ಗುರುಪುರ : ಗಂಜಿಮಠದ ಆಯುರ್‍ಸ್ಪರ್ಶ ಡಯಾಬಿಟಿಕ್ ಇನ್ನೋವೇಟಿವ್ ಫೌಂಡೇಶನ್(ರಿ) ಮತ್ತು ಆಯುರ್‍ಸ್ಪರ್ಶ ಆಯುರ್ವೇದ ಆಸ್ಪತ್ರೆ ಜಂಟಿ ಆಶ್ರಯದಲ್ಲಿ `ಮಧುಮೇಹ ತಡೆಗೆ ನಮ್ಮಯ ನಡಿಗೆ ವಿದ್ಯಾರ್ಥಿಗಳ ಕಡೆಗೆ’ ಅಭಿಯಾನದಂಗವಾಗಿ ಶುಕ್ರವಾರ ಗುರುಪುರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಮಧುಮೇಹ ಜಾಗೃತಿ ಕುರಿತು ಫೌಂಡೇಶನ್ ಅಧ್ಯಕ್ಷ ಡಾ. ಸತೀಶ್ ಶಂಕರ್ ಮಾಹಿತಿ ನೀಡಿದರು.

gur-june-21-gurpur colege(madhumeha)-2

ಮನೆಯೊಳಗಡೆ ಸುಮಾರು 30 ನಿಮಿಷ ವ್ಯಾಯಾಮ ಮಾಡುವುದು, ಸೈಕ್ಲಿಂಗ್, ಈಜುವುದರಿಂದ ಮಧುಮೇಹ ಸಹಿತ ಬಹುತೇಕ ಕಾಯಿಲೆ ತಡೆಗಟ್ಟಲು ಸಾಧ್ಯವಿದೆ. ವಿದ್ಯಾರ್ಥಿ ದೆಸೆಯಲ್ಲೇ ಈ ಜೀವನ ಕ್ರಮ ರೂಢಿಸಿಕೊಳ್ಳಬೇಕು. ಹಿತಮಿತ ಆಹಾರ ಕ್ರಮ ನಮ್ಮದಾಗಬೇಕು. ಇದರಿಂದ ಮಾನಸಿಕ ಒತ್ತಡರಹಿತ ಜೀವನ ಸಾಗಿಸಲು ಸಾಧ್ಯವಿದೆ. ಅತಿಯಾಸ ಹಸಿವು, ಬಾಯಾರಿಕೆ ಮತ್ತು ಸುಸ್ತು ಮಧುಮೇಹದ ಲಕ್ಷಣ. ಈ ಕಾಯಿಲೆ ವಿಷಮಗೊಂಡಲ್ಲಿ ಕಣ್ಣು, ಕಿಡ್ನಿ, ಮೆದುಳಿಗೆ ಆಘಾತದಂತಹ ಮಾರಕ ಕಾಯಿಲೆಗಳು ಬರುತ್ತದೆ. ಆದ್ದರಿಂದ ಈಗಿಂದೀಗಲೇ ಆರೋಗ್ಯದ ಬಗ್ಗೆ ಎಚ್ಚರವಹಿಸಿಕೊಳ್ಳಬೇಕು ಎಂದು ಡಾ. ಸತೀಶ್ ಶಂಕರ್ ಹೇಳಿದರು.

gur-june-21-gurpur colege(madhumeha)-1

ಮಧುಮೇಹದಲ್ಲಿ ಟೈಪ್ ಒಂದು ಮತ್ತು ಟೈಪ್ ಎರಡು ವಿಧಗಳಿವೆ. ಟೈಪ್ ಒಂದು ಶೇ 5ರಷ್ಟು ಮಂದಿಯಲ್ಲಿ ಕಾಣಿಸಿಕೊಂಡರೆ, ಟೈಪ್ ಎರಡು ಶೇ 95ರಷ್ಟು ಮಂದಿಯಲ್ಲಿದೆ. ಟೈಪ್ ಎರಡು ಮಧುಮೇಹ ಔಷಧಿ ಹಾಗೂ ಜೀವನ ಶೈಲಿ ಬದಲಿಸುವುದರಿಂದ ನಿಯಂತ್ರಿಸಬಹುದು ಎಂದರು.

ವೇದಿಕೆಯಲ್ಲಿ ಪತ್ರಕರ್ತ ಧನಂಜಯ ಗುರುಪುರ ಇದ್ದರು. ಉಪನ್ಯಾಸಕಿ ವಯೋಲಾ ಸಿಕ್ವೇರ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕ ಕೇಶವ ಪೂಜಾರಿ ವಂದಿಸಿದರು. ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಕೆಲವು ಮಹತ್ವದ ಪ್ರಶ್ನೆ ಕೇಳಿದರು. ಕಾಲೇಜಿನ ಉಪನ್ಯಾಸಕರು ಇದ್ದರು. ಮಧುಮೇಹದ ಬಗ್ಗೆ ಫೌಂಡೇಶನ್ ವತಿಯಿಂದ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ಹಾಗೂ ಚಿತ್ರಕಲಾ ಸ್ಪರ್ಧೆ ಆಯೋಜನೆ ಕುರಿತು ಮಾಹಿತಿ ನೀಡಲಾಯಿತು.

By Suddi9

Leave a Reply

Your email address will not be published. Required fields are marked *