ಕೈಕಂಬ:ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ನಿರತವಾಗಿದ್ದ ವೇಳೆ ಅಕಸ್ಮಾತ್ ಆಗಿ ಕಟ್ಟಡದಿಂದ ಬಿದ್ದು ತನ್ನೆರಡು ಕಾಲುಗಳಿಗೆ ಗಂಭೀರವಾಗಿ ಗಾಯಗೊಂಡು ಸಂಕಷ್ಟದಲ್ಲಿದ್ದ ತೆಂಕ ಎಡಪದವು ಗ್ರಾಮದ ಬ್ರಿಂಡೇಲು ಪದವಿನ ಕೃಷ್ಣಾ ನಾಯ್ಕ್ ಇವರ ವೈದ್ಯಕೀಯ ಚಿಕಿತ್ಸಾ ವೆಚ್ಚಕ್ಕಾಗಿ ಗಂಜಿಮಠ ಮರಾಟಿ ಸಂಘದ ವತಿಯಿಂದ ಧನಸಹಾಯದ ಚೆಕ್ಕನ್ನು ಕೃಷ್ಣನಾಯ್ಕ್ರವರಿಗೆ ಸಂಘದ ಅಧ್ಯಕ್ಷ ಪದ್ಮನಾಭ ಬಿ.ನಾಯ್ಕ್ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಮಹಾಬಲ ನಾಯ್ಕ್ ಮುಚ್ಚೂರು, ಪುರಂದರ ನಾಯ್ಕ್, ಸತೀಶ್ ನಾಯ್ಕ್, ಗುಣಪಾಲ ನಾಯ್ಕ್, ರಾಜೀವಿ ನಾಯ್ಕ್, ಅಶೋಕ್ ನಾಯ್ಕ್, ಹರೀಶ್ಚಂದ್ರ ನಾಯ್ಕ್, ಶೇಖರನಾಯ್ಕ್, ಭವ್ಯ ನಾಯ್ಕ್ ಮುಂತಾದವರು ಹಾಜರಿದ್ದರು.
