ಮೂಡುಬಿದಿರೆ: ದೇಶದ ಪ್ರತಿಷ್ಠಿತ 23 ಐ.ಐ.ಟಿಗಳಲ್ಲಿ ಇಂಜಿನಿಯರಿಂಗ್ ಪ್ರವೇಶಗಾತಿಗಾಗಿ ನಡೆಯುವ ರಾಷ್ಟ್ರಮಟ್ಟದ ಜೆ.ಇ.ಇ ಅಡ್ವಾನ್ಸ್ಡ್ ಪರೀಕ್ಷೆಯಲ್ಲಿ ಆಳ್ವಾಸ್ ಪಿಯು ಕಾಲೇಜಿನ ಸಚಿನ್ ಅಖಿಲ ಭಾರತ ರ್ಯಾಂಕ್ (ಎಐಆರ್)-7ನೇ RANK ಪಡೆದು ಸಾಧನೆ ಮಾಡಿದ್ದಾರೆ.

alvas JEE
ಆಳ್ವಾಸ್ ಪಿಯು ಕಾಲೇಜಿನ ವಿದ್ಯಾರ್ಥಿಗಳಾದ ಶ್ರೀನಿವಾಸ್ ಎನ್. ಎಐಆರ್-332, ಗುಂಡಪ್ಪ ಎಐಆರ್-469, ಮಂಜುನಾಥ ಜಿ.ಎಸ್ ಎಐಆರ್-1044, ಅಲೋಕ್ ಕುಮಾರ್-1101, ಭರತ್ ಎ.ಕೋಲಿ ಎಐಆರ್-2029, ಅನುಷ್ ಎಐಆರ್-2980, ವರುಣ್ ಕುಮಾರ್ ಎಐಆರ್-3409, ವಸಂತ ಕುಮಾರಿ ಎನ್. ಎಐಆರ್-3725, ಅಕ್ಷಯ್ ಮುಗಲಿಹಾಲ್ ಎಐಆರ್-3763, ಚೇತನ್ ರಾಜು ಲಿಂಗಮೂರ್ತಿ ಎಐಆರ್-4366, ಬಿ.ಬಿ ವಿಶ್ವನಾಥ್ ಎಐಆರ್-4456, ಚೇತನ್ ಎಸ್.ರೆಡ್ಡಿ ಎಐಆರ್-4970, ಪ್ರಮತ್ ಮೂಗಿ ಎಐಆರ್-12484, ಕಿರಣ್ ಕುಮಾರ್ ಎಐಆರ್-17786, ಸುಹಾನ್ ಬಂಗೇರ ಎಐಆರ್-24186ನೇ RANK ಪಡೆದಿದ್ದಾರೆ. ರ್ಯಾಂಕ್ ವಿಜೇತ ವಿದ್ಯಾರ್ಥಿಗಳು ಹಾಗೂ ಅವರಿಗೆ ಮಾರ್ಗದರ್ಶನ ಮಾಡಿದ ಉಪನ್ಯಾಸಕರಿಗೆ ಅಭಿನಂದನೆಗಳು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಆಳ್ವಾಸ್ ಪಿಯು ಕಾಲೇಜಿನ ಪ್ರಾಂಶುಪಾಲ ಪ್ರೊ.ರಮೇಶ್ ಶೆಟ್ಟಿ, ಜೆ.ಇ.ಇ ಸಂಯೋಜಕರಾದ ಗಣನಾಥ ಶೆಟ್ಟಿ, ಅಶ್ವತ್ಥ್ ಎಸ್.ಎಲ್ ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *