ಬಂಟ್ವಾಳ: ಹಿಂದೂ ಜನ ಸೇವಾ ಸಮಿತಿ ಬೊಂಡಾಲ, ಬೋಳಂಗಡಿ, ಲಯನ್ಸ್ ಕ್ಲಬ್ ಬಂಟ್ವಾಳ ಇವರ ಆಶ್ರಯದಲ್ಲಿ ಬ್ಲಡ್ ಬ್ಯಾಂಕ್ ಕೆ.ಎಂ.ಸಿ ಆಸ್ಪತ್ರೆ ಮಂಗಳೂರು ಇದರ ಸಹಯೋಗದಲ್ಲಿ ಬೋಳಂಗಡಿ ದ.ಕ.ಜಿ.ಪ. ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಕ್ತದಾನ ಶಿಬಿರ ನಡೆಯಿತು.
ಎಂ.ಎನ್.ಕುಮಾರ್ ಮೆಲ್ಕಾರ್ ಅವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಮನುಷ್ಯನಿಗೆ ಅತೀ ಹತ್ತಿರವಾದ ವಸ್ತು ರಕ್ತ. ಇದು ಜೀವ ಸಂಚಾರದ ದ್ರವ ಇದರ ದಾನ ದಿಂದ ಈ ದ್ರವ ಶಾಶ್ವತವಾಗಿರುತ್ತದೆ. ಅನ್ನದಾನ ಒಂದು ಎರಡು ಹೊತ್ತಿನ ಹಸಿವನ್ನು ಮಾತ್ರ ನೀಗಿಸಬಲ್ಲದು. ರಕ್ತದಾನ ಜೀವನದ ಉದ್ದಕ್ಕೂ ಆರೋಗ್ಯವಂತನಾಗಿ ಮಾಡುತ್ತದೆ. ಎಲ್ಲಾ ದಾನಕ್ಕಿಂತಲೂ ರಕ್ತದಾನವೇ ಶ್ರೇಷ್ಟ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಹಿಂದೂ ಜನ ಸೇವಾ ಸಮಿತಿಯ ಅಧ್ಯಕ್ಷರಾದ ನವೀನ್ ಕುಮಾರ್ ವಹಿಸಿದ್ದರು. ಬಂಟ್ವಾಳ ಲಯನ್ಸ್ ಕ್ಲಬ್ ಅಧ್ಯಕ್ಷ ಶ್ರೀನಿವಾಸ ಪೂಜಾರಿ, ಕಾರ್ಯದರ್ಶಿ ರಾಧಾಕೃಷ್ಣ ಬಂಟ್ವಾಳ, ಕೋಶಾಧಿಕಾರಿ ದೇವಿಕಾ ದಾಮೋದರ್, ಲಯನ್ಸ್ ವಲಯಾಧ್ಯಕ್ಷರಾದ ಸುಧಾಕರ ಆಚಾರ್ಯ, ಕೆ.ಎಂ.ಸಿ.ಯ ವೈದ್ಯೆ ಡಾ| ಐಶ್ವರ್ಯ , ಮೆಲ್ಕಾರ್ ಯುವ-ಸಂಗಮದ ಸದಸ್ಯರು ಉಪಸ್ಥಿತರಿದ್ದರು. ಹಿಂದೂ ಜನಸೇವಾ ಸಮಿತಿಯ ಸಂಚಾಲಕರಾದ ಪಿ.ಬಿ. ಗಿರಿಧರ್ ಸ್ವಾಗತಿಸಿ, ಕೋಶಾಧಿಕಾರಿ ಸುಧಾಕರ್ ವಂದಿಸಿದರು. ಗುರುಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು. ಶಿಬಿರದಲ್ಲಿ ೭೨ ಮಂದಿ ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿದರು.

Attachments area