ಸುದ್ದಿ9ಬಜ್ಪೆ: ಇಲ್ಲಿನ ಮುಖ್ಯ ಜಂಕ್ಷನ್ನಲ್ಲಿ ಬಜ್ಪೆ ಗ್ರಾಮ ಪಂಚಾಯತ್ ಹೀಗೊಂದು ಬ್ಯಾನರ್ ಬರೆಸಿ ಹಾಕಿದೆ. ವಿಪರ್ಯಾಸವೇನೆಂದರೆ `ಇಲ್ಲಿ ವಾಹನ ನಿಲ್ಲಿಸಬಾರದು’ ಎಂದು ಬರೆದ ಬ್ಯಾನರ್ ಹಿಂದೆ-ಮುಂದೆ ವಾಹನಗಳ ದಂಡೇ ನಿಂತಿರುತ್ತದೆ.

ಬಜ್ಪೆಯ ನೂತನ ಬಸ್ ನಿಲ್ದಾಣ ವಿಸ್ತಾರವಾಗಿದ್ದು ಪಾದಚಾರಿಗಳು ಹಾಗೂ ಬಸ್ಗಳ ಸಂಚಾರಕ್ಕೂ ಸಾಕಷ್ಟು ಸ್ಥಳಾವಕಾಶವಿದೆ. ಬಸ್ ತಂಗುದಾಣದ ಬಲಬದಿಯ ಖಾಲಿಜಾಗದಲ್ಲಿ ಟೂರಿಸ್ಟ್ ಟೆಂಪೋಗಳನ್ನು ಪಾಕರ್್ ಮಾಡಲಾಗುತ್ತದೆ. ಆದರೆ ಇಲ್ಲಿ ಸಾರ್ವಜನಿಕರು ತಮ್ಮ ಕಾರ್, ಬೈಕ್ಗಳನ್ನು ನಿಲ್ಲಿಸಿ ತೆರಳುವುದರಿಂದ ಟೂರಿಸ್ಟ್ ವಾಹನಗಳನ್ನು ನಿಲ್ಲಿಸಲು ಮತ್ತು ಕೊಂಡೊಯ್ಯಲು ಅಡಚಣೆಯುಂಟಾಗುತ್ತಿರುವುದರಂತೂ ಸತ್ಯ.

ಬಜ್ಪೆ ಗ್ರಾಮ ಪಂಚಾಯತ್ ಬ್ಯಾನರ್ ಬರೆಸಿ ಹಾಕುವ ಮೂಲಕ ಒಳ್ಳೆಯ ಕೆಲಸವೇನೋ ಮಾಡಿದೆ. ಆದರೆ ಬ್ಯಾನರ್ ಪಕ್ಕವೇ ಎಗ್ಗಿಲ್ಲದೆ ವಾಹನ ನಿಲ್ಲಿಸುವ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಾರ್ವಜನಿಕರು ದೂರುತ್ತಿದ್ದಾರೆ. ಕೆಲವರ್ಷಗಳ ಹಿಂದೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಮೋದ್ ಕುಮಾರ್ ಎಸ್.ಐ. ಆಗಿದ್ದ ಸಂದರ್ಭ ಬಜ್ಪೆ ಮುಖ್ಯಪೇಟೆಯಲ್ಲಿ `ನೋ ಪಾಕರ್ಿಂಗ್’ ಬೋಡರ್್ ಅಳವಡಿಸಿ ಪಾದಚಾರಿಗಳು ಹಾಗೂ ಮುಖ್ಯರಸ್ತೆಯಲ್ಲಿ ಸಂಚಾರ ನಡೆಸುವ ವಾಹನ ಸವಾರರಿಗೆ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಟ್ಟಿದ್ದರು. ಆದರೆ ಸದ್ಯದ ಪರಿಸ್ಥಿತಿ ಹೇಗಿದೆಯೆಂದರೆ ಬಜ್ಪೆ ಮುಖ್ಯರಸ್ತೆಯಲ್ಲಿ ವಾಹನಗಳ ಅಸ್ತವ್ಯಸ್ತ ಪಾಕರ್ಿಂಗ್, ಎಗ್ಗಿಲ್ಲದ ಸಂಚಾರದಿಂದ ಅಪಘಾತ ಭಯ ಸಾಮಾನ್ಯವಾಗಿದೆ. ಈ ಬಗ್ಗೆ ಗ್ರಾಮ ಪಂಚಾಯತ್ ಹಾಗೂ ಬಜ್ಪೆ ಠಾಣೆಯ ಪೊಲೀಸರು ಅಗತ್ಯ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹವೂ ಜನರಿಂದ ಕೇಳಿಬಂದಿದೆ.

 

4

1 (5)

2 (4)

3 (3)

By suddi9

Leave a Reply

Your email address will not be published. Required fields are marked *