ಸುದ್ದಿ9ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಗಾರದ ಬೇಟೆ ನಡೆದಿದ್ದು ಇಬ್ಬರು ವ್ಯಕ್ತಿಗಳಿಂದ ಸುಮಾರು ರೂ. 23,48,650 ಬೆಲೆ ಬಾಳುವ 878 ಗ್ರಾಂ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.
ಮೊದಲ ಪ್ರಕರಣದಲ್ಲಿ ಏರ್ ಇಂಡಿಯಾ ವಿಮಾನದಲ್ಲಿ 4.45ಕ್ಕೆ ಬಂದಿಳಿದ ಆರೋಪಿ ಕಾಸರಗೋಡು ನಿವಾಸಿ ಮೊಹಮ್ಮದ್ ಅಶ್ರಫ್ ಪರಕಟ್ಟ ಎಂಬಾತನಿಂದ 436 ಗ್ರಾಂ ತೂಕದ ರೂ. 11,66,300 ಬೆಲೆಯ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಆರೋಪಿಯು ವಾಚ್ ಬೆಲ್ಟ್, ಆಟದ ಕಾರ್, ಪೆನ್ ರಿಫಿಲ್, ಎಲೆಕ್ಟ್ರಿಕ್ ಪ್ಲಗ್, ಕೀ ಚೈನ್, ಮ್ಯಾಗ್ನೆಟಿಕ್ ಕೈಪಟ್ಟಿ, ಬ್ರಾಸ್ಲೆಟ್, ಅಲಾಮರ್್ ಕ್ಲಾಕ್, ಜಿಪ್ ಮುಂತಾದ ವಸ್ತುಗಳ ಒಳಗೆ ಚಿನ್ನವನ್ನು ಹುದುಗಿಟ್ಟು ಸಾಗಿಸುತ್ತಿದ್ದಾಗ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ.
ಎರಡನೇ ಪ್ರಕರಣದಲ್ಲೂ ಇದೇ ಮಾದರಿಯಲ್ಲಿ ಚಿನ್ನವನ್ನು ಸಾಗಿಸಲಾಗುತ್ತಿತ್ತು. ಆರೋಪಿ ಕಾಸರಗೋಡು ನಿವಾಸಿ ಸುಹೈಬ್ ತಲಂಗರಾ ಮೊಹಮ್ಮದ್ ಎಂಬಾತನಿಂದ ರೂ. 11,82,350 ಬೆಲೆಯ 442 ಗ್ರಾಂ. ಚಿನ್ನವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

 

555p--

555p

555p-

By Suddi9

Leave a Reply

Your email address will not be published. Required fields are marked *