ಪೊಳಲಿ : ಸಾವಿರ ಸೀಮೆಗೊಳಪಟ್ಟ, ಇತ್ತೀಚೆಗೆ ಸಂಪೂರ್ಣ ನವೀಕರಣಗೊಂಡ ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಜು. 18 ಗುರುವಾರ ಪರ್ಯಂತ ಜು. 25ರವರೆಗೆ ಪೊಳಲಿಯ ಶ್ರೀ ರಾಜರಾಜೇಶ್ವರಿ ಭಜನಾ ಮಂಡಳಿಯವರಿಂದ ಅಖಂಡ ಭಜನಾ ಸಪ್ತಾಹ ನಡೆಯಲಿದೆ.

ಜು. 18ರಂದು ಗುರುವಾರ ಬೆಳಿಗ್ಗೆ ಎಂಟು ಗಂಟೆಗೆ ಪ್ರಾರಂಭಗೊಂಡು ಜು. 25ರಂದು ಗುರುವಾರ ಬೆಳಿಗ್ಗೆ ಎಂಟು ಗಂಟೆಯವರೆಗೆ ಸಪ್ತಾಹ ನಡೆಯಲಿದೆ. ಸಪ್ತಾಹದಲ್ಲಿ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಕಾಸರಗೋಡು ಮೊದಲಾದ ಜಿಲ್ಲೆಗಳಿಂದ 160ಕ್ಕೂ ಹೆಚ್ಚು ಭಜನಾ ಮಂಡಳಿಗಳು ಶ್ರೀ ದೇವಿಯ ಆರಾಧನಾ ಅಂಗವಾಗಿ ಭಜನಾ ಸೇವೆಗೈಯಲಿವೆ. ಭಜನಾ ಸಪ್ತಾಹದ ಸಂದರ್ಭದಲ್ಲಿ ದೇವಳದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳೂ ನಡೆಯಲಿವೆ.

ನೂರು ವರ್ಷಗಳ ಇತಿಹಾಸವಿರುವ ಶ್ರೀ ರಾಜರಾಜೇಶ್ವರಿ ಭಜನಾ ಮಂಡಳಿಯು 2006ಕ್ಕೆ ಭಜನಾ ಸಪ್ತಾಹ ಆರಂಭಿಸಿದ್ದು, ಈ ಸಪ್ತಾಹವು ಮೂರು ವರ್ಷಕ್ಕೊಮ್ಮೆ ಅನೂಚಾನವಾಗಿ ನಡೆಯುತ್ತಿದೆ ಎಂದು ಸಪ್ತಾಹದ ರೂವಾರಿ ವೆಂಕಟೇಶ್ ನಾವಡ ಹೇಳಿದರು.

By Suddi9

Leave a Reply

Your email address will not be published. Required fields are marked *