ಮುಂಬಯಿ: ಶುಭ ಶುಕ್ರವಾರದ (ಗುಡ್ ಫ್ರೆøಡೆ) ರಜೆಯನ್ನು ರದ್ದು ಮಾಡಲು ಸರಕಾರವು ನಡೆಸುತ್ತಿರುವ ಆಲೋಚನೆ ವಿರುದ್ದ ಮಂಗಳೂರು ಧರ್ಮಪ್ರಾಂತ್ಯದ ನಿಯೋಗವು ದ.ಕ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿತು. ಧರ್ಮಪ್ರಾಂತ್ಯದ ಶ್ರೇಷ್ಠ ಗುರು ವಂ| ಮ್ಯಾಕ್ಸಿಂ ನೊರೊನ್ಹಾ ಅವರ ಮುಂದಾಳತ್ವದ ನಿಯೋಗವು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರನ್ನು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿತು.
ಜಿಲ್ಲಾಧಿಕಾರಿಯವರು ಕ್ರೈಸ್ತ ಸಮುದಾಯದ ಈ ಬೇಡಿಕೆಯನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸುವುದಾಗಿ ತಿಳಿಸಿದರು. ನಿಯೋಗದಲ್ಲಿ ಮಂಗಳೂರು ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ವಂ| ವಿಕ್ಟರ್ ವಿಜೇಯ್ ಲೋಬೊ, ಕಥೋಲಿಕ ವಿದ್ಯಾ ಮಂಡಳಿಯ ಕಾರ್ಯದರ್ಶಿ ವಂ| ಆ್ಯಂಟನಿ ಶೆರಾ, ಶ್ರೀಸಾಮಾನ್ಯರ ಆಯೋಗದ ಕಾರ್ಯದರ್ಶಿ ವಂ| ಜೆ. ಬಿಕ್ರಾಸ್ತಾ, ಕೆನಾರಾ ಸಂಪರ್ಕಕೇಂದ್ರದನಿರ್ದೇಶಕ ವಂ| ರಿರ್ಚಾಡ್ ಡಿಸೋಜ, ಕಥೋಲಿಕ್ ಕೌನ್ಸಿಲ್ ಆಫ್ ಇಂಡಿಯಾದ ಸದಸ್ಯ ಸುಶೀಲ್ ನೊರೊನ್ಹಾ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ರೋಯ್ ಕ್ಯಾಸ್ತಲಿನೊ ಉಪಸ್ಥಿತರಿದ್ದರು.


