ಬಂಟ್ವಾಳ: ಪುರಸಭಾ ವ್ಯಾಪ್ತಿಯ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವ ದೆಸೆಯಲ್ಲಿ ಶಾಸಕ ರಾಜೇಶ್ ನಾಯ್ಕ್ ಅವರು ಕೈಗೊಂಡ ಮಹತ್ವದ ಕಾರ್ಯ ಫಲ ನೀಡಿದ್ದು, ನೇತ್ರಾವತಿಯಲ್ಲಿ ಕೊಂಚ ನೀರು ಹರಿಯಲಾರಂಭಿಸಿದೆ.
ಸರಪಾಡಿ ಎಂ.ಆರ್.ಪಿ.ಎಲ್.ಡ್ಯಾಂ ಬಳಿ ಡ್ರಿಜ್ಜಿಂಗ್ ಮೆಷಿನ್ ಬಳಸಿ ಹೂಳು ಮೇಲೆತ್ತುತಿದ್ದಂತೆ ಅಲ್ಲಲ್ಲಿ ಶೇಖರಣೆಯಾಗಿದ್ದ ನೀರು ಹೊರಗೆ ಹರಿಯಿ ತೊಡಗಿದೆ. ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಇದೇ ಮೊದಲ ಬಾರಿ
ಕುಡಿಯುವ ನೀರಿನ ಸಮಸ್ಯೆ ಉಂಟಾದ ಹಿನ್ನಲೆಯಲ್ಲಿ ಶಾಸಕ ರಾಜೇಶ್ ನಾಯ್ಕ್ ಮತ್ತು ಅಧಿಕಾರಿಗಳ ತಂಡ ಎಂ.ಆರ್.ಪಿ.ಎಲ್ ಡ್ಯಾಂಗೆ ತೆರಳಿ ಪರಿಶೀಲನೆ ನಡೆಸಿದ್ದು,ಈ ಸಂದರ್ಭ ಇಲ್ಲಿ ನೀರು ಸ್ಟಾಕ್ ಇದ್ದರೂ ಕೆಳಭಾಗಕ್ಕೆ ಹರಿದು ಹೋಗಲು ವ್ಯವಸ್ಥೆ ಇಲ್ಲದೆ ಉಪಯೋಗ ಕ್ಕೆ ಸಿಗುತ್ತಿಲ್ಲ ಎಂಬುದನ್ನು ಮನಗಂಡಿದ್ದರು.
ಈ ಹಿನ್ನಲೆಯಲ್ಲಿ ಎಂ.ಆರ್.ಪಿ.ಎಲ್.ಡ್ಯಾಂ ಬಳಿ ತುಂಬಿದ್ದ ಹೂಳುನ್ನು ತೆರವುಗೊಳಿಸಲು ಸೂಚಿಸಲಾಗಿತ್ತು.ಅದರಂತೆ ಅಧಿಕಾರಿಗಳು ತಕ್ಷಣ ಕಾರ್ಯಪೃವತ್ತರಾಗಿ ಡ್ರಜ್ಜಿಂಗ್ ಮೆಷಿನ್ ತರಿಸಿ ಹೂಳು ತೆರವುಗೊಳಿಸಲಾರಂಭಿಸಲಾಗಿತ್ತು.ಪರಿ
