ಕೈಕಂಬ;ಉನ್ನತೀಕರಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೊಳಿಯ ಕುಪ್ಪೆಪದವು ಇಲ್ಲಿ ಮುಖ್ಯೋಪಾದ್ಯಾಯಿನಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಪದ್ಮಾವತಿ ಎನ್.ರವರನ್ನು ಸರಕಾರ ವರ್ಗಾವಣೆ ಮಾಡಿದ್ದು ಅವರಿಗೆ ವಿದ್ಯಾರ್ಥಿಗಳು, ಪೋಷಕರು ಹಾಗೂ ಊರವರ ಪರವಾಗಿ ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಡಲಾಯ್ತು. ಸಮಾರಂಭದಲ್ಲಿ ಮುಖ್ಯೋಪಾದ್ಯಾಯಿನಿ ಪದ್ಮವತಿಯವರನ್ನು ಅಭಿನಂದಿಸಿ ಮಾತನಾಡಿದ ತಾ.ಪಂ.ಸದಸ್ಯ ನಾಗೇಶ್ ಶೆಟ್ಟಿ ಮುತ್ತೂರು ಪದ್ಮವತಿಯವರು ಎಲ್ಲರನ್ನು ಪ್ರೀತಿ ವಿಶ್ವಾಸ ಗೌರವದಿಂದ ಕಾಣುತ್ತಿದ್ದರು.
ಅವರ ಕಾರ್ಯನಿರ್ವಹಣೆಯಿಂದ ಶಾಲೆ ಉತ್ತಮ ರೀತಿಯಲ್ಲಿ ನಡೆಯುತ್ತಿತ್ತು. ವಿದ್ಯಾರ್ಥಿಗಳ ಅಫಾರ ಪ್ರೀತಿ ಗೌರವವನ್ನು ಪಡೆದುಕೊಂಡಿದ್ದರು. ಎಂದು ಅವರ ಸೇವೆಯನ್ನು ಕೊಂಡಾಡಿದರು. ಮುತ್ತೂರು ಗ್ರಾ.ಪಂ.ಸದಸ್ಯ ಸತೀಶ್ ಬಳ್ಳಾಜೆ ಮಾತನಾಡಿ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಇಳಿಕೆಯಾದ ಕಾರಣದಿಂದ ಮುಖ್ಯೋಪಾದ್ಯಾಯರನ್ನು ಸರಕಾರ ವರ್ಗಾವಣೆ ಮಾಡಿದೆ. ನಾವು ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸಿ ಮುಖ್ಯೋಪಾದ್ಯಾಯರನ್ನು ಉಳಿಸಿಕೊಳ್ಳುವಲ್ಲಿ ವಿಫಲರಾಗಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ವರ್ಗಾಯಿತ ಪದ್ಮಾವತಿಯವರಿಗೆ ಶಾಲು ಹೊದಿಸಿ ಸ್ಮರಣಿಕೆ ನೀಡಿ ಅಭಿಮಾನ ಪೂರ್ವಕವಾಗಿ ಗೌರವಿಸಲಾಯಿತು. ಮುತ್ತೂರು ಪಂಚಾಯತ್ ಅಧ್ಯಕ್ಷೆ ನಾಗಮ್ಮ, ಸದಸ್ಯರಾದ ಪ್ರವೀಣ್ ಆಳ್ವ ಗುಂಡ್ಯ, ವಸಂತಿ, ಎಸ್.ಡಿ.ಎಮ್.ಸಿ ಅಧ್ಯಕ್ಷ ನವೀನ್, ಸಮಿತಿ ಸದಸ್ಯರು, ರಾಜ ಲಕ್ಷ್ಮೀ ಪ್ರೆಂಡ್ಸ್ ಕ್ಲಬ್‍ನ ಅಧ್ಯಕ್ಷ ಹರೀಶ್, ಪ್ರಭಾರ ಮುಖ್ಯೋಪಾಧ್ಯಾಯಿನಿ ವಿನ್ನಿ ಪ್ರೇಡಾ ಪಿಂಟೋ ಮುಂತಾದವರು ಉಪಸ್ಥಿತರಿದ್ದರು. ಟಿ.ಜಿ.ಟಿ. ಶಿಕ್ಷಕ ಶಂಕರ್ ಶೆಟ್ಟಿಯವರು ಕಾರ್ಯಕ್ರಮ ನಿರ್ವಹಿಸಿದರು. ಸಹಶಿಕ್ಷಕಿ ಸುರೇಖಾ ವಂದಿಸಿದರು.
