ಕೋಲಾರ : ಇದು ಸುಡೋಮೊನಾಸ್ ಪ್ಯುಟಿಡಾ ಎಂಬ ದುಂಡಾಣುವನ್ನು ಬಳಸಿ ತಯಾರಿಸಲಾಗಿರುವ ಒಂದು ರೋಗ ನಿರೋಧಕ ಜೈವಿಕ ಮಿಶ್ರಣ. ಈ ಜೈವಿಕ ಮಿಶ್ರಣವನ್ನು ದಾಳಿಂಬೆ ದುಂಡಾಣು ರೋಗಕ್ಕೆ ನಿರೋಧಕತೆಯನ್ನು ಹೆಚ್ಚಿಸಲು ರಾಸಾಯನಿಕ ರೋಗನಾಶಕಗಳಿಗೆ ಪರ್ಯಾಯವಾಗಿ ತಯಾರಿಸಲಾಗಿದೆ. ರೋಗ ನಿರೋಧಕತೆ ತರುವ ಬ್ಯಾಕ್ಟಿರಿಯಾ, ಹೊಂಗೆಎಣ್ಣೆ ಮತ್ತು ಇತರೆ ಪರಿಸರ ಸ್ನೇಹಿ ಪದಾರ್ಥಗಳನ್ನು ಬಳಸಿ ಗಿಡಗಳಿಗೆ ಸಿಂಪರಣೆ ಮಾಡುವಂತೆ ಸ್ಥೀಕರಣಗೊಳಿಸಲಾಗಿದೆ.ಈ ಜೈವಿಕ ಸಮ್ಮಿಶ್ರಣದಲ್ಲಿರುವ ಹೊಂಗೆ ಎಣ್ಣೆಯು ರೋಗ ನಿರೋಧಕತೆಯ ಕ್ಷಮತೆಯನ್ನು ಹೆಚ್ಚಿಸಿ ಹಲವು ಕೀಟಗಳ ಬಾಧೆಯನ್ನು ತಪ್ಪಿಸಲು ಸಹಕಾರಿಯಾಗುವುದರ ಜೊತೆಗೆ ದಾಳಿಂಬೆ ಹಣ್ನುಗಳು ಬಿಸಿಲಿನಿಂದ ಕಪ್ಪಾಗದಂತೆಯೂ ತಡೆಯುತ್ತದೆ. ಈ ಮಿಶ್ರಣದ ಸಿಂಪರಣೆಯ ನಂತರ ವಿವಿಧ ರೋಗ ನಿರೋಧಕ ಪ್ರೋಟಿನ್ಗಳು ಮತ್ತು ಹಾರ್ಮೋನ್ಗಳು ಉತ್ಪತ್ತಿಯಾಗಿ ಗಿಡಗಳಿಗೆ ರೋಗಕಾರಕ ದುಂಡಾಣುಗಳನ್ನು ನಿಷ್ಕ್ರಿಯಗೊಳಿಸುವ ಸಾಮಥ್ರ್ಯವನ್ನು ನೀಡಿ ಇಳುವರಿಯನ್ನು ಹೆಚ್ಚಿಸಬಹುದೆಂದು ಅಧ್ಯಯನದಿಂದ ಸಾಭೀತಾಗಿದೆ.
ಉಪರೋಗಗಳು:- ದಾಳಿಂಬೆ ದುಂಡಾಣು ಅಂಗಮಾರಿ ರೋಗ ಮತ್ತು ಹಣ್ಣು ಚುಕ್ಕೆ ರೋಗಗಳಿಗೆ ನೀರೋಧಕತೆಯನ್ನು ಹೆಚ್ಚಿಸುತ್ತದೆ.ಹಣ್ಣುಗಳು ಸುರ್ಯನ ಶಾಖದಿಂದ ಕಪ್ಪಾಗದಂತೆ ಮತ್ತು ಹಣ್ನುಗಳ ಬಣ್ಣ ಉತ್ತಮವಾಗಿರಲು ಸಹಕಾರಿಯಾಗಿರುತ್ತದೆ. ಈ ಸಮ್ಮಿಶ್ರಣವು ಮನುಷ್ಯನ ಮತ್ತು ಪ್ರಕೃತಿಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.
ಬಳಸುವ ವಿಧಾನ:-
ಈ ಸಮ್ಮಿಶ್ರಣವನ್ನು 5 ನಿಮಿಷಗಳ ಕಾಲ ಚೆನ್ನಾಗಿ ಕುಲುಕಿ ನಂತರ ಅವಶ್ಯಕತೆಗೆ ತಕ್ಕಂತೆ ನೀರಿನಲ್ಲಿ ಬೆರೆಸಿ ಸಿಂಪರಣೆ ದ್ರಾವಣವನ್ನು ಸಿದ್ಧಪಡಿಸಿಕೊಳ್ಳಬೇಕು. ಪ್ರತಿ ಲೀಟರ್ ನೀರಿಗೆ 4 ಮಿ.ಲೀ. ಸಮ್ಮಿಶ್ರಣವನ್ನು ಅಂಟು ದ್ರಾವಣ ಜೊತೆ ಸಿದ್ಧಪಡಿಸಿ ಎಲೆಗಳ ಮೇಲೆ ಸಿಂಪಡಿಸಬೇಕು. ತಂಪು ವಾತಾವರಣವಿದ್ದಾಗ ಈ ಸಮ್ಮಿಶ್ರಣವನ್ನು ಸಿಂಪರಣೆ ಮಾಡಬೇಕು. ಬೆಳೆಯ ಎಲ್ಲಾ ಹಂತಗಳಲ್ಲೂ ಮತ್ತು ವಿಶ್ರಂತಿ ಕಾಲದಲ್ಲಿಯೂ ಬಳಸಬಹುದು. ರೋಗ ಬರುವ ಮುನ್ನ ಈ ಸಮ್ಮಿಶ್ರಣವನ್ನು ಸಿಂಪಡಿಸಿದ್ದಲ್ಲಿ ಹೆಚ್ಚು ಉಪಯುಕ್ತವಿರುತ್ತದೆ. ರೋಗ ಪೀಡಿತ ತೋಟಗಳಲ್ಲಿ ಒಂದು ಸುತ್ತಿನ ಬೋರ್ಡೋ ದ್ರಾವಣ (ಶೇ.1 ರಷ್ಟು) ಸಿಂಪರಣೆಯ 8 ದಿನಗಳ ನಂತರ ಬಳಸುವುದು ಸೂಕ್ತ. ದಾರಕ್ಷಕ ದೊರಕುವ ಸ್ಥಳ: ನೇಚರ ಕ್ರಾಪ್ ಕೇರ್, ದೊಡ್ಡಬಳ್ಳಾಪುರ. ದೂರವಾಣಿ ಸಂಖ್ಯೆ:9742325266 ಅನ್ನು ಸಂಪರ್ಕಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ : 7829512236 ಅಥವಾ ತೋಟಗಾರಿಕೆ ಸಲಹಾ ಮತ್ತು ಮಾಹಿತಿ ಕೇಂದ್ರ, ಹಾರ್ಟಿಕ್ಲಿನಿಕ್, ಕೋಲಾರ ರವರನ್ನು ಸಂಪರ್ಕಿಸಬಹುದು.
