ಕೈಕಂಬ: ಬಡಗಬೆಳ್ಳೂರು ಬಿಜೆಪಿ ಪಂಚಾಯತ್ ಸಮಿತಿಯ ವತಿಯಿಂದ ದಕ್ಷಿಣ ಕನ್ನಡ ಹಾಲು ಒಕ್ಕೂಟದ ನೂತನ ನಿರ್ದೇಶಕಿಯಾಗಿ ಆಯ್ಕೆಯಾದ ಬಡಗಬೆಳ್ಳೂರು ಮಹಿಳಾ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷೆಯಾಗಿರುವ ಸವಿತಾ ಎನ್ ಶೆಟ್ಟಿ ಅವರನ್ನು ಭಾನುವಾರ ಆದಿಶಕ್ತಿಚಾಮುಂಡೇಶ್ವರೀ ದೇವಾಸ್ಥಾನದ ವಠಾರದಲ್ಲಿ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಸದಸ್ಯತಾ ಅಭಿಯಾನ ಬಂಟ್ವಾಳ ವಿಧಾನ ಸಭಾಕ್ಷೇತ್ರ ಸಂಚಾಲಕ ದೇವಪ್ಪ ಪೂಜಾರಿ ,ಬಿಜೆಪಿ ರೈತಮೋರ್ಚಾ ಉಪಾಧ್ಯಕ್ಷ ರಮೇಶ್ ಪೂಜಾರಿ ಬಟ್ಟಾಜೆ,ಜಿಲ್ಲಾಕಾರ್ಯಕಾರಿಣಿ ಸದಸ್ಯೆ ವೇದಾವತಿ, ಆದಿಶಕ್ತಿ ಚಾಮುಂಡೇಶ್ವರಿ ದೇವಸ್ಥಾನದ ಕ್ಷೇತ್ರಾಧಿಕಾರಿ ಸಂದೀಪ್ ,ರತ್ನಾಕರ ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
