ಮೂಡುಬಿದಿರೆ: ಕಾರ್ಕಳ‌- ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಬೆಳುವಾಯಿಯಲ್ಲಿ ಅತೀ ವೇಗದಿಂದ ಬಂದ ಕಾರು ರಸ್ತೆ ಬದಿಯಲ್ಲಿ ಪಾರ್ಕ್ ಮಾಡಲಾಗಿದ್ದ ಎರಡು ಬೈಕ್ ಗಳಿಗೆ ಗುದ್ದಿ ಬಳಿಕ ಟ್ರಾನ್ಸ್ ಫರ್ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ june 19 ಬೆಳಗ್ಗೆ ನಡೆದಿದೆ.

IMG-20190619-WA0044

IMG-20190619-WA0052

IMG-20190619-WA0039

IMG-20190619-WA0055

IMG-20190619-WA0053

IMG-20190619-WA0043

IMG-20190619-WA0042

IMG-20190619-WA0031

IMG-20190619-WA0054

ಮೂಡುಬಿದಿರೆ ಮೂಲದ ಮೂವರು ಕಾರ್ಕಳದಿಂದ ಮೂಡುಬಿದಿರೆ ಕಡೆಗೆ ಕಾರಿನಲ್ಲಿ ಅತೀ ವೇಗದಲ್ಲಿ ಬರುತ್ತಿದ್ದಾಗ ಬರುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ , ವಿರುದ್ಧ ದಿಕ್ಕಿನಲ್ಲಿದ್ದ ಬೈಕ್ ಗಳಿಗೆ ಡಿಕ್ಕಿ ಹೊಡೆದಿದೆ. ಕಾರು ಹಾಗೂ ಬೈಕ್ ಗಳು ತೀವ್ರ ರೀತಿಯಲ್ಲಿ ನುಜ್ಜುಗುಜ್ಜಾಗಿದ್ದು, ಟ್ರಾನ್ಸ್ ಫರ್ ಕಂಬಕ್ಕೂ ಹಾನಿಯಾಗಿ ಬೀಳುವ ಸ್ಥಿತಿಯಲ್ಲಿದೆ. ಡಿಕ್ಕಿ ಹೊಡೆದ ಕೂಡಲೆ ಕಾರಿನಲ್ಲಿದ್ದ ಒಬ್ಬ ಪರಾರಿಯಾಗಿದ್ದು, ಇಬ್ಬರನ್ನು ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದಾರೆ.
ಮೂಡುಬಿದಿರೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

By Suddi9

Leave a Reply

Your email address will not be published. Required fields are marked *