ಸುದ್ದಿ9ಮಂಗಳೂರು: ಮೆಸ್ಕಾಂ ಇಂಜಿನಿಯರ್ ಒಬ್ಬರನ್ನು ಅಪರಿಚಿತ ದುಷ್ಕರ್ಮಿಗಳು ಮನೆಯೊಳಗಡೆ ನುಗ್ಗಿ ಬರ್ಬರವಾಗಿ ಕೊಲೆ ಮಾಡಿದ ಘಟನೆ ಭಾನುವಾರ ಬೆಳಿಗ್ಗೆ 2.30ರ ಸುಮಾರಿಗೆ ಕದ್ರಿಕಂಬಳ ರಸ್ತೆಯಲ್ಲಿರುವ ಮನೆಯಲ್ಲಿ ನಡೆದಿದೆ. ಮಂಗಳೂರಿನ ಜಗದೀಶ್ ರಾವ್ ಕೊಲೆಗೀಡಾದ ವ್ಯಕ್ತಿ.
ಮುಂಜಾನೆ 2:30ರ ಸುಮಾರಿಗೆ ಇವರು ತನ್ನ ಪತ್ನಿ ಭಾರತಿ ಗಾಢ ನಿದ್ದೆಯಲ್ಲಿರುವಾಗ ಪತಿಯ ಅರಚಾಟ ಕೇಳೀಬಂದಿತ್ತು. ನೋಡಿದಾಗ ಪತಿ ರಕ್ತದ ಮಡುವಲ್ಲಿ ಬಿದ್ದಿದ್ದರು. ಭಾರತಿ ತಕ್ಷಣ ವೈದ್ಯರಿಗೆ ಕರೆ ಮಾಡಿದ್ದರು. ವೈದ್ಯರು 10 ನಿಮಿಷದಲ್ಲಿ ಬಂದಿದ್ದರು. ಆದರೆ ಅಷ್ಟೊತ್ತಿಗೆ ಜಗದೀಶ್ರವರು ಕೊನೆಯುಸಿರು ಎಳೆದಿದ್ದರು. ಮೇಲೆ ನೋಡಿದಾಗ ಟೆರೇಸ್ ಬಾಗಿಲು ತೆರದಿದ್ದು ಅಲ್ಲಿಂದ ದುಷ್ಕಮರ್ಿಗಳು ಪರಾರಿಯಾಗಿದ್ದರು ಎಂದು ಅವರ ಪತ್ನಿ ಭಾರತಿ ತಿಳಿಸಿದ್ದಾರೆ.
ಭಾರತಿಯವರ ಬೊಬ್ಬೆ ಕೇಳಿ ಪಕ್ಕದ ಮನೆಯಲ್ಲಿದ್ದ ವೈದ್ಯ ಗಣೇಶ್ ಎಂಬವರು ಹೊರಗೆ ಬಂದಿದ್ದರು. ದುಷ್ಕೃತ್ಯದ ಮಾಹಿತಿ ತಿಳಿದು ಅವರು ಗಾಳಿಯಲ್ಲಿ ಗುಂಡು ಹಾರಿಸಿದ್ದರು. ದುಷ್ಕಮರ್ಿಗಳು ಗುಂಡಿನ ಸದ್ದು ಕೇಳಿ ಓಡಿ ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ. ವಿಶೇಷ ಎಂದರೆ ಜಗದೀಶರ ಕುತ್ತಿಗೆಗೆ ಹರಿತ ಆಯುಧದಿಂದ ಕಡಿದಿರುವ ದುಷ್ಕಮರ್ಿಗಳು ಪಕ್ಕದಲ್ಲಿಯೇ ಮಲಗಿದ್ದ ಆವರ ಪತ್ನಿಗೆ ಯಾವುದೇ ಹಾನಿ ಮಾಡಿಲ್ಲ. ರಾತ್ರಿ ಟೇರಸ್ನ ಬಾಗಿಲು ತೆರದು ಮಲಗಿದ್ದು ಯಾಕೆ? ದುಷ್ಕಮರ್ಿಗಳಿಗೆ ಟೇರಸ್ನ ಬಾಗಿಲು ತೆರೆದಿರುವ ವಿಷಯ ತಿಳಿದಿದ್ದು ಹೇಗೆ ಎಂಬ ಪ್ರಶ್ನೆ ಕಾಡುತ್ತಿದೆ. ಪ್ರಕರಣ ದಾಖಲಿಸಿಕೊಂಡಿರುವ ಕದ್ರಿ ಪೊಲೀಸರು ತನಖೆ ನಡೆಸುತ್ತಿದ್ದಾರೆ. ಜಗದೀಶರ ಒಬ್ಬಳೇ ಪುತ್ರಿ ಬೆಂಗಳೂರಿನಲ್ಲಿ ದುಡಿಯುತ್ತಿದ್ದಾರೆ.
ಶ್ವಾನದಳದೊಂದಿಗೆ ಘಟನಾ ಸ್ಥಳಕ್ಕೆ ಆಗಮಿಸಿರುವ ಕದ್ರಿ ಪೊಲೀಸರು ಪರಿಶೀಲಿಸಿದ್ದಾರೆ. ಡಿಸಿಪಿ ಜಗದೀಶ್, ಎಸಿಪಿ ತಿಲಕ್ಚಂದ್ರ, ಕದ್ರಿ ಟ್ರಾಫಿಕ್ ಇನ್ಸ್ಪೆಕ್ಟರ್ ಶಿವಕುಮಾರ್ ಮತ್ತು ಕದ್ರಿ ಪೊಲೀಸ್ ಠಾಣೆಯ ಸಿಬ್ಬಂದಿ ಘಟನಾ ಸ್ಥಳಕ್ಕೆ ತಲುಪಿ ಪರೀಶೀಲನೆ ನಡೆಸಿ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವೆನ್ಲಾಕ್ ಶವಾಗಾರಕ್ಕೆ ಸಾಗಿಸುವ ವ್ಯವಸ್ಥೆ ಮಾಡಿದ್ದಾರೆ.
666pp-

666p

666p-

By suddi9

Leave a Reply

Your email address will not be published. Required fields are marked *