಯಶಸ್ವಿಯಾಗಿರುವ ವಿಶ್ವಾಸ ನನಗಿತ್ತು
* ಕಲ್ಪನೆಗೂ ಮೀರಿದ ಯಶಸ್ಸನ್ನು ಮಾಡಿದ್ದೀರಿ
* ಹೊಸ ಇತಿಹಾಸ ಸೃಷ್ಟಿಯಾಗಿದೆ
* ನಮ್ಮ ವಿಜ್ಞಾನಿಗಳು ಹೊಸ ಇತಿಹಾಸ ಸೃಷ್ಟಿಸಿದ್ದಾರೆ
* ಇದು ಸಣ್ಣ ವಿಷಯವೇನು ಅಲ್ಲ
* ಯಾರೂ ಮಾಡದ ಸಾಧನೆಯನ್ನು ನಾವು ಮಾಡಿದ್ದೇವೆ
* ಇನ್ನಷ್ಟು ಯೋಜನೆಗಳಿಗೆ ಈ ಯೋಜನೆ ಹುರುಪು ನೀಡಿದೆ
* ವಿಜ್ಞಾನಿಗಳು ನಿಗದಿಯಂತೆ ಎಲ್ಲವನ್ನೂ ಮಾಡಿ ಮುಗಿಸಿದ್ದಾರೆ
* ವಿಜ್ಞಾನಿಗಳ ಕ್ರಮಬದ್ಧತೆ ನನ್ನನ್ನ ಸಂತಸಗೊಳಿಸಿದೆ
* ಯೋಜನೆ ವಿಫಲವಾಗಿದ್ದರೆ ಅದರ ಜವಾಬ್ದಾರಿಯನ್ನು ನಾನು ವಹಿಸುತ್ತಿದೆ
* ಯಶಸ್ವಿಯಾದರೆ ಅದು ವಿಜ್ಞಾನಿಗಳ ಸಾಧನೆ
* ಯಶಸ್ಸಿನ ಭಾವನೆಯಿದ್ದರೆ ಅದರಿಂದ ಯಶಸ್ಸೇ ಸಿಗುತ್ತೆ
* ಉದ್ದೇಶ ಮಂಗಳಕರವಾಗಿದ್ದರೆ ಮಂಗಳವೇ ಆಗುತ್ತೆ
* ಯಾವುದೇ ಸವಾಲಗಳನ್ನು ನಾವು ಎದುರಿಸಬಲ್ಲೆವು
* ಮೂರೇ ವರ್ಷದಲ್ಲಿ ಇಸ್ರೋ ದೊಡ್ಡ ಸಾಧನೆ ಮಾಡಿದೆ
* ಅಸಾಧ್ಯವಾದುದನ್ನು ಸಾಧ್ಯವಾಗಿಸಿದ್ದೀರಿ
* ಅಸಾಧ್ಯವಾದುದನ್ನು ನಾವು ಸಾಧಿಸಬಲ್ಲೆವು
* ಗುರು-ಶಿಷ್ಯ ಪರಂಪರೆ ನಮ್ಮ ಭಾರತದ ಸಂಸ್ಕೃತಿ
* ಈ ಭಾರತದ ಸಂಸ್ಕೃತಿ ಹೀಗೆ ಮುಂದುವರೆಯಲಿ
* ಇದೇ ಸಂಸ್ಕೃತಿಯನ್ನು ಮುಂದುವರಿಸಿದ ವಿಜ್ಞಾನಿಗಳಿಗೆ ಅಭಿನಂದನೆ
* ಭಾರತೀಯರ ಕನಸು ಈಡೇರಿದೆ
* ಬಾಹ್ಯಾಕಾಶದ ಸಾಧನೆಯಲ್ಲಿ ಮಂಗಳಯಾನ ಒಂದು ಮಾದರಿ
* ನಮ್ಮ ಶಕ್ತಿಯನ್ನು ಜಗತ್ತಿಗೇ ತೋರಿಸಿದ್ದೀರಿ
* ಹಾಲಿವುಡ್ ಚಿತ್ರದ ವೆಚ್ಚಕ್ಕಿಂತ ಕಡಿಮೆ ವೆಚ್ಚದಲ್ಲಿ ಮಂಗಳಯಾನ ಮಾಡಿದ್ದೇವೆ
* ಮೊದಲ ಹೆಜ್ಜೆಯಲ್ಲೇ ಭಾರತ ಮಹತ್ವದ ಸಾಧನೆ ಮಾಡಿದೆ
* ವಿಜ್ಞಾನಿಗಳ ಪ್ರಯತ್ನದಿಂದ ಜಗತ್ತಿನಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಯಾಗಿದೆ
* ಇದರಿಂದ ದೇಶದ ಬೆಳವಣಿಗೆ ಹೆಚ್ಚಾಗಲಿದೆ
* ಇದರ ಮುಖ್ಯ ಉದ್ದೇಶ ದೇಶದ ಅಭಿವೃದ್ಧಿಯಾಗಿದೆ
* ಇಸ್ರೋ ಭಾರತದ ಮುಂದಿನ ಪೀಳಿಗೆಗೆ ಮಾದರಿಯಾಗಿದೆ
* ಇದೇ ಯಶಸ್ಸಿನ ಹಾದಿ ಮುಂದುವರಿಯಲಿ
* ಇದು ಭಾರತ ಜಗದ್ಗುರುವಾಗಲು ಇಟ್ಟ ದಿಟ್ಟ ಹೆಜ್ಜೆ
* ಈ ಮೂಲಕ ಸ್ವಾಮಿ ವಿವೇಕಾನಂದರ ಕನಸು ನನಸಾಗಿದೆ
* ನಮ್ಮ ವಿಜ್ಞಾನಿಗಳು ಇಂದು ಹೊಸ ಇತಿಹಾಸ ಸೃಷ್ಟಿಸಿದ್ದಾರೆ
* ಭಾರತವನ್ನು ಇಡೀ ಜಗತ್ತೇ ಎದ್ದು ನೋಡುವಂತಾಗಿದೆ
* ಇಂದಿನ ಯಶಸ್ಸು ಇನ್ನಷ್ಟು ಸಾಧನೆಗೆ ಸ್ಫೂರ್ತಿಯಾಗಲಿದೆ
* ಇದು ಮಾನವನ ಕಲ್ಪನೆಗೂ ಮೀರಿದ ಸಾಧನೆ
* ಭಾರತದ ದೇಶದ ಎಲ್ಲ ದೇಶಗಳನ್ನು ಹಿಂದಿಕ್ಕಿದೆ
* ಈ ಸಾಧನೆ ನವರಾತ್ರಿಗೆ ಶುಭಸೂಚನೆ
* ಜಾಗೃತ ಭಾರತ ಕನಸು ನನಸಾಗಿಸಲು ಶ್ರಮಿಸುತ್ತಿರುವ ವಿಜ್ಞಾನಿಗಳಿಗೆ ಅಭಿನಂದನೆ
* ಕ್ರಿಕೆಟ್’ನಲ್ಲಿ ಗೆದ್ದರೆ ಇಡೀ ದೇಶ ಸಂಭ್ರಮಿಸುತ್ತೆ
* ವಿಜ್ಞಾನಿಗಳ ಈ ಸಾಧನೆ ಅದಕ್ಕಿಂತ ಸಾವಿರ ಪಟ್ಟು ದೊಡ್ಡದು
