ಮೂಡುಬಿದಿರೆ: ಇಲ್ಲಿನ ಅರಮನೆ ಬಾಗಿಲಿನಲ್ಲಿರುವ ಸ್ಫೂರ್ತಿ ವಿಶೇಷ ಮಕ್ಕಳ ಶಾಲೆಯಲ್ಲಿ ಬುಧವಾರ ಶಿಕ್ಷಕ-ಪಾಲಕರ ಸಭೆ ನಡೆಯಿತು. ಮೂಡುಬಿದಿರೆ ಪುರಸಭೆ ಸಮುದಾಯ ಸಂಘಟಕ ಮುರಳೀಧರ್ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಪುರಸಭೆಯಿಂದ ವಿಕಲಚೇತನರಿಗೆ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು.
ಶಾಲೆಯ ಮುಖ್ಯಸ್ಥ ಪ್ರಕಾಶ್ ಶೆಟ್ಟಿಗಾರ್, ವಸತಿ ಯೋಜನೆಯ ಕ್ಷೇತ್ರ ಅಧಿಕಾರಿ ವಾದಿರಾಜ್, ಸಹಾಯಕ ರವಿರಾಜ್, ಮುಖ್ಯ ಶಿಕ್ಷಕಿ ಅನಿತಾ ರೊಡ್ರಿಗಸ್ ಉಪಸ್ಥಿತರಿದ್ದರು
