ಬಂಟ್ವಾಳ : ರಕ್ತ ಸಂಬಂಧಿಗಳ ಹೆಸರಿನಲ್ಲಿ ಜಮೀನು ಇದ್ದಲ್ಲಿ ಒಪ್ಪಿಗೆ ಪತ್ರ ಆಧಾರದಲ್ಲಿ ಬಸವ ವಸತಿ ಯೋಜನೆ ಮಂಜೂರಾತಿಗೊಳಿಸಬೇಕೆಂದು ಬಂಟ್ವಾಳ ತಾ.ಪಂ.ಸದಸ್ಯ ಪ್ರಭಾಕರ ಪ್ರಭು ಅವರು ಮುಖ್ಯಮಂತ್ರಿ ಕುಮಾರಸ್ವಾಮಿ ಅವರಲ್ಲಿ ಮನವಿ ಮಾಡಿದ್ದಾರೆ.ಈ ಹಿಂದೆ ರಾಜೀವಗಾಂಧಿ ವಸತಿ ನಿಗಮ ನಿಯಮಿತ ಮುಖಾಂತರ ವಸತಿ ರಹಿತರಿಗೆ ಮಂಜೂರಾತಿ ಆಗುತ್ತಿರುವ ಬಸವ ವಸತಿ ಫಲಾನುಭವಿಗಳಿಗೆÀ ರಕ್ತ ಸಂಬಂ„ಗಳ ಹೆಸರಿನಲ್ಲಿ ಜಮೀನು ಇದ್ದಲ್ಲಿ ಅವರ ಒಪ್ಪಿಗೆ ಪತ್ರ ಮುಖಾಂತರ ಯೋಜನೆ ಮಂಜೂರಾತಿಯಾಗುತ್ತಿತ್ತು.
ಹೀಗೆ ಅನೇಕ ಮಂದಿ ಅರ್ಹ ಫಲಾನುಭವಿಗಳು ಕರಾವಳಿ ಜಿಲ್ಲೆ ಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಬಸವ ವಸತಿ ಯೋಜನೆಯಲ್ಲಿ ಮನೆ ನಿರ್ಮಿಸಿಕೊಳ್ಳುತ್ತಿದ್ದರು. ಇದೀಗ ನಿಗಮವು ಹೊರಡಿಸಿದ ಆದೇಶದಂತೆ ಬಸವ ವಸತಿ ಯೋಜನೆ ಅಪೇಕ್ಷಿತ ಫಲಾನುಭವಿಯ ಅಥವಾ ಗಂಡನ ಹೆಸನಲ್ಲಿ ನಿವೇಶನ ಯಾ ಜಮೀನು ಇದ್ದಲ್ಲಿ ಮಾತ್ರ ವಸತಿ ಯೋಜನೆಯ ಮನೆ ಮಂಜೂರಾತಿಗೆ ಅವಕಾಶ ಕಲ್ಪಿಸಿ ಸ್ವಂತ ಜಮೀನು ಇಲ್ಲದವರಿಗೆ ಅವಕಾಶ ಇಲ್ಲ ಎಂದು ಸೂಚಿಸಲಾಗಿದೆ.ಇದರಿಂದ ಬಂಟ್ವಾಳ ತಾಲೂಕು ಸೇರಿದಂತೆ ಕರಾವಳಿಯ ದಕ್ಷಿಣ ಕನ್ನಡ , ಉಡುಪಿ ಜಿಲ್ಲೆಯಲ್ಲಿ ಸ್ವಂತ ನಿವೇಶನ, ಜಮೀನು ಇಲ್ಲದ ಅನೇಕ ಮಂದಿ ಬಡ ವಸತಿ ರಹಿತ ಫಲಾನುಭವಿಗಳು ವಸತಿ ಯೋಜನೆಯಿಂದ ವಂಚಿತರಾಗಿದ್ದಾರೆ. ಹಾಗೂ ಜಿಲ್ಲೆಯಲ್ಲಿ ವಸತಿ ಯೋಜನೆ ಪ್ರಗತಿ ಕುಂಠಿತಗೊಳ್ಳಲಿದೆ.
ಆದುದರಿಂದ ಕರಾವಳಿಯ ಜಿಲ್ಲೆಗಳ ವಾಸ್ತವ ಅಂಶವನ್ನು ಪರಿಗಣಿಸಿ ಬಸವ ವಸತಿ ಸೇರಿದಂತೆ ಯಾವುದೇ ವಸತಿ ಯೋಜನೆಗಳಿಗೆ ಫಲಾನುಭವಿಯ ರಕ್ತ ಸಂಬಂ„ಗಳ ಹೆಸರಿನಲ್ಲಿ ಜಮೀನು ಇದ್ದಲ್ಲಿ ಈ ಹಿಂದೆ ಇದ್ದಂತೆ ಸಂಬಂ„ಕರ ಒಪ್ಪಿಗೆ ಪತ್ರ ಆಧಾರದಲ್ಲಿ ವಸತಿ ಮಂಜೂರಾತಿಗೆ ಅವಕಾಶ ಮಾಡಿಕೊಡಲು ರಾಜೀವ ಗಾಂ„ ವಸತಿ ನಿಗಮಕ್ಕೆ ಸೂಕ್ತ ನಿರ್ದೇಶನ ನೀಡುವಂತೆ ಪ್ರಭಾಕರ ಪ್ರಭು ಅವರು ಮುಖ್ಯಮಂತ್ರಿ ಕುಮಾರ ಸ್ವಾಮಿ, ವಿಧಾನ ಪರಿಷತ್ನ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಬಂಟ್ವಾಳ ವಿಧಾನಸಭಾ ಕ್ಷೇತ್ರದ ಶಾಸಕ ರಾಜೇಶ್ ನಾೈಕ್ ಅವರಲ್ಲಿ ಪತ್ರ ಮುಖೇನ ವಿನಂತಿಸಿದ್ದಾರೆ.
