mugs
ಮುಂಬೈ: ವಿದೇಶಿ ಬ್ಯಾಂಕ್ಗಳಲ್ಲಿ ಸಂಗ್ರಹವಾಗಿರುವ ಭಾರತೀಯರ ಕಪ್ಪು ಹಣವನ್ನು ಮರಳಿ ಭಾರತಕ್ಕೆ ತರುವುದು ನಮ್ಮ ಪ್ರಥಮ ಆದ್ಯತೆ ಮತ್ತು ಈ ರೀತಿ ತಂದ ಹಣದಲ್ಲಿ ಶೇ. ಐದರಿಂದ ಹತ್ತು ಭಾಗವನ್ನು ಪ್ರಾಮಾಣಿಕವಾಗಿ ತೆರಿಗೆ ಪಾವತಿಸುವ ವೇತನ ಶ್ರೇಣಿಯ ಜನರಿಗೆ ಹಂಚುವುದಾಗಿ ಬಿಜೆಪಿ ಪ್ರಧಾನಿ ಅಭ್ಯಥರ್ಿ ನರೇಂದ್ರ ಮೋದಿ ತಿಳಿಸಿದ್ದಾರೆ. ದೇಶದ ಒಂದು ಸಾವಿರ ಕಡೆಗಳಲ್ಲಿ ನಡೆದ ‘ಚಾಯ್ ಪೆ ಚಚರ್ಾ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಈ ವಿಷಯವನ್ನು ಪ್ರಸ್ತಾಪಿಸಿದರು.
ಕಪ್ಪು ಹಣವೆಂಬುದು ದೇಶದ ಬಹುದೊಡ್ಡ ಸಮಸ್ಯೆಯಾಗಿದೆ. ಕೇಂದ್ರದಲ್ಲಿ ಬಿಜೆಪಿ ಸರಕಾರ ಬಂದ ನಂತರ ಈ ಹಣವನ್ನು ವಾಪಾಸು ತರುವುದು ನಮ್ಮ ಮುಖ್ಯ ಉದ್ದೇಶವಾಗಲಿದೆ. ಇದಕ್ಕಾಗಿ ನಾನು ವೈಯಕ್ತಿಕವಾಗಿ ಶ್ರಮಿಸುವುದಾಗಿ ಮೋದಿ ಹೇಳಿದರು. ಕೆಟ್ಟ ಸರಕಾರವು ಡಯಾಬಿಟೀಸ್ ಇದ್ದಂತೆ ಅದರಿಂದ ಇತರ ಅನೇಕ ರೋಗಗಳು ಬರುತ್ತವೆ ಎಂದು ಮೋದಿ ಕಾಂಗ್ರೆಸ್ ಸರಕಾರವನ್ನು ಉದ್ದೇಶಿಸಿ ವ್ಯಂಗ್ಯವಾಡಿದರು. ಕಪ್ಪು ಹಣವು ದೇಶದ ಬಡವರಿಗೆ ಸೇರಿದ್ದು ಹಾಗಾಗಿ ಅದನ್ನು ಮರಳಿ ಅವರಿಗೆ ನೀಡುವುದೇ ಬಿಜೆಪಿಯ ಮೂಲ ಧ್ಯೇಯ ಎಂದು ಮೋದಿ ಇದೇ ವೇಳೆ ಘೊಷಿಸಿದರು.

By suddi9

Leave a Reply

Your email address will not be published. Required fields are marked *