ಶ್ರೀರಾಮ ಪ್ರೌಢಶಾಲೆಯಲ್ಲಿ ಸುರಕ್ಷಾ ಸಮಿತಿ ವತಿಯಿಂದ ಖಾಸಗಿ ವಾಹನದಲ್ಲಿ ಬರುವ ಪೋಷಕರಿಗೆ ವಾಹನ ಸಂಚಾರಿ ನಿಯಮ ಮಾಹಿತಿಕಾರ್ಯಕ್ರಮ ನಡೆಯಿತು.
ಮಕ್ಕಳ ಹಿತದೃಷ್ಟಿಯಿಂದ ವಾಹನ ಸಂಚಾರಿ ನಿಯಮದ ಬಗ್ಗೆ ಪೋಷಕರು ತಿಳಿದುಕೊಂಡು ಮಕ್ಕಳಲ್ಲಿ ಜಾಗೃತಿ ಮೂಡಿಸುವುದುಅತ್ಯವಶ್ಯವಾಗಿದೆ. ಸಂಚಾರಿ ನಿಯಮವನ್ನು ಉಲ್ಲಂಘಿಸಿದಲ್ಲಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು.ಹಿರಿಯರು ಮಕ್ಕಳನ್ನು ವ್ಯಸನದಿಂದದೂರಇಡುವಂತೆ ಮಾಡಿ ವ್ಯಸನ ಮುಕ್ತರನ್ನಾಗಿ ಮಾಡಬೇಕು.

INTEX_ELYT_E6_20190701_104144 (1)

ಪೋಷಕರುತನ್ನ ಮಕ್ಕಳಿಗೆ ಅತಿಯಾದ ಪ್ರೀತಿತೋರಿಸುವುದರಿಂದ ಮಗುವಿನ ಭವಿಷ್ಯದ ಮೇಲೆ ಕೆಟ್ಟ ಪರಿಣಾಮ ಬೀರುವುದು.ಆದ್ದರಿಂದ ಮಗುವಿಗೆ ಸಣ್ಣ ವಯಸ್ಸಿನಲ್ಲೇ ಅಂದರೆ 18 ವಯಸ್ಸಿನ ಒಳಗಿನ ಮಕ್ಕಳಿಗೆ ಮೊಬೈಲು ಬಳಕೆ, ವಾಹನ ಚಲಾವಣೆ ಮಾಡುವುದನ್ನುಕೆಟ್ಟ ವ್ಯಸನಗಳನ್ನು ಮಾಡದೆ ಹಾಗೆ ಪೋಷಕರು ತಿಳಿ ಹೇಳಬೇಕೆಂದು ಬಂಟ್ವಾಳ ಸಂಚಾರಿಠಾಣೆ ಪಿ.ಎಸ್.ಐ. ರಾಮ ನಾಯಕ್‍ರವರು ಪೋಷಕರಿಗೆ ತಿಳಿಸಿದರು.ಇವರು ಶ್ರೀರಾಮ ಪ್ರೌಢಶಾಲೆಯಲ್ಲಿ ನಡೆದ ಸುರಕ್ಷಾ ಸಮಿತಿ ವತಿಯಿಂದ ನಡೆದ “ವಾಹನ ಸಂಚಾರಿ ನಿಯಮ ಮಾಹಿತಿ“ ಕಾರ್ಯಕ್ರಮದಲ್ಲಿ ಪೋಷಕರಿಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಬಂಟ್ವಾಳ ನಗರಠಾಣಾಎ.ಎಸ್.ಐ. ಆದ ಬಾಲಕೃಷ್ಣ,
ಶೈಲೇಶ್‍ಎ.ಎಸ್.ಐ. ಸಿಬ್ಬಂದಿಗಳಾದ ಮಲ್ಲೇಶ್ ಹಾಗೂ ಮಲ್ಲಿಕ್, ಮಾತೃಭಾರತಿ ಪ್ರಮುಖರಾದ ಮಮತಾ, ಶ್ರೀರಾಮ ಪ್ರೌಢಶಾಲಾ ಮುಖ್ಯಶಿಕ್ಷಕಿ ವಸಂತಿಕುಮಾರಿ, ಪ್ರೌಢಶಾಲಾ ಶಿಕ್ಷಕರು, ಖಾಸಗಿ ವಾಹನಗಳಲ್ಲಿ ಬರುವ ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಸಹಶಿಕ್ಷಕರಾದ ಜಿನ್ನಪ್ಪರವರು ಸ್ವಾಗತಿಸಿ, ಹಿರಿಯ ಶಿಕ್ಷಕಿ ಶಾಂಭವಿ ಇವರು ವಂದಿಸಿದರು.

By suddi9

Leave a Reply

Your email address will not be published. Required fields are marked *