ಬಂಟ್ವಾಳ: ಇಲ್ಲಿನ ಎಸ್.ವಿ.ಎಸ್ ಪದವಿ ಕಾಲೇಜಿನಲ್ಲಿ ಇತ್ತೀಚೆಗೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಮತ್ತು ವಿಜ್ಞಾನ ಸಂಘದ ಜಂಟಿ ಆಶ್ರಯದಲ್ಲಿ ಡೆಂಗ್ಯೂ ಮಾಹಿತಿ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದ ಉಪನ್ಯಾಸ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ| ವಿನಾಯಕ ಕೆ.ಎಸ್ ಇವರು ಈಡಿಸ್ ಈಜಿಪ್ಟಿ ಎಂಬ ಸೊಳ್ಳೆಯಿಂದ ಹರಡುವ ಡೆಂಘಿ ಜ್ವರದ ಲಕ್ಷಣಗಳು, ಅದರ ಹರಡುವಿಕೆ ಮತ್ತು ಪರಿಣಾಮಗಳು, ರೋಗಿ ಅನುಸರಿಸಬೇಕಾದ ಕ್ರಮಗಳು ಮತ್ತು ಅದರ ನಿಯಂತ್ರಣದ ಬಗ್ಗೆ ವವರವಾದ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಇನ್ನೋರ್ವ ಸಂಪನ್ಮೂಲ ವ್ಯಕ್ತಿಯಾದ ಕಾಲೇಜಿನ ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಶ್ರೀ ಸುಪ್ರೀತ್ ಕಾಡಕೊಳ್ ಇವರು ರೋಗಕಾರಕ ಸೊಳ್ಳೆಗಳ ಗುಣಲಕ್ಣಗಳನ್ನು ತಿಳಿಸುವುದರ ಜೊತೆಗೆ ಅವುಗಳ ನಿಯಂತ್ರಣಕ್ಕೆ ಸಂಬಂಧಿಸಿದ ಮಾರ್ಗೋಪಾಯಗಳನ್ನು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ| ಪಾಂಡುರಂಗ ನಾಯಕ್ ಇವರು ನಾವು ಡೆಂಘಿ, ಮಲೇರಿಯಾ ಮುಂತಾದ ರೋಗಗಳನ್ನು ಸರಿಯಾಗಿ ಅರಿತು ಅವುಗಳ ತಡೆಗಟ್ಟುವಿಕೆಯಲ್ಲಿ ಸಕ್ರಿಯವಾಗಿ ಕೈಜೋಡಿಸುವುದರ ಮೂಲಕ ಜಾಗೃತ ನಾಗರಿಕರಾಗಬೇಕೆಂದು ಕರೆಯಿತ್ತರು. ಕಾರ್ಯಕ್ರಮದ ಸಂಯೋಜಕರುಗಳಾದ ಮತ್ತು ರಾಷ್ಟ್ರೀಯ ಸೇವಾ ಯೋಜನಾಧಿಕಾರಿಗಳಾದ ಡಾ| ಮಂಜುನಾಥ ಉಡುಪ ಹಾಗೂ ಶ್ರೀಮತಿ ಶಶಿಕಲಾ ಎಮ್ ಪಿ. ವೇದಿಕೆಯಲ್ಲಿ ಉಪಸ್ಥಿತರಿದ್ದರು. ತೃತೀಯ ಬಿ.ಎಸ್.ಸಿ ವಿದ್ಯಾರ್ಥಿನಿ ಕು| ಕಾವ್ಯಾ ಪ್ರಭು ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು. ಎನ್.ಎಸ್.ಎಸ್ ಘಟಕ ನಾಯಕಿ ಕು| ಗೌತಮಿ ವಂದಿಸಿದರು. ಸ್ವಯಂ ಸೇವಕ ಕಾರ್ತಿಕ್ ಕಾರ್ಯಕ್ರಮ ನಿರ್ವಹಿಸಿದರು.
