ಕೈಕಂಬ : ಗುರುಪುರ ಬಂಟರ ಮಾತೃ ಸಂಘದ ಪ್ರಧಾನ ಕಚೇರಿಯಲ್ಲಿ ಭಾನುವಾರ ಆಯೋಜಿಸಲಾದ ಮಹಿಳಾ ವಿಭಾಗದ ಸದಸ್ಯೆಯರ ಸಭೆಯಲ್ಲಿ ಸಂಘದ ಅಭಿವೃದ್ಧಿಯೊಂದಿಗೆ ಮಹಿಳೆಯರಿಗೆ ನೆರವಾಗುವ ನಿಟ್ಟಿನಲ್ಲಿ `ಉಳಿತಾಯ ಯೋಜನೆ’ ಆರಂಭಿಸುವ ಕುರಿತು ಚರ್ಚಿಸಲಾಯಿತು.7vpvanamhaosthava

ಬೇರೆಡೆ ಚಾಲ್ತಿಯಲ್ಲಿರುವ ಸ್ತ್ರೀಶಕ್ತಿ ಗುಂಪುಗಳು ನಿರ್ವಹಿಸುವ ಬಡ್ಡಿಯೊಂದಿಗೆ ಸಾಲ ನೀಡುವ ಯೋಜನೆಯಂತೆ ಬಂಟ ಮಹಿಳಾ ಸದಸ್ಯೆಯರ ಉಳಿತಾಯ ಯೋಜನೆ ಕಾರ್ಯರೂಪಕ್ಕೆ ತರಲು ಪ್ರಸ್ತಾವಿಸಿ, ಸದಸ್ಯೆಯರಿಂದ ಒಪ್ಪಿಗೆ ಪಡೆಯಲಾಗಿತು. ಯೋಜನೆಯು ಬ್ಯಾಂಕ್ ಹೊರತಾಗಿ ಸಂಘದ ಮಹಿಳಾ ವಿಭಾಗದಿಂದಲೇ ನಿರ್ವಹಿಸಲಿದೆ ಎಂದು ವಿಭಾಗದ ಅಧ್ಯಕ್ಷೆ ಸುನೀತಾ ಸಿ ಶೆಟ್ಟಿ ಬೆಳ್ಳೂರುಗುತ್ತು ಹೇಳಿದರು.7vpbhnts mathr mandali

ಸಭೆಯಲ್ಲಿ ಸಂಘದ ಕಾರ್ಯದರ್ಶಿ ರೇವತಿ ಜೆ ಆಳ್ವ ಕಾರಮೊಗರು, ಉಪಾಧ್ಯಕ್ಷೆ ಇಂದ್ರಾಕ್ಷಿ ಪಿ ಶೆಟ್ಟಿ ಗಂಜಿಮಠ, ಜೊತೆ ಕಾರ್ಯದರ್ಶಿ ವೀಣಾ ಆರ್ ಶೆಟ್ಟಿ ಪರಾರಿ, ಸಂಚಾಲಕರಾದ ವಿಜಯಲಕ್ಷ್ಮೀ ಶೆಟ್ಟಿ ಮೊಗರುಗುತ್ತು, ಜಯಲಕ್ಷ್ಮೀ ಎಸ್ ಶೆಟ್ಟಿ ವಾಮಂಜೂರು ಹಾಗೂ ನಳಿನಿ ಶೆಟ್ಟಿ ಗುರುಪುರ ಮೊದಲಾದವರಿದ್ದರು. ಸಂಘದ ಸಾಂಸ್ಕøತಿಕ ಕಾರ್ಯದರ್ಶಿ ಅಸ್ತಿಕಾ ಶೆಟ್ಟಿ ದೋಣಿಂಜೆಗುತ್ತು ಸ್ವಾಗತಿಸಿ, ಸಭೆ ನಿರೂಪಿಸಿದರು.

ಬಳಿಕ ಗುರುಪುರ ಶ್ರೀ ವೈದ್ಯನಾಥ ದೈವಸ್ಥಾನದ ವಠಾರದಲ್ಲಿ ಸಂಘದ ಮಹಿಳೆಯರು ಫಲಕೊಡುವ ಹಾಗೂ ಹೂವಿನ ಗಿಡಗಳ ನೆಟ್ಟು ವನಮಹೋತ್ಸವ ಆಚರಿಸಿದರು.

By Suddi9

Leave a Reply

Your email address will not be published. Required fields are marked *