ಕೈಕಂಬ:ಕುಪ್ಪೆಪದವು ಡಾ.ಅಂಬೆಡ್ಕರ್ ಸಮಾಜಸೇವಾ ಸಂಘ(ರಿ) ಹಾಗೂ ಶ್ರೀ ಸತ್ಯ ಸಾರಾಮಾಣಿ ದೈವ ಸೇವಾ ಸಮಿತಿ ಇದರ ಆಶ್ರಯದಲ್ಲಿ ಬಳ್ಳಾಜೆ ಅಂಬೇಡ್ಕರ್ ಭವನದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್‍ರವರ 128ಣೇ ಜನ್ಮ ಜಯಂತಿಯನ್ನು ಆಚರಿಸಲಾಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಸಮಾಜ ಸೇವಾ ಸಂಘದ ಅಧ್ಯಕ್ಷರಾದ ರವಿ ಅಪ್ಟೆಪದವುರವರು ವಹಿಸಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಶ್ರೀ ಸತ್ಯಸಾರಾಮಾಣಿ ಅಧ್ಯಕ್ಷರಾದ ಗಂಗಾಧರ್ ಮಾತನಾಡುತ್ತಾ ದಲಿತ ಮಕ್ಕಳು ವಿದ್ಯೆಯಿಂದ ಹಿಮ್ಮುಖವಾಗುತ್ತಿದ್ದಾರೆ. ಇಲ್ಲಾ ಸವಲತ್ತುಗಳು ಇದ್ದಾಗ ಶಿಕ್ಷಣಾ ಕಲಿಯುವಂತಹ ಹುಮ್ಮಸ್ಸು ಎದ್ದು ಕಾಣುತ್ತಿಲ್ಲ. ಪ್ರಥಮವಾಗಿ ಶಿಕ್ಷಣವನ್ನು ಪಡೆಯಿರಿ ಆಗ ತಾನೇ ನಮ್ಮಲ್ಲಿರುವ ಕೀಳರಿಮೆಯು ಹೋಗಿ ಸ್ವಾಭಿಮಾನ ಬೆಳೆಯುಂತಾಗಬೇಕು. ಆಗ ಮಾತ್ರ ಸಂವಿಧಾನ ಶಿಲ್ಪಿಗೆ ನಾವು ನೀಡುವ ಗೌರವ ಸಮರ್ಪಣೆಯಾಗುತ್ತದೆ ಎಂದು ಕರೆ ನೀಡಿದರು. ಡಿ.ಎಸ್.ಎಸ್.ಎನ್ ಅಭಿನಂದನ್ ಕೂಕ್ಯಾಡಿಯವರು ಮಾತನಾಡುತ್ತಾ ಗಾಂಧಿಜೀಯವರ ದ್ವಂದ ನಿಲುವಿನಿಂದಾಗಿ ಇಂದು ರಾಜಕೀಯವಾಗಿ ನಾವು ಹಿಂದೆ ಬೀಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಶಿಕ್ಷಣ ಸಂಘಟನೆ ಮತ್ತು ಹೋರಾಟದ ಮೂಲಕ ನಾವು ನಮ್ಮ ಹಕ್ಕನ್ನು ಪಡೆಯುಂತಾಗಬೇಕು ಎಂದು ಹೇಳಿದರು. ಪ್ರಾಸ್ತಾವಿಕವಾಗಿ ಮಾತನಾಡುತ್ತಾ ನಿಡ್ಯೋಡಿಯ ಬಾವುಜಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಆಶಾಲತ ಅಂಬೇಡ್ಕರ್‍ರವರ ಜೀವನ ಇತಿಹಾಸವನ್ನು ಜನರ ಮುಂದಿಟ್ಟರು. ವೇದಿಕೆಯಲ್ಲಿ ಸತ್ಯಸಾರಾಮಣಿ ದೇವಸ್ಥಾನದ ಆರ್ಚಕರಾದ ಶೀನ ಅಪ್ಟೆಪದವು, ಸತ್ಯಸಾರಾಮಾಣಿ ನಾಸಿಕ್ ಬ್ಯಾಂಡ್ ತಂಡದ ಮುಖ್ಯಸ್ಥರಾದ ಅಶೋಕ್ ಎ.ಪಿ., ಸತ್ಯಸಾರಾಮಾಣಿ ದೈವಾಸೇವಾ ಸಮಿತಿಯ ಕಾರ್ಯದರ್ಶಿ ಸುಂದರ ಬಳ್ಳಾಜೆ ಹಾಗೂ ಸತ್ಯಸಾರಾಮಾಣಿ ದೈವಾ ಸೇವಾ ಸಮಿತಿಯ ಕೋಶಾಧಿಕಾರಿ ಹೊನ್ನಯ ಟಿ, ಕಾಂಬೆಟ್ಟು ಹಾಗೂ ಪ್ರೇಂಡ್ಸ್ ಬಳ್ಳಾಜೆಯ ಅಧ್ಯಕ್ಷರಾದ ಶರತ್ ರಾಜ್ ಬಳ್ಳಾಜೆರವರು ಉಪಸ್ಥಿತರಿದ್ದರು. ಅನಿಲ್ ಅಪ್ಟೆಪದವು ರವರ ನಿರೂಪರಾದ ಕಾರ್ಯಕ್ರಮದಲ್ಲಿ ಮಿಥುನ್‍ರವರು ಸ್ವಾಗತಿಸಿ ಭರತ್ ರಾಜ್ ಬಳ್ಳಾಜೆಯವರು ವಂದಿಸಿದರು.
