ಮೂಡುಬಿದಿರೆ: ಸಂಸ್ಕೃತಿ ಸ್ಪೂರ್ತಿಯ ಸದುದ್ಧೇಶದ ರೆಮೊನಾ ಕಲಾಯಾನದ ಐದು ಕಾರ್ಯಕ್ರಮಗಳು ಮೂಡುಬಿದಿರೆ ತಾಲೂಕಿನ ೪ ಶಾಲೆಗಳು ಮತ್ತು ೧ ಸರ್ಕಾರಿ ವಸತಿನಿಲಯದಲ್ಲಿ  ಜುಲೈ ೨೪ ರ ಬುಧವಾರ ನಡೆಯಿತು.ರಾಷ್ಟ್ರ ಮತ್ತು ವಿಶ್ವದಾಖಲೆಗಳನ್ನು ಮಾಡಿದ ಪ್ರತಿಭಾನ್ವಿತ ನೃತ್ಯ ಪಟುಗಳು ತಮ್ಮ ಅದ್ಭುತ ಪ್ರತಿಭೆಯಿಂದ ಕಾರ್ಯಕ್ರಮಗಳನ್ನು ವಿಶಿಷ್ಟವಾಗಿ ದಾಖಲಿಸಿದರು.ಮೂರು ವಿಶ್ವದಾಖಲೆಗಳನ್ನು ನಿರ್ಮಿಸಿದ ರೆಮೊನಾ ಇವೆಟ್ ಪಿರೇರಾ ಅವರು ಪ್ರತಿ ಕಾರ್ಯಕ್ರಮದಲ್ಲೂ ಎರಡು ನೃತ್ಯಗಳನ್ನು ಪ್ರದರ್ಶಿಸಿದರು. ಗಾಜಿನ ಮೇಲೆ ನೃತ್ಯ, ತಲೆಯ ಮೇಲೆ ದೀಪ ಮತ್ತು ಎರಡು ಕೈಯಲ್ಲಿ ದೀಪ ಹಿಡಿದು ಮಡಕೆಯ ಮೇಲೆ ನೃತ್ಯ ಹೀಗೆ ವೈವಿಧ್ಯ ನೃತ್ಯಗಳಿಂದ ಗಮನ ಸೆಳೆದರು. ಹೂಲಾಹೂಪ್‌ನಲ್ಲಿ ವಿಶ್ವದಾಖಲೆಯ ಐದು ವರ್ಷದ  ಆದ್ಯ.ಎ. ಮಂಗಳೂರು ಅವರ ನೃತ್ಯ ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿತ್ತು. ನ್ಯಾಶನಲ್ ಟೆಲೆಟೆಂಡ್ ಡ್ಯಾನ್ಸರ್ ಅವಾರ್ಡ್ ಪುರಸ್ಕೃತೆ ಶೃಜನ್ಯ.ಜೆ.ಕೆ ಹೋಮಲ್ಕೆ ಅವರು ಎಲ್ಲಾ ಕಾರ್ಯಕ್ರಮಗಳಲ್ಲಿ ಭರತನಾಟ್ಯ ಪ್ರದಶಿಸಿದರು.DSCN1952

ಕೆಸರುಗದ್ದೆ ಉನ್ನತೀಕರಿಸಿದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ದಿನದ ಮೊದಲ ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯಿನಿ ರಾಜಶ್ರೀ ನಾಯಕ್, ಕಾರ್ಯಕ್ರಮದ ಪ್ರಧಾನ ಸಂಯೋಜಕ ಡಾ. ಶೇಖರ ಅಜೆಕಾರು, ಪ್ರವೀಣ್ ಜೈನ್, ಭಾಸ್ಕರ ಆಚಾರ್ಯ ಉಪಸ್ಥಿತಿಯಲ್ಲಿ ಭರವಸೆಯ ನೃತ್ಯ ಪಟು ನಿಹಾರಿಕಾ ಬಿ.ಎಂ ಮಂಗಳೂರು ಅವರನ್ನು ಸನ್ಮಾನಿಸಲಾಯಿತು.ಬಾಬು ರಾಜೇಂದ್ರ ಪ್ರಸಾದ್ ಪ್ರೌಢಶಾಲೆಯಲ್ಲಿ ನಡೆದ ಎರಡನೇ ಕಾರ್ಯಕ್ರಮದಲ್ಲಿ ಮಜಾಭಾರತ ಖ್ಯಾತಿಯ ಆರಾಧನಾ ಭಟ್ ನಿಡ್ಡೋಡಿ ಅವರನ್ನು ಮುಖ್ಯೋಪಾಧ್ಯಾಯಿನಿ ಪದ್ಮಜಾ , ಡಾ.ಶೇಖರ ಅಜೆಕಾರು, ಶಶಿಕಲಾ ಹೋಮಲ್ಕೆ ಅವರ ಉಪಸ್ಥಿತಿಯಲ್ಲಿ ಸನ್ಮಾನಿಸಲಾಯಿತು.DSCN1973

ಪ್ರಾಂತ್ಯ ಹೈಸ್ಕೂಲಿನಲ್ಲಿ ನಡೆದ ಮೂರನೇ ಕಾರ್ಯಕ್ರಮದಲ್ಲಿ  ಮುಖ್ಯೋಪಾಧ್ಯಾಯಿನಿ ಶಕುಂತಳಾ ಕೆ. , ಡಾ, ಶೇಖರ ಅಜೆಕಾರು, ಗಣೇಶ ಕುಂಜೂರು ಉಪಸ್ಥಿತಿಯಲ್ಲಿ ಹರ್ಷಿತಾ ಶಿರೂರು ಅವರನ್ನು ಸನ್ಮಾನಿಸಲಾಯಿತು. ಮೂಡುಬಿದಿರೆ ಸರಕಾರಿ ಶಾಲೆ (ಲೇಬರ್‌ಕ್ಯಾಂಪ್) ಶಾಲೆಯಲ್ಲಿ ನಡೆದ ನಾಲ್ಕನೇ ಕಾರ್ಯಕ್ರಮದಲ್ಲಿ ಡ್ಯಾನ್ಸಿಂಗ್ ಸ್ಟಾರ್ ಸಂಕೇತ್ ಆಚಾರ್ಯ ಮರಿಯಾಡಿ ಅವರನ್ನು ಮುಖ್ಯೋಪಾಧ್ಯಾಯಿನಿ ಪ್ರಫುಲ್ಲ ಎಂ, ಡಾ.ಶೇಖರ ಅಜೆಕಾರು ಉಪಸ್ಥಿತಿಯಲ್ಲಿ ಸನ್ಮಾನಿಸಲಾಯಿತು. ಪುಟಾಣಿಗಳಾದ ಸುನಿಧಿ- ಸುನಿಜ ಒಂದು ನೃತ್ಯ ಪ್ರದರ್ಶಿಸಿದರು.
ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿ ನಿಲಯದಲ್ಲಿ ನಡೆದ ಐದನೇ ಕಾರ್ಯಕ್ರಮದಲ್ಲಿ ನಿಲಯದ ಮೇಲ್ವಿಚಾರಕಿ ಪ್ರೀತಿ, ಡಾ.ಶೇಖರ ಅಜೆಕಾರು, ಕೆ.ವಿ ರಮಣ್, ಪದ್ಮಶ್ರೀ ನಿಡ್ಡೋಡಿ ಅವರ ಸಮ್ಮುಖದಲ್ಲಿ ಅದ್ಬುತ ಜ್ಞಾಪಕ ಶಕ್ತಿಯ ಅಯನಾ.ರಮಣ್ ಅವರನ್ನು ಸನ್ಮಾನಿಸಲಾಯಿತು. ಸನ್ಮಾನಿತ ಪ್ರತಿಭೆಗಳು ಅವರ ಪ್ರತಿಭಾ ಪ್ರದರ್ಶನ ಮಾಡಿದರು.

ಮಕ್ಕಳಲ್ಲಿ ಸಂಸ್ಕೃತಿ ಮತ್ತು ಕಲೆಯ ಬಗ್ಗೆ ಆಸಕ್ತಿ ಮೂಡಿಸಲು ಈ ಕಾರ್ಯಕ್ರಮವನ್ನು ಶಾಲೆ ಶಾಲೆಗಳಲ್ಲಿ ಯಾವುದೇ ಫಲಾಪೇಕ್ಷೆಯಿಲ್ಲದೆ ಆಯೋಜಿಸಲಾಗುತ್ತಿದೆ, ಮುಂದಿನ ದಿನಗಳಲ್ಲಿ ಕರಾವಳಿಯ ಪ್ರತಿಯೊಂದು ತಾಲೂಕುಗಳಲ್ಲಿಯೂ ನಡೆಸಲು ತಂಡ ಇಚ್ಚಿಸಿದ್ದು ಆಸಕ್ತರು ೮೭೧೦೯೭೮೪೯೩ ಸಂಪರ್ಕಿಸ ಬಹುದು ಎಂದು ಪ್ರಧಾನ ಸಂಯೋಜಕ ಡಾ.ಶೇಖರ ಅಜೆಕಾರು ತಿಳಿಸಿದ್ದಾರೆ

By suddi9

Leave a Reply

Your email address will not be published. Required fields are marked *