ಕೈಕಂಬ:ಗ್ರಾಮಸ್ಥರು ಮತ್ತು ಪಂಚಾಯತ್ ಸದಸ್ಯರು ಮನಸ್ಸು ಮಾಡಿದರೆ ನರೇಗಾ ಯೋಜನೆಯನ್ನು ಹೇಗೆ ಯಶಸ್ವಿಯಾಗಿ ಅನುಷ್ಠಾನಗೊಳಿಸಬಹುದೆಂಬುದಕ್ಕೆ ಮಂಗಳೂರು ತಾಲೂಕಿನ ಮುತ್ತೂರು ಗ್ರಾಮ ಪಂಚಾಯತ್ ಒಂದು ಉತ್ತಮ ನಿದರ್ಶನ. 2018-19ನೇ ಸಾಲಿನ ನರೇಗಾ ಯೋಜನೆಯಲ್ಲಿ ಒಟ್ಟು 25ಲಕ್ಷಕ್ಕೂ ಮೀರಿದ ಕಾಮಗಾರಿಯನ್ನು ಪಂಚಾಯತ್ ವ್ಯಾಪ್ತಿಯಲ್ಲಿ ಅನುಷ್ಠಾನಗೊಳಿಸಲಾಗಿದೆ.
ಪಂಚಾಯತ್‍ನ ನೂತನ ಕಟ್ಟಡ ಮುತ್ತೂರು ನೂಣಾಲು ಎಂಬಲ್ಲಿ ಅಂಗನವಾಡಿ ಕಟ್ಟಡ, ಕುಳವೂರು ಶಾಲಾ ಆವರಣಗೋಡೆಯ ಕಾಮಗಾರಿ, ಪ್ರವಾಹ ತಡೆಗೋಡೆ ರಚನೆ ಮುತ್ತೂರು ಗ್ರಾಮದಲ್ಲಿ ನಾಲ್ಕು ತೆರೆದ ಬಾವಿಗಳ ನಿರ್ಮಾಣ ಕುಳವೂರು ಗ್ರಾಮದಲ್ಲಿ ತೆರೆದ ಬಾವಿ ನಿರ್ಮಾಣ, ಪಂಚಾಯತ್ ಬಸವಯೋಜನೆಯಲ್ಲಿ ಒಟ್ಟು 28 ಮನೆಗಳನ್ನು ನಿರ್ಮಿಸಲಾಗಿದೆಯಲ್ಲದೆ, ದನದ ಹಟ್ಟಿಗಳನ್ನು, ಕೋಳಿ ಸಾಕಾಣಿಕೆಗೆ ಕಟ್ಟಡ, ಕೊಳವೆ ಬಾವಿಗಳಿಗೆ ಜಲಮರು ಪೂರಕ ಘಟಕಗಳನ್ನು ನಿರ್ಮಿಸಲಾಗಿದೆ.
ಅಲ್ಲದೆ ರಸ್ತೆ ಕಾಂಕ್ರೀಟೀಕರಣವೂ ಸೇರಿದಂತೆ ಅನುಷ್ಠಾನಗೊಳಿಸಲಾದ ಎಲ್ಲಾ ಕಾಮಗಾರಿಗಳು ಯಶಶ್ವಿಯಾಗಿದೆ.ಪಂಚಾಯತ್‍ನ ನೂತನ ಕಟ್ಟಡ ಕಾಮಗಾರಿಯೂ ಅಂತಿಮ ಹಂತದಲ್ಲಿದೆ. ನರೇಗಾ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ ಪಂಚಾಯತ್‍ಗಳಲ್ಲಿ ಜಿಲ್ಲೆಯಲ್ಲಿ ಮುತ್ತೂರು ಪಂಚಾಯತ್ 9ನೇ ಸ್ಥಾನದಲ್ಲಿದೆ. ನರೇಗಾಯೋಜನೆ ಟೀಕೆಗೆ ಒಳಗಾಗುವುದು ಸಾಮಾನ್ಯ, ಕಳಪೆಕಾಮಗಾರಿ ಅಥವಾ ಕಾಮಗಾರಿ ವಿಳಂಬವಾಗುವುದು ಆದರೆ ಮುತ್ತೂರು ಪಂಚಾಯತ್ ಈ ಅಪವಾದಗಳಿಗೆ ಹೊರತಾಗಿ ಕಾಮಗಾರಿಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದೆ. ಈ ಯಶಸ್ಸಿನ ಹಿಂದೆ ಪಂಚಾಯತ್ ಸದಸ್ಯರು ಉತ್ಸಾಹದೊಂದಿಗೆ ಗ್ರಾಮಸ್ಥರ ಸಹಕಾರವು ಪ್ರಮುಖವಾಗಿದೆ.
ಪಂಚಾಯತ್ ಅಧ್ಯಕ್ಷರು ಮತ್ತು ಎಲ್ಲಾ ಸದಸ್ಯರ ಉತ್ಸಾಹ ಮತ್ತು ಹೆಚ್ಚಾಗಿ ಗ್ರಾಮಸ್ಥರ ಸಹಕಾರದಿಂದಾಗಿ ನಮ್ಮ ಪಂಚಾಯತ್ ವ್ಯಾಪ್ತಿಯಲ್ಲಿ ಅನುಷ್ಠಾನ ಗೊಳಿಸಲಾದ ನರೇಗಾ ಯೋಜನೆಯ ಕಾಮಗಾರಿಗಳು ಯಶಸ್ವಿಯಾಗಿ ಜಿಲ್ಲೆಯಲ್ಲಿ ಮುತ್ತೂರು ಪಂಚಾಯತ್ ಕಾಮಗಾರಿ ಅನುಷ್ಠಾನ 9ನೇ ಸ್ಥಾನದಲ್ಲಿದೆ.
ಶ್ರೀಮತಿ ವಸಂತಿ
ಪಂಚಾಯತ್ ಅಭಿವೃದ್ಧಿ ಅಧಿಕಾರಿ
ಮುತ್ತೂರು ಗ್ರಾಮ ಪಂಚಾಯತ್
