ಕಾರ್ಕಳ: ಮುದ್ರಣ, ದೃಶ್ಯ, ವೆಬ್, ಪತ್ರಿಕೋದ್ಯಮದಲ್ಲಿ 25 ವರ್ಷಗಳ ಸಾರ್ಥಕ ಸೇವೆ ಸಲ್ಲಿಸಿರುವ ಪತ್ರಕರ್ತ ಆರ್.ಬಿ.ಜಗದೀಶ್ ಅವರಿಗೆ ಬೆಂಗಳೂರಿನ ಪತ್ರಕರ್ತರ ವೇದಿಕೆ 2019 ಸಾಲಿನ ರಾಜ್ಯಮಟ್ಟದ ಹೂಗಾರ್ ಮಾಧ್ಯಮ ಪ್ರಶಸ್ತಿಯನ್ನು ಜೂನ್ 1 ರಂದು ಬೆಂಗಳೂರಿನಲ್ಲಿ ಪ್ರದಾನಿಸಿತು.RB PRASHASTHI

ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಮನು ಬಳಿಗಾರ್ ಅವರು ಕಾರ್ಯಕ್ರಮ ಉದ್ಘಾಟಿಸಿ ವಿವಿಧ ಜಿಲ್ಲೆಗಳ 21 ಮಂದಿ ಪತ್ರಕರ್ತರಿಗೆ ಪ್ರಶಸ್ತಿ ನೀಡಿ ಗೌರವಿಸಿದರು.ಮಾಧ್ಯಮಗಳು ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸುತ್ತಿರುವುದರಿಂದ ಕನ್ನಡ-ನಾಡು-ನುಡಿಗೆ ಹೆಚ್ಚಿನ ಪ್ರೋತ್ಸಾಹ ಸಿಗುತ್ತಿದೆ. ಗ್ರಾಮೀಣ ಪ್ರದೇಶದ ತಾಲೂಕು ಮಟ್ಟದವರೆಗಿನ ಪತ್ರಕರ್ತರನ್ನು ಗುರುತಿಸಿ ಗೌರವಿಸುವುದು ಒಂದು ಸ್ತುತ್ಯರ್ಹ ಕೆಲಸ ಎಂದರು.

ಪತ್ರಕರ್ತರ ವೇದಿಕೆಯ ರಾಜ್ಯಾಧ್ಯಕ್ಷ ಮಹೇಶ್ ಬಾಬು ಸುರ್ವೆ, ಉಡುಪಿ ಜಿಲ್ಲಾಧ್ಯಕ್ಷ ಶೇಖರ ಅಜೆಕಾರು, ಬಾಗಲಕೋಟೆಯ ಸಿದ್ದಾಶ್ರಮದ ಮಾದುಲಿಂಗ ಮಹಾರಾಜರು, ವೈ ಮಂಜುನಾಥ್ ಮೊದಲಾದವರು ಉಪಸ್ಥಿತರಿದ್ದರು.
ಕ್ಯಾಷ್ಯನ್: ಪತ್ರಕರ್ತ ಆರ್.ಬಿ.ಜಗದೀಶ್ ಅವರಿಗೆ ಹೂಗಾರ ಮಾಧ್ಯಮ ಪ್ರಶಸ್ತಿಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಮನು ಬಳಿಗಾರ್ ನೀಡಿ ಗೌರವಿಸಿದರು.

By suddi9

Leave a Reply

Your email address will not be published. Required fields are marked *