ಕೈಕಂಬ:ಮಂಗಳೂರು ತಾಲೂಕಿನ ಕುಳವೂರು ಗ್ರಾಮದ ನೋಣಾಲ್‍ನ ಪ್ರತೀಭಾ ಎಸ್ ಹೆಗ್ಡೆಯವರು 2018-19ನೇ ಸಾಲಿನ ಶೇಷ್ಟ ಕೃಷಿಕ ಪ್ರಶಸ್ತಿಗೆ ಭಾಜನಾರಾಗಿದ್ದಾರೆ. ಇವರು ತಮ್ಮ ಸ್ವಂತ ಗದ್ದೆ ಮತ್ತು ಹಂಡೀಲು ಬಿದ್ದಿದ್ದ ಕುಳವೂರಿನ ಕಂಬಳದ ಗದ್ದೆಯಲ್ಲಿ ಸಂಪೂರ್ಣವಾಗಿ ಯಂತ್ರೋಪಕರಣಗಳನ್ನೆ ಬಳಸಿ ವೈಜ್ಞಾನಿಕ ರೀತಿಯಲ್ಲಿ ಕೃಷಿ ಮಾಡಿದ್ದು ಸರಕಾರದ ಆತ್ಮ ಯೋಜನೆಯಲ್ಲಿ ಯಂತ್ರೋಪಕರಣಗಳನ್ನು ಬಳಸಿ ಕೃಷಿ ವಿಭಾಗದಲ್ಲಿ ಇವರು ಪ್ರಶಸ್ತಿಗೆ ಆಯ್ಕೆಯಗಿದ್ದು,
ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ.ಖಾದರ್‍ರವರು ಮಂಗಳೂರಿನ ಸರಕಾರಿ ನೌಕರರ ಸಭಾಭವನದಲ್ಲಿ ನಡೆದ ಸಮಾರಂಭದಲ್ಲಿ ವಿತರಿಸಿದರು.ಜಿಲ್ಲಾ ಪಂಚಾಯತ್ ಸದಸ್ಯರುಗಳು ತೋಟಗಾರಿಕೆ ಮತ್ತು ಕೃಷಿ ಇಲಾಖೆಯ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
