ಕೋಲಾರ: ಗ್ರಾಮೀಣ ಪ್ರದೇಶಗಳಲ್ಲಿ ಸಮರ್ಪಕವಾದ ವಿದ್ಯುತ್ ನೀಡದೇ ರೈತರ ಬೆಳೆದ ಬೆಳೆಗಳ ಜೊತೆ ಚಲ್ಲಾಟವಾಡುತ್ತಿರುವ ಬೆಸ್ಕಾಂ ವಿರುದ್ದ ದಿನಾಂಕ: 01-08-2019 ಗುರುವಾರ ಜಾನುವಾರುಗಳು ಮತ್ತು ಒಣಗಿದ ಬೆಳೆಗಳ ಸಮೇತ ಬೆಸ್ಕಂಗೆ ಮುತ್ತಿಗೆ ಹಾಕಲು ಪ್ರವಾಸಿ ಮಂದಿರದಲ್ಲಿ ಕರೆದಿದ್ದ, ರೈತ ಸಂಘದ ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಭೆಯಲ್ಲಿ ಮಾತನಾಡಿದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಗಾಳಿ ಮಳೆ ನೆಪ ಹಾಗೂ ಲೋಡ್‍ಶೆಡ್ಡಿಂಗ್ ಹೆಸರಿನಲ್ಲಿ ಬೆಸ್ಕಂ ಅಧಿಕಾರಿಗಳು ರೈತ ವಿರೋಧಿ ದೋರಣೆ ಅನುಸರಿಸುತ್ತಿದ್ದಾರೆ. ಜೊತೆಗೆ ತೀವ್ರವಾದ ಬರಗಾಲದ ಜೊತೆಗೆ ಬೆಳೆದ ಬೆಳೆಗಳಿಗೆ ಬೆಲೆ ಇಲ್ಲದೆ ಕಂಗಾಲಾಗಿರುವ ರೈತರ ಜೀವನದ ಜೊತೆ ಚಲ್ಲಾಟವಾಡುತ್ತಿರುವ ಬೆಸ್ಕಾಂ ಅಧಿಕಾರಿಗಳಿಗೆ ಗ್ರಾಮೀಣ ಪ್ರದೇಶದ ರೈತಾಪಿ ವರ್ಗ ಇಡೀ ಶಾಪವಾಕುತ್ತಿದ್ದಾರೆ. ಹಾಗೂ ಸಾಲ ಮಾಡಿ ಬೆಳೆದ ಬೆಳೆಗಳು ಕೈಗೆ ಬರುವ ಸಮಯದಲ್ಲಿ ಬೆಸ್ಕಾಂ ಅಧಿಕಾರಿಗಳ ಬೇಜವಾಬ್ದಾರಿಯಿಂದ ಕೈಗೆ ಬಂದ ತುತ್ತು ಬಾಯಿಗೆ ಬರದೆ ಸಂಪೂರ್ಣವಾಗಿ ಬೆಳೆ ನಾಶವಾಗಿ ಮತ್ತೆ ಸಾಲದ ಕೂಪಕ್ಕೆ ಅಧಿಕಾರಿಗಳೇ ತಳ್ಳುತ್ತಿದ್ದಾರೆ. ಮತ್ತೊಂದಡೆ ನಗರಗಳ ಇಲಾಖೆಗಳಲ್ಲಿ ವಿದ್ಯುತ್ ಸಮಸ್ಯೆಯಿಂದ ಕೂಲಿ ನಾಲಿಬಿಟ್ಟು ಸರ್ಕಾರದ ವಿವಿಧ ಅನುಧಾನಗಳಿಗೆ ಅರ್ಜಿಗಳನ್ನು ಸಲ್ಲಿಸಲು ಹಾಗೂ ಆಧಾರ್ ತಿದ್ದುಪಡಿ ಮಾಡಿಕೊಳ್ಳಲು ಬೆಳಿಗ್ಗೆಯಿಂದ ಸಂಜೆಯ ವರೆಗೂ ಊಟ ನೀರಿಲ್ಲದೆ ಪರದಾಡಬೇಕಾದ ಪರಿಸ್ಥಿತಿಯ ಜೊತೆಗೆ ಯಾವುದೇ ಕೆಲಸ ಕಾರ್ಯಗಳು ಇಲಾಖೆಗಳೇ ಆಗುತ್ತಿಲ್ಲ. ಜೊತೆಗೆ ರಾಜ್ಯ ಸರ್ಕಾರ ಮಾತ್ರ ರೈತರಿಗೆ ಗುಣಮಟ್ಟದ 24 ಗಂಟೆ ವಿದ್ಯುತ್ ಸರಬರಾಜು ಮಾಡುತ್ತೇವೆ. ವಿದ್ಯುತ್‍ಗೆ ಯಾವುದೇ ಕೊರತೆ ಇಲ್ಲ ಎಂದು ಹರಿಕಥೆ ಭಜನೆ ಮಾಡುತ್ತಿರುತ್ತಾರೆ. ಆದರೆ ಗ್ರಾಮೀಣ ಪ್ರದೇಶದ ರೈತರ ಪರಿಸ್ಥಿತಿ ಯಾವ ಮಟ್ಟಕ್ಕಿದೆ ಎಂದರೆ ರಾತ್ರಿವೇಳೆ ಮನೆ ಬಿಟ್ಟು ಬೋರ್‍ವೇಲ್‍ಗಳ ಪಕ್ಕದಲ್ಲಿ ಮಲಗಬೇಕಾದ ಪರಿಸ್ಥಿತಿ ಬೆಸ್ಕಾಂ ಅಧಿಕಾರಿಗಳು ಉಚಿತವಾಗಿ ನೀಡಿದ್ದಾರೆಂದು ಆಕ್ರೋಷ ವ್ಯಕ್ತಪಡಿಸಿದರು.
ತಾಲ್ಲೂಕು ಅಧ್ಯಕ್ಷ ಈಕಂಬಳ್ಳಿ ಮಂಜುನಾಥ ಮಾತನಾಡಿ ರೈತರಿಗೆ ಗುಣಮಟ್ಟದ 7 ತಾಸು ವಿದ್ಯುತ್ ನೀಡುತ್ತೇವೆಂದು ಬೆಸ್ಕಾಂ ಅಧಿಕಾರಿಗಳು ಹೇಳುತ್ತಾರೆ. ಆದರೆ ಅವರು ಕೊಡುವ ವಿದ್ಯುತ್ ಒಂದು ಗಂಟೆಗೆ 50 ಬಾರಿ ತೆಗೆದು ರೈತರ ಜೀವನದ ಜೊತೆ ಚಲ್ಲಾಟವಾಡಿ ಅವರೇ ಸಾಲದ ಸುಳಿಗೆ ನೂಕುತ್ತಿದ್ದಾರೆ. ಕಾರ್ಖಾನೆಗಳ ಮಾಲೀಕರಿಗೆ ದಿನದ 24 ತಾಸು ವಿದ್ಯುತ್ ನೀಡಿ, ಅವರ ಕಂಪನಿಗೆ ಗುಲಾಮರಾಗಿ ಕೆಲಸ ಮಾಡುವ ಅಧಿಕಾರಿಗಳು ಗ್ರಾಮೀಣ ಪ್ರದೇಶಗಳ ರೈತರ ಮರಣ ಶಾಸನ ಬರೆಯುತ್ತಿರುವ ಬೆಸ್ಕಾಂ ಅಧಿಕಾರಿಗಳ ರೈತ ವಿರೋಧಿ ದೋರಣೆ ಖಂಡಿಸಿ, ಜಾನುವಾರುಗಳ ಸಮೇತ ಮುತ್ತಿಗೆ ಹಾಕುವ ಎಚ್ಚರಿಕೆಯನ್ನು ನೀಡಿದರು.
ಈ ಸಭೆಯಲ್ಲಿ ಜಿಲ್ಲಾ ಸಂಚಾಲಕ ಕೆ.ಶ್ರೀನಿವಾಸಗೌಡ, ಜಿಲ್ಲಾದ್ಯಕ್ಷ ಮರಗಲ್ ಶ್ರೀನಿವಾಸ್, ರಾಯಲ್ಪಾಡ್ ರಘು, ನಲ್ಲಾಂಡಹಳ್ಳಿ ಕೇಶವ, ವೆಂಕಟರಾಮ್, ಪೊಮ್ಮರಹಳ್ಳಿ ನವೀನ್, ಹುಲ್ಕೂರ್‍ಹರಿಕುಮಾರ್, ವಡ್ಡಹಳ್ಳಿ ಮಂಜುನಾಥ, ಕ್ಯಾಸಂಬಳ್ಳಿ ಪ್ರತಾಪ್, ವೇಮಗಲ್, ನಟರಾಜ, ಅಮರನಾರಾಯಣಸ್ವಾಮಿ, ರೆಹಮಾನ್, ಫಾರುಕ್‍ಪಾಷ, ಮಾಸ್ತಿ ವೆಂಕಟೇಶ್, ಟೇಕಲ್ ಮುನಿಶಾಮಿ, ಮೀಸೆ ವೆಂಕಟೇಶಪ್ಪ, ನರಸಾಪುರ ಪುರುಶೋತ್ತಮ್, ಪುತ್ತೇರಿ ರಾಜು, ಸಾಗರ್, ರಂಜಿತ್, ಸುಪ್ರಿಂ ಚಲ, ತೆರ್ನಹಳ್ಳಿ ಆಂಜಿನಪ್ಪ, ತೆರ್ನಹಳ್ಳಿ ವೆಂಕಿ ಎಲ್ಲಾ ಜಿಲ್ಲಾ ಮತ್ತು ತಾಲ್ಲೂಕು ಮುಖಂಡರು ಹಾಜರಿದ್ದರು.
