ಕೋಲಾರ:- ಅಂಕಗಳಿಕೆ ಅಲಂಕಾರ ಮತ್ತು ಅಹಂಕಾರವಾಗದೇ ಅಂತಃಕರಣವಾಗಿರಲಿ, ಸಾಧಕರಿಗೆ ಸಂಸ್ಕಾರ ಜತೆಯಲ್ಲಿ ಇದ್ದರೆ ಮಾತ್ರ ಗೌರವ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ವಿಷಯ ಪರಿವೀಕ್ಷಕಿ ಪಿ.ವಿ.ಗಾಯತ್ರಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು.ಭಾನುವಾರ ನಗರದ ಪಿ.ಸಿ.ಬಡಾವಣೆಯ ಶ್ರೀಗಾಯತ್ರಿ ಪ್ರಾರ್ಥನಾ ಮಂದಿರದಲ್ಲಿವಿಪ್ರ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಬ್ರಾಹ್ಮಣ ಸಂಘದ ಹಿತೈಷಿಗಳಿಗೆ ಗೌರವಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.8kolar2

ಅಂಕವೊಂದೇ ಮಾನದಂಡವಲ್ಲ, ನಿಮ್ಮಲ್ಲಿ ವಿನಯ ಇರಬೇಕು, ಸಮುದಾಯದ ಬೇರಾದ ಸಂಧ್ಯಾವಂದನೆ ನಿರಂತರವಾಗಿ ಮಾಡಿ ಅದು ನಮ್ಮ ಸಂಸ್ಕಾರವೂ ಹೌದು ಎಂದರು.ಜಗತ್ತು ದೈವದ ಅಧೀನ, ದೇವರು ಮಂತ್ರಗಳ ಅಧೀನವಾಗಿದ್ದು, ಮಂತ್ರಗಳ ಉಚ್ಚರಣೆಯಲ್ಲಿ ಸಮರ್ಥನಾದ ಬ್ರಾಹ್ಮಣದಲ್ಲಿ ದೈವತ್ವ ಇರುತ್ತದೆ, ಸಮುದಾಯ ಹಿಂದಿನಿಂದಿಲೂ ಸನಾತನ ಧರ್ಮದ ಉಳಿವಿಗೆ ಮತ್ತು ಸ್ವಾತಂತ್ರ್ಯ ಹೋರಾಟದಲ್ಲಿ ತನ್ನನ್ನು ತೊಡಗಿಸಿಕೊಂಡು ಬಂದಿದೆ ಎಂದರು.8kolar1

ಬ್ರಾಹ್ಮಣರು ಇಂದು ಅಲ್ಪಸಂಖ್ಯಾತರಾಗಿದ್ದು, ನಮ್ಮ ಹಕ್ಕುಗಳಿಗಾಗಿ ಹೋರಾಡಬೇಕಾಗಿದೆ, ಸಂಘಟಿತಗೊಳ್ಳಲು ಎಚ್ಚೆತ್ತುಕೊಳ್ಳದಿದ್ದರೆ ಸಂಕಷ್ಟ ಖಚಿತ ಎಂದ ಅವರು,ಆಡಳಿತ, ವಿಜ್ಞಾನ, ಕ್ರೀಡೆ, ಶಿಕ್ಷಣ ಎಲ್ಲದರಲ್ಲೂ ಛಾಪು ಮೂಡಿಸಿರುವ ಸಮುದಾಯದ ವಿದ್ಯಾರ್ಥಿಗಳು ಗುರುಹಿರಿಯರಿಗೆ ಗೌರವ ನೀಡುವ ಸಂಸ್ಕಾರವನ್ನು ಮರೆಯದಿರಿ ಎಂದು ಕಿವಿಮಾತು ಹೇಳಿದರು.1 (4)

ಕಲ್ಪನಾಶೀಲತೆ ಮತ್ತು ಕನಸು ಬೇಕು-ರಮೇಶ್
ಆಶಯನುಡಿಗಳನ್ನಾಡಿದ ಪದವಿ ಕಾಲೇಜಿನ ಪ್ರಾಧ್ಯಾಪಕ ಡಾ.ಸಿ.ಎ.ರಮೇಶ್, ಮಕ್ಕಳಿಗೆ ಕಲ್ಪನಾ ಶೀಲತೆ ಮತ್ತು ಕನಸು ಎರಡೂ ಇರಬೇಕು, ನಮ್ಮ ಜನಪದ ಬದುಕು ಎಂದರೆ ಭರವಸೆ ಎಂದು ಕಲಿಸುತ್ತದೆ, ಸಾಹಿತ್ಯ ಬದುಕಿನ ಆಳ, ಅಗಲ ತೋರಿಸುತ್ತದೆ ಎಂದು ತಿಳಿಸಿದರು.

ಅಂಕಗಳಿಕೆಗಾಗಿ ದೈಹಿಕ, ಮಾನಸಿಕ ಆರೋಗ್ಯ ಕಳೆದುಕೊಳ್ಳುತ್ತಿರುವುದನ್ನು ಕಂಡಾಗ ನಮ್ಮ ಮಕ್ಕಳ ಬಗ್ಗೆ ಆತಂಕವಾಗುತ್ತದೆ, ಓದಿನ ಜತೆ ನಮ್ಮ ಮನಸ್ಸು,ಆರೋಗ್ಯ ಉತ್ತಮವಾಗಿರಬೇಕು, ನಮ್ಮನ್ನು ನಾವು ಕಾಪಾಡಿಕೊಳ್ಳಬೇಕು ಎಂಬುದನ್ನು ಅರಿಯಬೇಕು ಎಂದು ಸಲಹೆ ನೀಡಿದರು.ಜಾನಪದ ಕಥೆಗಳೊಂದಿಗೆ ಮಕ್ಕಳಿಗೆ ಬದುಕಿನ ಹಾದಿ ಕುರಿತು ತಿಳಿಸಿಕೊಟ್ಟ ಅವರು, ಸಮಾಜದ ಅಂಕು,ಡೊಂಕು ಪ್ರಶ್ನಿಸುವುದನ್ನು ಜಾನಪದ ಕಲಿಸಿಕೊಟ್ಟಿದೆ ಎಂದರು.

ಜಾನಪದ ಸಾಹಿತ್ಯ ವಿಜ್ಞಾನವೂ ನೀಡಲಾಗದ್ದನ್ನು ಮತ್ತು ಬದುಕಲು ಕಲಿಸುತ್ತದೆ, ನಮ್ಮ ಬದುಕಿನ ವ್ಯಾಪ್ತಿ ತಿಳಿಸುವ ಈ ಸಾಹಿತ್ಯ ಇಂದು ಜೀವನದಲ್ಲಿ ಭಿನ್ನಭಿನ್ನವಾದ ಬಹುದಿನ ಆಳ,ಅಗಲ ತೋರಿಸುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ,ಬಿ.ಎನ್.ವಾಸುದೇವಮೂರ್ತಿ, ಕಳೆದ 25 ವರ್ಷಗಳಿಂದ ಪ್ರತಿಭಾ ಪುರಸ್ಕಾರ ಮಾಡುತ್ತಿದ್ದು, ಪ್ರತಿಭೆಗಳನ್ನು ಜಾತಿ,ಧರ್ಮ ನೋಡದೇ ಪುರಸ್ಕರಿಸುತ್ತಾ ಬಂದಿದ್ದೇವೆ, ಇದೀಗ ವಿಪ್ರ ವಿದ್ಯಾರ್ಥಿಗಳನ್ನು ಪುರಸ್ಕರಿಸುವ ಕಾರ್ಯ ಮಾಡುತ್ತಿದ್ದೇವೆ ಎಂದರು. ಈ ಕಾರ್ಯಕ್ರಮಕ್ಕೆ ಸಮುದಾಯದ ಅನೇಕರು ಸಹಕಾರ ನೀಡಿದ್ದು, ಅವರೆಲ್ಲರಿಗೂ ಧನ್ಯವಾದ ಸಲ್ಲಿಸುವುದಾಗಿ ತಿಳಿಸಿದರು.

ಬ್ರಾಹ್ಮಣಹಿತೈಷಿಗಳಿಗೆಗೌರವಾರ್ಪಣೆ
ಇದೇ ಸಂದರ್ಭದಲ್ಲಿ ಸಮುದಾಯದಲ್ಲಿ ಸಾಧನೆ ಮಾಡಿದ ಹಿತೈಷಿಗಳನ್ನು ಸನ್ಮಾನಿಸಿದ್ದು, ಅಂತರಗಂಗೆ ದೇವಾಲಯದ ಪ್ರಧಾನ ಅರ್ಚಕ ಮಂಜುನಾಥ ದೀಕ್ಷಿತ್,ಜನಾರ್ಧನ್,ಕಮಲಮ್ಮ, ಸುಬ್ಬಲಕ್ಷ್ಮಿ, ಸ್ವಾಮಿ ಬೋರ್‍ವೆಲ್ಸ್‍ನ ಜಗದೀಶ್ ಅಯ್ಯರ್, ಫಣೀಂದ್ರ ನಾವಡಾ, ಹೆಚ್.ಕೆ.ಸುಬ್ಬಲಕ್ಷ್ಮಿ, ವಿಶ್ವನಾಥ್, ಶ್ರೀಪತಿ, ಬದರೀನಾಥ್, ಅಶ್ವಥ್ಥನಾರಾಯಣ್, ಲಕ್ಷ್ಮಿಕಾಂತಮ್ಮ, ಕೆ.ಎಸ್.ನಾಗರಾಜ್, ವಾಸುದೇವನ್, ಸೇರಿದಂತೆ 30 ಮಂದಿಯನ್ನು ಸನ್ಮಾನಿಸಲಾಯಿತು.

ಉನ್ನತ ಶಿಕ್ಷಣ, ಪದವಿ,ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಉತ್ತಮ ಸಾಧನೆ ಮಾಡುದ ವಿಪ್ರ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ಅಚ್ಚುತಾ, ಮಾಜಿ ಅಧ್ಯಕ್ಷ ಟಿ.ಜಿ.ರಾಮಪ್ಪ, ಡಾ.ಕೃಷ್ಣಮೂರ್ತಿ, ಪಿ.ಚಂದ್ರಪ್ರಕಾಶ್, ಜಯತೀರ್ಥ,ನರಸಿಂಹಪ್ರಸಾದ್, ಅನಂತ್ ಪದ್ಮನಾಭ್,ರವಿಶಂಕರ್ ಅಯ್ಯರ್, ಚಂದ್ರಶೇಖರ್ ಅಯ್ಯರ್, ಜಯಶ್ರೀ,ಜಯರಾಂ, ಶಿವಶಂಕರ್ ಮತ್ತಿತರರು ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *