ಮೂಡುಬಿದಿರೆ: ರೋಟರಿ ಟೆಂಪಲ್‍ಟೌನ್ ನಡೆಸಿದ ವಾರ್ಷಿಕ ಚಟುವಟಿಕೆಗಳಿಗಾಗಿ ಒಟ್ಟು 23 ಪ್ರಶಸ್ತಿಗಳನ್ನು ಗಳಿಸುವ ಮೂಲಕ ರೋಟರಿ ಕ್ಲಬ್‍ನಲ್ಲಿ ಗರಿಷ್ಠ ಸಾಧನೆಯನ್ನು ಮಾಡಿದ ಕೀರ್ತಿಗೆ ಪಾತ್ರವಾಗಿದೆ.

Rotary Temple Town
ಮಂಗಳೂರಿನ ಕುಲಶೇಖರದ ಕೊರ್ಡೆಲ್ ಚರ್ಚ್ ಹಾಲ್‍ನಲ್ಲಿ ಶನಿವಾರ ನಡೆದ ಸಂತೃಪ್ತಿ 2019 ರೋಟರಿ ಜಿಲ್ಲಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರೋಟರಿ ಕ್ಲಬ್ ಟೆಂಪಲ್‍ಟೌನ್ ಅಧ್ಯಕ್ಷ ವಿನ್ಸೆಂಟ್ ಡಿಕೋಸ್ತ, ಕಾರ್ಯದರ್ಶಿ ಡೆನ್ನಿಸ್ ಪಿರೇರಾ ಹಾಗೂ ಸದಸ್ಯರು ರೋಟರಿ ಜಿಲ್ಲಾ ರಾಜ್ಯಪಾಲರಿಂದ ಪ್ರಶಸ್ತಿಗಳನ್ನು ಸ್ವೀಕರಿಸಿದರು.
ರೋಟರಿ ಕ್ಲಬ್ ಟೆಂಪಲ್‍ಟೌನ್ ಸದಸ್ಯತ್ವ ಅಭಿವೃದ್ಧಿ, ರೋಟರಿಯ ಘನತೆಯನ್ನು ಹೆಚ್ಚಿಸುವ ಕಾರ್ಯಕ್ರಮಗಳು, ಸಮುದಾಯದ ಬೆಳವಣಿಗೆಗೆ ಕೊಡುಗೆ, ಆರೋಗ್ಯ ಸಂಬಂದಿ ಕೆಲಸಗಳು, ಸಹಿತ ವಿವಿಧ ಸ್ತರಗಳಲ್ಲಿ ಮಾಡಿದ ಕೆಲಸಗಳ ಸಾಧನೆಯನ್ನು ಪರಿಗಣಿಸಿ ಈ ಪ್ರಶಸ್ತಿಗಳನ್ನು ನೀಡಲಾಗಿದೆ.

By Suddi9

Leave a Reply

Your email address will not be published. Required fields are marked *