ಉಡುಪಿ: ಬ್ರಹ್ಮಾವರ- ಆರೂರು ಗ್ರಾಮದ ದೇವಸ್ಥಾನ ಬೆಟ್ಟುವಿನ ಅರ್ಚಕ ಕೃಷ್ಣಮೂರ್ತಿ ಭಟ್ (70 ವ) ಅವರು ಮರಣಾನಂತರ ದೇಹದಾನ ಮಾಡಲು ಹೆಸರು ನೊಂದಾವಣೆ ಮಾಡಿಸಿದ್ದಾರೆ. ಇವರು ಆರೂರು ದಿ. ಗೋಪಾಲಕೃಷ್ಣ ಭಟ್, ಕಾವೇರಮ್ಮ ಅವರ ಪುತ್ರರಾಗಿದ್ದಾರೆ. c952d0f4-30a3-4bcf-9181-04242ce7a240

 

ಅರ್ಚಕರ ದೇಹದಾನದ ಸಮಾಜಮುಖಿ ಚಿಂತನೆಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.ಅವರಿಂದ ಸಮಾಜಕ್ಕೂ ಸಂದೇಶ ರವಾನೆಯಾಗಿದೆ. ಕೃಷ್ಣಮೂರ್ತಿ ಭಟ್ ಅವರು ಪ್ರಸ್ತುತ ಉಡುಪಿ ಕವಿ ಮುದ್ದಣ ಮಾರ್ಗ ಇಲ್ಲಿಯ ಶ್ರೀನಿತ್ಯಾನಂದ ಮಂದಿರ ಮಠದಲ್ಲಿ ಅರ್ಚಕರಾಗಿ ಕಳೆದ ಐದು ವರ್ಷಗಳಿಂದ ಪೂಜಾಕೈಂಕರ್ಯದಲ್ಲಿ ನಿರತರಾಗಿದ್ದಾರೆ. ಅವರು ಅವಿಹಾಹಿತರಾಗಿದ್ದಾರೆ. ಮೃತಪಟ್ಟ ನಂತರವು ಕಳೇಬರವು ಮಣ್ಣೊ ಬುದಿಯಾಗುವುದಕಿಂತ ವೈದ್ಯಕೀಯ ಕಲಿಕೆಯ ವಿದ್ಯಾರ್ಥಿಗಳಿಗೆ ಅಧ್ಯಯನಕ್ಕೆ ಉಪಕಾರವಾಗಲಿ ಎಂಬುವುದು ಕೃಷ್ಣ ಮೂರ್ತಿ ಭಟ್ ಅವರ ಆಶಯವಾಗಿದೆ. ಹಾಗಾಗಿ ತಾನು ಸ್ವಯಂ ಪ್ರೇರಿತನಾಗಿ ದೇಹದಾನ ಮಾಡಿರುವುದಾಗಿ ಅವರು ಹೇಳಿಕೊಂಡಿದ್ದಾರೆ.8ff39bf0-982c-4c4b-8f94-13e13721c72e

57fa5e55-54b2-426e-96a9-bc3f6224666d

 

By suddi9

Leave a Reply

Your email address will not be published. Required fields are marked *