ಇರಾ ಕಲ್ಲಾಡಿ ಮಲೆಯಾಳಿ ಬಿಲ್ಲವ ಸೇವಾ ಸಂಘ (ರಿ) ಇದರ ಸಭಾಭವನದಲ್ಲಿ 2019-20ನೇ ಸಾಲಿನ ಸಮಗ್ರ ಕೃಷಿ ಅಭಿಯಾನಕಾರ್ಯಕ್ರಮದ ಪಾಣೆಮಂಗಳೂರು ಹೋಬಳಿಯ ರೈತ ಸಂವಾದಕಾರ್ಯಕ್ರ ಮಜರುಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಇರಾಗ್ರಾಮ ಪಂಚಾಯತ್‍ನಅಧ್ಯಕ್ಷರಾದ ಅಬ್ದುಲ್‍ರಜಾಕ್ ಕುಕ್ಕಾಜೆ ರವರು ವಹಿಸಿದ್ದರು. ಬಂಟ್ವಾಳ ತಾಲೂಕು ಪಂಚಾಯತ್£ Àಅಧ್ಯಕ್ಷರಾದ ಕೆ. ಚಂದ್ರಹಾಸಕರ್ಕೇರ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತಾನಾಡಿದತಾಲೂಕು ಪಂಚಾಯತ್‍ನ ಅಧ್ಯಕ್ಷರು ವಿವಿಧ ಇಲಾಖೆಗಳ ರೈತ ಪರ ಸೌಲಭ್ಯಗಳನ್ನು ರೈತರು ಹೆಚ್ಚು ಉಪಯೋಗಿಸಿಕೊಳ್ಳಬೇಕು, ಈ ನಿಟ್ಟಿನಲ್ಲಿ ಇಲಾಖಾ ಅಧಿಕಾರಿಗಳು ಹೆಚ್ಚು ಕಾರ್ಯಪ್ರವರ್ತರಾಗಬೇಕು ಹಾಗೂ ಈ ಸಂಬಂಧ ರೈತರು ಕೂಡಾ ಇಲಾಖೆಗಳ ಸಂಪರ್ಕದೊಂದಿಗೆ ಹೆಚ್ಚು ಸ್ಪಂದನೆ ನೀಡಬೇಕೆಂದು ಸೂಚಿಸಿದರು. ಇರಾಗ್ರಾಮ ಪಂಚಾಯತ್‍ನ ಸದಸ್ಯರಾದ ಗೋಪಾಲ್‍ಅಶ್ವಥಡಿ ರವರು ಅಭಿಯಾನಕಾರ್ಯಕ್ರಮದಲ್ಲಿ ನೀಡಿದ ಇಲಾಖೆಗಳ ಮಾಹಿತಿ ಸೌಲಭ್ಯಗಳನ್ನು ಪಡೆದು, ಈ ಮೂಲಕ ಆರ್ಥಿಕ ಅಭಿವೃಧ್ಧಿಯನ್ನು ಹೊಂದಬೇಕುಎಂದುಅಭಿಪ್ರಾಯಪಟ್ಟರು.

IMG-20190702-WA0019
ಬಂಟ್ವಾಳ ತಾಲೂಕಿನತೋಟಗಾರಿಕಾಇಲಾಖೆಯ ಸಹಾಯಕ ನಿರ್ದೇಶಕರಾದ ದಿನೇಶ್ ರವರುತೋಟಗಾರಿಕಾ ಇಲಾಖೆಯಿಂದ ಸಿಗುವ ವಿವಿಧ ಸೌಲಭ್ಯ ಪಡೆಯಲು ರೈತರು ನೀಡಬೇಕಾದ ವಿವಿಧ ಧಾಖಲಾತಿಗಳ ಬಗ್ಗೆ ಮಾಹಿತಿ ನೀಡಿದರು.ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಬಂಟ್ವಾಳ ಇದರ ಮಾರಾಟ ಸಹಾಯಕಿ ಶ್ರೀಮತಿ ಬಿಂದ್ಯಾಕುಮಾರಿ ಪಿ ಇಲಾಖೆಯ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.ಇರಾ ಗ್ರಾಮದ ಪ್ರಗತಿಪರ ರೈತರಾದ ನಿಶ್ಚಲ್‍ಜಿ.ರೈ ಇವರು ತಾವು ಹೈನುಗಾರಿಕೆಕ್ಷೇತ್ರದಲ್ಲಿ ಸಾಧಿಸಿದ ಯಶಸ್ಸಿನ ಬಗ್ಗೆ ಮಾಹಿತಿ ನೀಡಿದರು.
ಕೃಷಿ ಇಲಾಖೆಯಿಂದ ಸಿಗುವ ಸೌಲಭ್ಯಗಳ ಬಗ್ಗೆ ಬಂಟ್ವಾಳ ಹೋಬಳಿಯ ಸಹಾಯಕ ಕೃಷಿ ಅಧಿಕಾರಿ ಶ್ರೀ ನಾರಾಯಣ ನಾಯ್ಕ ಮಾಹಿತಿ ನೀಡಿದರು.
ಸಿಪಿಸಿಆರ್‍ಐ ವಿಟ್ಲ ಇದರ ವಿಜ್ಞಾನಿಗಳಾದ ಡಾ. ಎನ್.ಆರ್.ನಾಗರಾಜ್‍ರವರು ತೋಟಗಾರಿಕಾ ಬೆಳೆಗಳ ಬಗ್ಗೆ ತಾಂತ್ರಿಕ ಮಾಹಿತಿ ನೀಡಿದರು.
ಕೃಷಿ ವಿಜ್ಞಾನಕೇಂದ್ರಕಂಕನಾಡಿ ಮಂಗಳೂರು ಇದರ ಬೇಸಾಯ ಶಾಸ್ತ್ರ ವಿಭಾಗದ ವಿಜ್ಞಾಇ ಬಿ.ಟಿ. ನವೀನ್‍ಕುಮಾರ್‍ರವರು ಕೆವಿಕೆ ಯಲ್ಲಿ ಎರೆಹುಳ ಗೊಬ್ಬರ, ಕೋಳಿಮರಿ ಹಾಗೂ ಮೀನಿನ ಮರಿ ವಿತರಣೆ ಬಗ್ಗೆ ತಿಳಿಸಿದರು.ಭತ್ತದ ಬೇಸಾಯದಲ್ಲಿ ವಿವಿಧ ತಾಂತ್ರಿಕತೆಗಳ ಬಗ್ಗೆ ಮಾಹಿತಿ ನೀಡಿದರು.ಕೂಲಿಯಳುಗಳ ಸಮಸ್ಯಯಿಂದ ಭತ್ತದಲ್ಲಿ ಕೃಷಿ ಯಂತ್ರೋಪಕರಣಗಳ ಬಳಕೆಯ ಬಗ್ಗೆ ಮಾಹಿತಿ ನೀಡಿದರು.ಭತ್ತಯಂತ್ರ ನಾಟಿಯಲ್ಲಿ ಚಾಪೆ ನೀಜಿ ವಿಧಾನದ ಬದಲುಟ್ರೇ ಪದ್ದತಿಯಲ್ಲಿ ನೇಜಿ ಮಾಡುವ ವಿಧಾನದ ಬಗ್ಗೆ ಮಾಹಿತಿ ನೀಡಿದರು.
ಸಂವಾದ ಕಾರ್ಯಕ್ರಮದ Àಅಧ್ಯಕ್ಷತೆ ವಹಿಸಿದ್ದ ಅಬ್ದುಲ್‍ರಜಾಕ್ ಕುಕ್ಕಾಜೆ ರವರು ಮಾತನಾಡಿ ಇರಾಗ್ರಾಮವು ಕೃಷಿ ಆಧಾರಿತಗ್ರಾಮವಾಗಬೇಕು ಹಾಗೂ ಕೃಷಿ ಕುಟುಂಬದಿಂದತಾನು ಬಂದಿದ್ದು ಕೃಷಿ ಕಾಯಕದಲ್ಲಿ ಹೆಚ್ಚಿನ ಒಲವು ರೈತರುತೋರಬೇಕುಎಂದುಅಭಿಪ್ರಾಯಪಟ್ಟರು.ಶ್ರೀ ಕೊರಗಪ್ಪ, ಕೃಷಿ ಅಧಿಕಾರಿ ಪಾಣೆಮಂಗಳೂರು ಸ್ವಾಗತಿಸಿದರು, ಸಹಾಯಕ ಕೃಷಿ ನಿರ್ದೇಶಕರಾದ ನಾರಾಯಣ ಶೆಟ್ಟಿರವರು ಸಮಗ್ರ ಕೃಷಿ ಅಭಿಯಾನಕಾರ್ಯಕ್ರಮದ ಧೇಯೋಧ್ಧೇಶಗಳ ಬಗ್ಗೆ ಪ್ರಸ್ತಾವಿಕ ಮಾತನಾಡಿದರು.ಶ್ರೀಮತಿ ಪ್ರಿಯಾಂಕ ಬಿ.ಟಿ.ಎಂ.ಆತ್ಮಯೋಜನೆಇವರು ವಂದಿಸಿದರು, ನಂದನ ಶಣೈ. ಪಿ. ಕೃಷಿ ಅಧಿಕಾರಿ ಬಂಟ್ವಾಳ ಇವರುಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *