ಪೊಳಲಿ : ಇಳೆಯ ಜೀವಜಂತುಗಳಿಗೆ ಭೂಮಿತಾಯಿ ಮಳೆ ನೀಡುತ್ತಾಳೆ. ಇಂಟರ್‍ಲಾಕ್, ಕಾಂಕ್ರೀಟ್ ಮಳೆ ನೀರು ಭೂಮಿಗೆ ಸೇರದಂತೆ ಮಾಡುತ್ತದೆ. ಇದು ಅಕ್ಷಮ್ಯ ಅಪರಾಧ ಎಂದು ನಿರ್ಮಿತಿ ಕೇಂದ್ರದ ಯೋಜನಾಧಿಕಾರಿ ರಾಜೇಂದ್ರ ರಾವ್ ಕಲ್ಬಾವಿ ಅಭಿಪ್ರಾಯಪಟ್ಟರು.ಪೊಳಲಿ ಶಾಲೆಯಲ್ಲಿ ನಡೆದ `ಮನೆ ಮನೆಗೆ ಮಳೆ ಕೊಯ್ಲು’ ಯೋಜನೆಯಡಿ ಪೊಳಲಿ ಸರ್ಕಾರಿ ಶಾಲೆಗೆ ಉಚಿತ ಮಳೆ ಕೊಯ್ಲು ಅನುಷ್ಠಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
`ಬಿರುವೆರ್ ಕುಡ್ಲ’ ಈ ಕಾರ್ಯಕ್ರಮ ಆಯೋಜಿಸಿದ್ದು, ಪೊಳಲಿ ಶಾಲಾ ಮುಖ್ಯ ಶಿಕ್ಷಕ ರಾಧಾಕೃಷ್ಣ ಭಟ್ ಅಧ್ಯಕ್ಷತೆ ವಹಿಸಿದರು. ಮಹಿಳಾ ಘಟಕದ ಅಧ್ಯಕ್ಷೆ ವಿದ್ಯಾ ರಾಕೇಶ್ ಪ್ರಸ್ತಾವಿಕ ಮಾತನಾಡಿದರು. ಉಮೇಶ್ ಬಾರಿಂಜೆ, ಪ್ರಾಣೇಶ, ಕಿಶೋರ ಬಾಬು, ಸಪ್ನಾ ಬಿಸ್ವಾಸ್, ಸೌಮ್ಯಾ, ಪ್ರಿಯಾ, ತಾಪಂ ಸದಸ್ಯ ಯಶವಂತ ಪೂಜಾರಿ ಮೊದಲಾದವರಿದ್ದರು. ರಂಜಿತಾ ಸ್ವಾಗತಿಸಿದರು. ಕಾರ್ಯಕ್ರಮವನ್ನು ಪೂರ್ಣಿಮಾ ನಿರೂಪಿಸಿ ಉಮಾ ವಂದಿಸಿದರು.
