ಬಂಟ್ವಾಳ:  ಕಲ್ಲಡ್ಕ ಶ್ರೀರಾಮ ಶಿಶುಮಂದಿರದಲ್ಲಿ ಈ ಶೈಕ್ಷಣಿಕ ವರ್ಷದ ಮೊದಲನೇ ಪಾಲಕರ ಸಭೆ ವೇದವ್ಯಾಸ ಸಭಾಂಗಣದಲ್ಲಿ ನಡೆಯಿತು. ಮನೆಯಲ್ಲಿ ಭಜನೆ,ಶ್ಲೋಕಗಳನ್ನು ಹೇಳುವುದು, ದೇವರ ಪೂಜೆ , ತನ್ನ ಕೆಲಸಗಳನ್ನು ತಾನೇ ಮಾಡುವುದು. ಊಟ ಮಾಡುವಾಗ ಒಟ್ಟಿಗೆ ಕೂತು ಪ್ರಾರ್ಥನೆ ಹೇಳಿ ಊಟ ಮಾಡುವುದು.

IMG_20190729_152502ಅಮ್ಮನ ಕೆಲಸದಲ್ಲಿ ಸಹಾಯ ಮಾಡುವುದು , ಮನೆಯಲ್ಲಿ ಹಿರಿಯರಿಗೆ ನಮಸ್ಕರಿಸುವುದು, ಶ್ಲೋಕಗಳನ್ನು ಮನೆಯವರಿಗೆ ಹೇಳಿಕೊಡುವುದು. ಮನೆಯಲ್ಲಿ ನಿಧಾನವಾಗಿ ಶಾಂತವಾಗಿ ಮಾತನಾಡಲು ಹೇಳುವುದು. ಈ ರೀತಿಯಾಗಿ ಪಾಲಕರು ತಮ್ಮ ಮಕ್ಕಳಲ್ಲಿ ಆದ ಬದಲಾವಣೆಗಳನ್ನು  ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಇಲ್ಲಿನ ಅಧ್ಯಕ್ಷರಾದ ಡಾ|| ಪ್ರಭಾಕರ ಭಟ್ ಈ  ಸಂದರ್ಭ ಹಂಚಿ ಕೊಂಡರಲ್ಲದೆ ಪಾಲಕರಿಗೆ ಮಾರ್ಗದರ್ಶನ ಮಾಡಿದರು. ವೇದಿಕೆಯಲ್ಲಿ ವಿದ್ಯಾಕೇಂದ್ರದ ಅಧ್ಯಕ್ಷ ನಾರಾಯಣ ಸೋಮಯಾಜಿ, ಸಂಚಾಲಕ ವಸಂತ ಮಾಧವ ಉಪಸ್ಥಿತರಿದ್ದರು.

IMG_20190729_154946
ಕಾರ್ಯಕ್ರಮದಲ್ಲಿ ಒಟ್ಟು ೯೩ ಪಾಲಕರು ೯ ದಂಪತಿಗಳು ಹಾಗೆಯೇ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.  ಪೂಜಾ ಸ್ವಾಗತಿಸಿ,  ತ್ರಿವೇಣಿ ವಂದಿಸಿದರು,  ಚೈತ್ರ   ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *