ಬಂಟ್ವಾಳ:   ಸದಸ್ಯತ್ವ ಹೆಚ್ಚಾದಂತೆ ಸಂಘಟನಾ ಶಕ್ತಿ ಇಮ್ಮಡಿ ಆಗುತ್ತದೆ,ಪಕ್ಷವು  ಸುದೃಡವಾಗಿ ಬೆಳೆಯತ್ತದೆ.ವ್ಯಕ್ತಿಗಿಂತ ಪಕ್ಷ ಮುಖ್ಯ ಪಕ್ಷಕ್ಕಿತ ದೇಶ ಮುಖ್ಯ ಎಂಬ ಧೋರಣೆಯಂತೆ ವ್ಯಕ್ತಿಗೆ ಪ್ರಾಮುಖ್ಯತೆ ನೀಡದೇ ಪಕ್ಷಕ್ಕೆ ಹೆಚ್ಚು ಪ್ರಾಶಸ್ತ್ಯ  ನೀಡಿ ಪಕ್ಷವನ್ನು ಸಂಘ    ಟಿಸುವಂತೆ ರಾಜ್ಯ ಬಿಜೆಪಿ ಸಹ ವಕ್ತಾರೆ  ಜಿ.ಕೆ.  ಸುಲೋಚನ ಭಟ್    ಕರೆ ನೀಡಿದರು.     ಬಂಟ್ವಾಳ ತಾಲೂಕಿನ ಅನಂತಾಡಿ ಗ್ರಾಮದ ಕರಿಂಕದಲ್ಲಿ   ಬಿಜೆಪಿ ಸಂಘಟನೆ ಮತ್ತು ಸದಸ್ಯತ್ವ ಅಭಿಯಾನದ  ಪ್ರಯುಕ್ತ  ಗಿಡ ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅವರು ಮಾತನಾಡಿದರು.

IMG-20190731-WA0011

ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಚೆನ್ನಪ್ಪ ಕೋಟ್ಯಾನ್ ಮಾತಾನಾಡಿ ಸದಸ್ಯತ್ವ ಅಭಿಯಾನವನ್ನು ಮನೆ ಮನೆಗೂ ಪಸರಿಸಿ ಪಕ್ಷವನ್ನು ಇನ್ನಷ್ಟು ಗಟ್ಟಿ ಗೊಳಿಸಲು ಕಾರ್ಯಕರ್ತರು ಶ್ರಮ ವಹಿಸಬೇಕು” ಎಂದರು. ಅಲ್ಲದೇ ಸದಸ್ಯತ್ವ ಅಭಿಯಾನದ ಕುರಿತು  ಮಾಹಿತಿ ನೀಡಿದರು.   ಎಸ್ ಸಿ ಮೋರ್ಚದ ಜಿಲ್ಲಾದ್ಯಕ್ಷ ದಿನೇಶ್ ಅಮ್ಟೂರು ಮಾತಾನಾಡಿ ಬಿಜೆಪಿ ಪರಿಸರ ರಕ್ಷಣೆಗೂ ಶಾಂತಿ ಸಾಮರಸ್ಯದ ಆಡಳಿತಕ್ಕೂ ಕಟಿಬದ್ದವಾಗಿದೆ ಎಂದರು.

ಗ್ರಾಮ ಪಂಚಾಯತ್ ಸಮಿತಿ ಅದ್ಯಕ್ಷ ಚಂದ್ರಶೇಖರ್ ಕರ್ಕೇರ ಸಭೆಯ ಅದ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ತಾಲೂಕು ಪಂಚಾಯತ್ ಸದಸ್ಯೆ ಗೀತಾ ಚಂದ್ರಶೇಖರ್, ಪಂಚಾಯತ್ ಅದ್ಯಕ್ಷ ಸನತ್ ಕುಮಾರ್ ರೈ, ಉಪಾದ್ಯಕ್ಷೆ ಕವಿತಾ ಉಮೇಶ್,ಪಂಚಾಯತ್ ಸದಸ್ಯರಾದ ಪುರಂದರ ಗೌಡ,ವಸಂತಿ ನಾಯ್ಕ್,ಸುಮಿತ್ರ ಕರ್ಕೇರ ಉಪಸ್ಥಿತರಿದ್ದರು.

ಕ್ಷೇತ್ರ ಸಮಿತಿ ಸದಸ್ಯ ನಾಗೇಶ್ ಭಂಡಾರಿ ಕರಿಂಕ ಸ್ವಾಗತಿಸಿ, ವಂದಿಸಿದರು.ಬಿಜೆಪಿ ಗ್ರಾಮ ಪಂಚಾಯತ್ ಸಮಿತಿ ಪ್ರಧಾನ ಕಾರ್ಯದರ್ಶಿ ಕಾರ್ಯಕ್ರಮವನ್ನು ನಿರೂಪಿಸಿದರು.

By suddi9

Leave a Reply

Your email address will not be published. Required fields are marked *